Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳ ಅಬ್ಬರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕತೆ ದಿನಕಳೆದಂತೆ ಹೆಚ್ಚುತ್ತಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿ ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳು ಸಹ ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಲೀಸ್ಟ್‌ ದಿನ ಕಳೆದಂತೆ ದೊಡ್ಡದಾಗುತ್ತಲೇ ಇದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಬ್ಬರಿಸುವ ಸ್ಟಾರ್‌ಗಳು ತಂಡಕ್ಕೆ ಆಧಾರವಾಗಿದ್ದಾರೆ. ಈ ಮೂಲಕ ತಂಡಗಳು ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಆಟವಾಡಿ ಮಿಂಚು ಹರಿಸುತ್ತಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳ ಹಾವಳಿ ಜೋರಾಗಿದೆ. ಆರ್‌ಸಿಬಿ ಯುವ ವೇಗದ ಬೌಲರ್‌ ಅಭಿನಂದನ್ ಸಿಂಗ್ ಬಿಗುವಿನ ದಾಳಿ ನಡೆಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇನ್ನು ಗುಜರಾತ್‌ ಟೈಟಾನ್ಸ್‌ ಪರ ಬೌಲಿಂಗ್ ನಡೆಸುವ ಅಶೋಕ್‌ ಶರ್ಮಾ ಸಹ ಅಬ್ಬರಿಸುತ್ತಿದ್ದಾರೆ. ಈ ಆಟಗಾರರು ವಿಕೆಟ್‌ ಬೇಟೆ ನಡೆಸುವಲ್ಲಿ ಕೊಂಚ ಹಿಂದೆ ಬಿದ್ದಿದ್ದರೂ ಸಹ ರನ್‌ಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಬ್ಯಾಟಿಂಗ್‌ನಲ್ಲೂ ಯುವ ಬ್ಯಾಟರ್‌ಗಳು ಸಹ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಹಲವು ಅನ್‌ಕ್ಯಾಪ್ಡ್ ಆಟಗಾರರನ್ನು ಕಾಣಬಹುದು.

Uncapped Players

ಈ ಬಾರಿಯ ಐಪಿಎಲ್‌ನ ಆರೆಂಜ್ ಕ್ಯಾಪ್‌ ಪಟ್ಟಿಯಲ್ಲಿ ಸದ್ಯ ಯಶಸ್ವಿ ಜೈಸ್ವಾಲ್‌ ಮುಂಚೂಣಿಯಲ್ಲಿದ್ದಾರೆ. ಇವರ ಹಿಂದೆಯೆ ಸಮೀರ್ ರಿಜ್ವಿ ಹಾಗೂ ಕೆಕೆಆರ್ ತಂಡದ ಅಂಗ್‌ಕ್ರುಶ್ ರಘುವಂಶಿ ಕೂಡ ಇದ್ದಾರೆ. ಯಶಸ್ವಿ ಜೈಸ್ವಾಲ್ ಮೂರು ಪಂದ್ಯಗಳಲ್ಲಿ 170 ರನ್ ಗಳಿಸಿದ್ದಾರೆ. ಸಮೀರ್ ರಿಜ್ವಿ ಮೂರು ಪಂದ್ಯಗಳಲ್ಲಿ 160 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಕೆಕೆಆರ್‌ನ ಅಂಗ್‌ಕ್ರಿಶ್‌ ರಘುವಂಶಿ ನಾಲ್ಕು ಪಂದ್ಯಗಳಲ್ಲಿ 155 ರನ್ ಗಳಿಸಿದ್ದಾರೆ.

ಅನ್‌ಕ್ಯಾಪ್ಡ್‌ ಪ್ಲೇಯರ್‌ಗಳ ಮಿಂಚು

ಇನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ವೈಭವ್ ಸೂರ್ಯವಂಶಿ ಅವರ ಹೆಸರು ಸಹ ಇದೆ. ಇವರು ಆಡಿದ 3 ಪಂದ್ಯಗಳಲ್ಲಿ 122 ರನ್‌ ಸಿಡಿಸಿದ್ದಾರೆ. ಈ ವರೆಗೆ ಇವರು ಈ ಆವೃತ್ತಿಯಲ್ಲಿ 10 ಬೌಂಡರಿಗಳು ಮತ್ತು 11 ಸಿಕ್ಸರ್‌ಗಳಿವೆ.

ಇದೇ ಪಟ್ಟಿಗೆ ಎಂಟ್ರಿ ನೀಡಲು ಮುಕುಲ್ ಚೌಧರಿ ಪ್ಲ್ಯಾನ್ ಮಾಡಿದ್ದಾರೆ. ಇವರು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 14 ರನ್‌ಗಳಿಗೆ ಔಟಾದರು. ಎಸ್‌ಆರ್‌ಹೆಚ್ ವಿರುದ್ಧ ಎರಡು ರನ್‌ಗಳಿಗೆ ಅಜೇಯರಾಗಿ ಉಳಿದರು. ಗುರುವಾರ, ಅವರು ಅಜೇಯ 54 ರನ್ ಗಳಿಸಿ ತಮ್ಮ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ಈ ಅನ್‌ಕ್ಯಾಪ್ಡ್ ಆಟಗಾರರು ಕಡಿಮೆ ಬೆಲೆಗೆ ತಂಡಗಳಿಗೆ ಸೇರಿಕೊಂಡಿದ್ದು, ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಅವರ ಪ್ರದರ್ಶನ ಹೀಗೆಯೇ ಮುಂದುವರಿದರೆ, ಅವರು ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಆಡುವ ಅವಕಾಶ ಪಡೆಯಬಹುದು.

Story first published: Friday, April 10, 2026, 13:58 [IST]
Other articles published on Apr 10, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+