For Quick Alerts
ALLOW NOTIFICATIONS  
For Daily Alerts
 

Asia Cup T20: ಇಂಗ್ಲೆಂಡ್‌ನಲ್ಲಿ ಅಬ್ಬರಿಸಿದ ಸ್ಟಾರ್ಸ್‌ಗೆ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಸ್ಥಾನ ಲಭಿಸುವುದು ಡೌಟ್

ಇನ್ನೇನು ಕೆಲವೇ ದಿನಗಳಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗುತ್ತದೆ. ಈ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಸ್ಥಾನ ಲಭಿಸುತ್ತದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಇಂಗ್ಲೆಂಡ್‌ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಟಗಾರರಿಗೂ ಈ ತಂಡದಲ್ಲಿ ಸ್ಥಾನ ಸಿಗುತ್ತದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಹಾಗೆಲ್ಲಾ ಇಂಗ್ಲೆಂಡ್‌ ಪ್ರವಾಸದಲ್ಲಿ ಮಿಂಚಿದ ಯಾವೆಲ್ಲಾ ಆಟಗಾರರು ಅವಕಾಶ ವಂಚಿತರಾಗಬಹುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಭರವಸೆಯ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ರು. ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್ ಆರ್ಭಟ ನಡೆಸಿ ಅತಿ ಹೆಚ್ಚು ರನ್ ಕಲೆ ಹಾಕಿದ ಹಿರಿಮೆ ತನ್ನದಾಗಿಸಿಕೊಂಡಿದ್ದಾರೆ. ಇನ್ನು ಇವರನ್ನು ಬಿಟ್ಟು ರಿಷಭ್ ಪಂತ್ ಹಾಗೂ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್‌ ಸ್ಥಿರ ಪ್ರದರ್ಶನ ನೀಡಿ ತಂಡ ಸಮಬಲ ಸಾಧಿಸುವಲ್ಲಿ ಶ್ರಮಿಸಿದ್ದರು.

Uncertainty looms for star players after England tour Will they make it to Asia Cup squad

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಿಷಭ್‌ ಪಂತ್, ರನ್‌ ಮಹಲ್ ಕಟ್ಟಿದ್ದರು. ಇವರು ಇಂಗ್ಲೆಂಡ್ ಒಂದೇ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಹಿರಿಮೆ ಹೊಂದಿದ್ದಾರೆ. ಅಲ್ಲದೆ ಇವರ ಸ್ಫೋಟಕ ಆಟಕ್ಕೆ ಆಂಗ್ಲರು ಸಹ ಬೆಚ್ಚಿಬಿದ್ದಿದ್ರು. ಈ ಪ್ರವಾಸದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಪಂತ್ ಬ್ಯಾಟಿಂಗ್ ಮಾಡುವಾಗ ಕ್ರಿಸ್‌ ವೋಕ್ಸ್‌ ಎಸೆದ ಚೆಂಡು ಅವರ ಪಾದಕ್ಕೆ ಬಡಿದು ಗಾಯಕ್ಕೆ ತುತ್ತಾಗಿದ್ರು. ಹೀಗಾಗಿ ಐದನೇ ಟೆಸ್ಟ್‌ ಪಂದ್ಯ ಆಡಿರಲಿಲ್ಲ. ಇವರು ಇಂಗ್ಲೆಂಡ್ ಪ್ರವಾಸದಲ್ಲಿ 479 ರನ್‌ ಸಿಡಿಸಿದ್ದಾರೆ.

ವಿಕೆಟ್‌ ಕೀಪರ್ಸ್‌ಗೆ ಗೇಟ್ ಪಾಸ್‌

ರಿಷಭ್‌ ಪಂತ್ ಅವರ ಗಾಯ ಇನ್ನು ಚೇತರಿಕೆ ಕಾಣುತ್ತಿದ್ದು, ಇವರು ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ. ಇನ್ನು ಇವರ ಬದಲಿಗೆ ಸಂಜು ಸ್ಯಾಮ್ಸನ್‌ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇವರು ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಹೀಗಾಗಿ ಇವರು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ಆಯ್ಕೆ ಆಗಲಿದ್ದಾರೆ.

Uncertainty looms for star players after England tour Will they make it to Asia Cup squad

ಇಂಗ್ಲೆಂಡ್ ಪ್ರವಾಸದಲ್ಲಿ ಆರಂಭಿಕರಾಗಿ ಟೆಸ್ಟ್‌ ಪಂದ್ಯಗಳಲ್ಲಿ ಆಡಿ ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ಸಫಲವಾಗಿರುವ ಕೆಎಲ್ ರಾಹುಲ್ ಸಹ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಡೌಟ್ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿಕ್ಕ ಅವಕಾಶವನ್ನು ಬಳಸಿಕೊಂಡು ಯುವಕರು ಅಬ್ಬರಿಸುತ್ತಿದ್ದಾರೆ. ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಶುಭಮನ್‌ ಗಿಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಬ್ಯಾಕ್‌ ಅಪ್‌ ಓಪನರ್‌ ಆಗಿ ತಂಡಕ್ಕೆ ಸೇರಿಕೊಳ್ಳಬಹುದು. ಹೀಗಾಗಿ ಕೆಎಲ್ ರಾಹುಲ್ ಏಷ್ಯಾ ಕಪ್‌ನಲ್ಲಿ ಸ್ಥಾನ ಪಡೆಯುವುದು ಡೌಟ್ ಎನ್ನಲಾಗುತ್ತಿದೆ. ಏಷ್ಯಾ ಕಪ್ಗೆ ತಂಡವನ್ನು ಪ್ರಕಟಿಸಿದಾಗ ಇದಕ್ಕೆಲಾ ಉತ್ತರ ಸಿಗಲಿದೆ.

Story first published: Friday, August 15, 2025, 16:21 [IST]
Other articles published on Aug 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+