Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under 19 Asia Cup: ಆಫ್ಘಾನ್ ಮಣಿಸಿದ ಭಾರತ ಶುಭಾರಂಭ

ಅಂಡರ್ 19 ಏಷ್ಯಾ ಕಪ್ 2023 ಆರಂಭವಾಗಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮೊದಲಯ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 50 ಓವರ್‌ ಗಳಲ್ಲಿ 173 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟೀಮ್ ಇಂಡಿಯಾ 37.3 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

Under 19 Asia Cup: Team India defeated Afghanistan by 7 wickets in the first match

ಭಾರತದ ಪರ ಅರ್ಶಿನ್ ಕುಲಕರ್ಣಿ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 4 ಬೌಂಡರಿಗಳ ನೆರವಿನಿಂದ 70 ರನ್ ಗಳಿಸಿದರು. ಕುಲಕರ್ಣಿ ಬೌಲಿಂಗ್‌ನಲ್ಲೂ ಮಿಂಚಿದರು. ಅರ್ಶಿನ್ 8 ಓವರ್‌ಗಳಲ್ಲಿ 29 ರನ್ ನೀಡಿ 3 ವಿಕೆಟ್ ಪಡೆದರು. ಉಳಿದಂತೆ ಟೀಮ್ ಇಂಡಿಯಾ ಪರ ರಾಜ್ ಲಿಂಬಾನಿ 10 ಓವರ್‌ಗಳಲ್ಲಿ 46 ರನ್ ನೀಡಿ 3 ವಿಕೆಟ್ ಪಡೆದರು.

ಅಫ್ಘಾನಿಸ್ತಾನ ತಂಡದ ಪರ ಆರಂಭಿಕರಾದ ಜಮ್ಶೆಡ್ ಜದ್ರಾನ್ 43 ರನ್ ಗಳಿಸಿದರು. ನುಮನ್ ಶಾ 25 ರನ್‌ಗಳ ಇನಿಂಗ್ಸ್‌ ಕಟ್ಟಿದರು. ನಾಯಕ ನಾಸೀರ್ ಖಾನ್ 5 ರನ್ ಗಳಿಸಿ ಔಟ್ ಆದರು. ಮೊಹಮ್ಮದ್ ಯೂನಸ್ 26 ಹಾಗೂ ಅಕ್ರಮ್ ಎಂ 20 ರನ್ ಬಾರಿಸಿ ತಂಡಕ್ಕೆ ಆಧರವಾದರು.

ಗುರಿಯನ್ನು ಬೆನ್ನಟ್ಟಿದ ಭಾರತದ ಪರ ಆರಂಭಿಕ ಆಟಗಾರ ಅರ್ಶಿನ್ 105 ಎಸೆತಗಳನ್ನು ಎದುರಿಸಿ 70 ರನ್ ಗಳಿಸಿದರು. ಆದರ್ಶ್ ಸಿಂಗ್ 12 ಎಸೆತಗಳಲ್ಲಿ 14 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ರುದ್ರ ಪಟೇಲ್ 5 ರನ್ ಗಳಿಸಿ ಔಟಾದರು. ಕ್ಯಾಪ್ಟನ್ ಉದಯ್ ಕೂಡ ವಿಶೇಷ ಕೊಡುಗೆ ನೀಡಲಿಲ್ಲ. ಉದಯ್ 49 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಮುಶೀರ್ ಖಾನ್ ಮಹತ್ವದ ಇನ್ನಿಂಗ್ಸ್ ಆಡಿದರು. ಅವರು 53 ಎಸೆತಗಳಲ್ಲಿ ಅಜೇಯ 48 ರನ್ ಗಳಿಸಿದರು. ಮುಶೀರ್ ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿಗಳು ಸೇರಿದ್ದವು.

ಅಂಡರ್-19 ಏಷ್ಯಾ ಕಪ್ 2023 ರಲ್ಲಿ ಭಾರತದ ಮುಂದಿನ ಪಂದ್ಯ ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಈ ಪಂದ್ಯ ಡಿಸೆಂಬರ್ 10 ರಂದು ದುಬೈನಲ್ಲಿ ನಡೆಯಲಿದೆ. ಇದಾದ ಬಳಿಕ ಟೀಂ ಇಂಡಿಯಾ ನೇಪಾಳವನ್ನು ಎದುರಿಸಲಿದೆ. ಈ ಪಂದ್ಯ ಕೂಡ ದುಬೈನಲ್ಲಿ ಡಿಸೆಂಬರ್ 12 ರಂದು ಆಯೋಜಿಸಲಾಗಿದೆ.

ಸಂಕ್ಷಿಪ್ತ ಸ್ಕೋರ್‌

ಅಂಡರ್ 19 ಅಫ್ಘಾನಿಸ್ತಾನ: 50 ಓವರ್ ಗಳಲ್ಲಿ 173
ಅಂಡರ್ 19ಭಾರತ: 37.3 ಓವರ್‌ಗಳಲ್ಲಿ 3 ವಿಕೆಟ್ ಗೆ 174

Story first published: Friday, December 8, 2023, 23:49 [IST]
Other articles published on Dec 8, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+