ವಿಶ್ವಕಪ್ : ನ್ಯೂಜಿಲೆಂಡ್ ತಂಡ ಪ್ರಕಟ, ಟಾಮ್ ಹೊಸ ಮುಖ

ವೆಲ್ಲಿಂಗ್ಟನ್, ಏಪ್ರಿಲ್ 04: ಐಸಿಸಿ ವಿಶ್ವಕಪ್ ಕ್ರಿಕೆಟ್ 2019ಗೆ ದಿನಗಣನೆ ಆರಂಭವಾಗಿದೆ. ವಿಶ್ವಕಪ್ ನಲ್ಲಿ ಆಡಲಿರುವ 15 ಮಂದಿ ಸದಸ್ಯರ ತಂಡವನ್ನು ನ್ಯೂಜಿಲೆಂಡ್ ಪ್ರಕಟಿಸಿದೆ. ತಂಡದಲ್ಲಿ ಟಾಮ್ ಬ್ಲಂಡೆಲ್ ಹೊಸ ಮುಖವಾಗಿದ್ದರೆ, ಇಶ್ ಸೋಧಿ ಸ್ಪಿನ್ನರ್ ಆಗಿ ಸ್ಥಾನ ಪಡೆದುಕೊಂಡಿದ್ದಾರೆ.
28 ವರ್ಷ ವಯಸ್ಸಿನ ಟಾಮ್ ಬ್ಲಂಡೆಲ್ ಅವರು ಇನ್ನು ನ್ಯೂಜಿಲೆಂಡ್ ಪರ ಏಕದಿನ ಪಂದ್ಯವನ್ನು ಆಡಿಲ್ಲ. ಆದರೆ, ಮೇ ತಿಂಗಳಿನಿಂದ ಆರಂಭವಾಗಲಿರುವ ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿ ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ರಾಸ್ ಟೇಲರ್ ಅವರಿಗೆ ಇದು ನಾಲ್ಕನೇ ವಿಶ್ವಕಪ್ ಆಗಿದ್ದರೆ, ನಾಯಕ ಕೇನ್ ವಿಲಿಯಮ್ಸನ್, ವೇಗಿ ಟಿಮ್ ಸೌಥಿ, ಮಾರ್ಟಿನ್ ಗಪ್ಟಿಲ್ ಅವರಿಗೆ ಮೂರನೇ ವಿಶ್ವಕಪ್ ಪಂದ್ಯಾವಳಿಯಾಗಲಿದೆ.
ಜೂನ್ 01ರಂದು ಕಾರ್ಡಿಫ್ ನಲ್ಲಿ ಶ್ರೀಲಂಕಾ ವಿರುದ್ಧ ಕಿವೀಸ್ ತಂಡವು ತನ್ನ ಮೊದಲ ವಿಶ್ವಕಪ್ ಪಂದ್ಯವನ್ನಾಡಲಿದೆ.
ನ್ಯೂಜಿಲೆಂಡ್ ತಂಡ : ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರಾಂಡ್ ಹೊಮ್, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಾಥಮ್ (ವಿಕೆಟ್ ಕೀಪರ್), ಕಾಲಿನ್ ಮನ್ರೋ, ಜಿಮ್ಮಿ ನೀಶಂ, ಹೆನ್ರಿ ನಿಕೋಲ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications