Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under-19s Asia Cup: ವೈಭವ್ ಸೂರ್ಯವಂಶಿ ಅರ್ಧಶತಕ, ಭಾರತಕ್ಕೆ 7 ವಿಕೆಟ್‌ ಜಯ

ಯುವ ಬ್ಯಾಟರ್‌ ವೈಭವ್‌ ಸೂರ್ಯವಂಶಿ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಬಾರಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಅವರು ಹಬ್ಬದೂಟವನ್ನು ಉಣ ಬಡಿಸಿದ್ದಾರೆ. ಏಷ್ಯಾ ಕಪ್‌ ಅಂಡರ್‌ 19 ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿದೆ. ಈ ಮೂಲಕ ಭಾರತ ಅಂಕ ಪಟ್ಟಿಯಲ್ಲಿ 4 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 46.2 ಓವರ್‌ಗಳಲ್ಲಿ 173 ರನ್‌ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 21.4 ಓವರ್‌ಗಳಲ್ಲಿ 3 ವಿಕೆಟ್‌ಗೆ 175 ರನ್‌ ಸಿಡಿಸಿ ತಂಡ ಜಯ ಸಾಧಿಸಿತು.

Under-19 Asia Cup Vaibhav Suryavanshi s Fifty Powers India to a 7-Wicket Victory Over Sri Lanka

ಶ್ರೀಲಂಕಾ ತಂಡದ ಪರ ಆರಂಭ ಕಳಪೆಯಾಗಿತ್ತು. ತಂಡದ ಆರಂಭಿಕರು ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಮತ್ ದಿನಸಾರ ಸೊನ್ನೆ ಸುತ್ತಿದರು. ನಾಲ್ಕನೇ ವಿಕೆಟ್‌ಗೆ ಶರುಜನ್ ಷಣ್ಮುಗನಾಥನ್ ಹಾಗೂ ಲಕ್ವಿನ್ ಅಬೆಸಿಂಗ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ಈ ಜೋಡಿ 93 ರನ್‌ ಸಿಡಿಸಿದರು. ಶರುಜನ್ ಷಣ್ಮುಗನಾಥನ್ 42 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಲಕ್ವಿನ್ ಅಬೆಸಿಂಗ್ 3 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 69 ರನ್‌ ಸಿಡಿಸಿ ಔಟ್‌ ಆದರು. ಲಂಕಾ ಪರ ಕವಿಜಾ ಗಮಗೆ ಹಾಗೂ ವಿಹಾಸ್ ಟಿ ಡಬಲ್‌ ಡಿಜಿಟ್‌ ಮುಟ್ಟಿದರು. ಭಾರತದ ಪರ ಚೇತನ್‌ ಶರ್ಮಾ 3, ಕಿರಣ್‌, ಆಯುಷ್ ಮಾತ್ರೆ ತಲಾ ಎರಡು ವಿಕೆಟ್‌ ಕಬಳಿಸಿದರು.

ಭರ್ಜರಿ ಆರಂಭ

ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಯುವ ಆಟಗಾರರಾದ ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೊಡಿ ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 91 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಆಯುಷ್ ಮಾತ್ರೆ 34 ರನ್‌ ಸಿಡಿಸಿ ಔಟ್ ಆದರು.

ಯುಎಇ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಮ್ಮ ನೈಜ ಬ್ಯಾಟಿಂಗ್ ನಡೆಸಿ 67 ರನ್‌ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 6 ಬೌಂಡರಿ, 5 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ವೈಭವ್ ಆಡಿದ 4 ಪಂದ್ಯಗಳಲ್ಲಿ 55ರ ಸರಾಸರಿಯಲ್ಲಿ 167 ರನ್‌ ಸಿಡಿಸಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಆಂದ್ರೆ ಸಿದ್ಧಾರ್ಥ್‌ 22, ನಾಯಕ ಮೊಹಮ್ಮದ್ ಅಜೇಯ 25, ಕರ್ನಾಟಕದ ಆಟಗಾರ ಕೆಪಿ ಕಾರ್ತಿಕೇಯ ಅಜೇಯ 11 ರನ್‌ ಬಾರಿಸಿ ತಂಡಕ್ಕೆ ಆಧಾರವಾದರು. ಭಾರತ 21.4 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಅಗತ್ಯ ರನ್ ಕಲೆ ಹಾಕಿತು.

Story first published: Friday, December 6, 2024, 17:54 [IST]
Other articles published on Dec 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+