Under 19 Asia Cup: ಇಂದು ಭಾರತ, ಆಫ್ಘಾನ್ ಫೈಟ್, ಇಲ್ಲಿದೆ ನೇರ ಪ್ರಸಾರದ ಮಾಹಿತಿ
ದುಬೈನಲ್ಲಿ ಇಂದಿನಿಂದ ಅಂಡರ್ 19 ಏಷ್ಯಾ ಕಪ್ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಭಾರತವು ತನ್ನ ಅಂಡರ್-19 ಏಷ್ಯಾ ಕಪ್ 2023 ರ ಅಭಿಯಾನವನ್ನು ಅಫ್ಘಾನಿಸ್ತಾನ ವಿರುದ್ಧ ಲೀಗ್ ಮುಖಾಮುಖಿಯೊಂದಿಗೆ ಪ್ರಾರಂಭಿಸಲಿದೆ. ಭಾರತವು ಟೂರ್ನಿಯ ಅತ್ಯಂತ ಯಶಸ್ವಿ ತಂಡ. ಟೀಮ್ ಇಂಡಿಯಾದ ಯುವಕರು ಏಳು ಬಾರಿ ಗೆದ್ದು ಸಾಧನೆ ಮಾಡಿದ್ದಾರೆ. ಫೈನಲ್ ಟೈ ಆದ ನಂತರ ಒಮ್ಮೆ ಪಾಕಿಸ್ತಾನದೊಂದಿಗೆ ಟ್ರೋಫಿಯನ್ನು ಹಂಚಿಕೊಂಡಿದೆ.
ಭಾರತವನ್ನು ಹೊರತುಪಡಿಸಿ, ಅಫ್ಘಾನಿಸ್ತಾನವು 2017 ರಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಕಪ್ ಗೆದ್ದ ಏಕೈಕ ತಂಡವಾಗಿದೆ.

ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ 2023ರ ಏಷ್ಯಾಕಪ್ ಗೆ ಲಗ್ಗೆ ಇಡಲಿದೆ.. ಟೀಮ್ ಇಂಡಿಯಾ 2018, 2019, 2021ರಲ್ಲಿ ಸತತ ಮೂರು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಬಾರಿ ಟೀಮ್ ಇಂಡಿಯಾವನ್ನು ಯುವ ಆಟಗಾರ ಉದಯ್ ಸಹರನ್ ಮುನ್ನಡೆಸಲಿದ್ದಾರೆ.
ಸತತ ನಾಲ್ಕನೇ ಬಾರಿಗೆ ಟ್ರೋಫಿಗೆ ಮುತ್ತಿಡಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಇಂದು ಮೊದಲ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
8 ತಂಡಗಳ ಅಂಡರ್-19 ಏಷ್ಯಾ ಕಪ್ ನಲ್ಲಿ ಕಣಕ್ಕೆ ಇಳಿಯಲಿವೆ. ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಯುಎಇ ಮತ್ತು ಜಪಾನ್ ತಂಡಗಳು ಪ್ರಶಸ್ತಿಗಾಗಿ ಫೈಟ್ ನಡೆಸಲಿವೆ. ಈ ತಂಡಗಳನ್ನು 'ಎ' ಮತ್ತು 'ಬಿ' ಎಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.
'ಎ' ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಸೇರಿವೆ. 'ಬಿ' ಗುಂಪಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಯುಎಇ ಮತ್ತು ಜಪಾನ್ ತಂಡಗಳು ಸ್ಥಾನ ಪಡೆದಿವೆ. 8 ತಂಡಗಳ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಡಿಸೆಂಬರ್ 08 ರಂದು ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಭಾರತ
ಭಾರತ ಅಂಡರ್-19 ತಂಡ: ಉದಯ್ ಸಹರಾನ್ (ನಾಯಕ), ಅರ್ಶಿನ್ ಕುಲಕರ್ಣಿ, ಆದರ್ಶ್ ಸಿಂಗ್, ರುದ್ರ ಪಟೇಲ್, ಸಚಿನ್ ದಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಅಹ್ಮದ್ ಖಾನ್, ಆರಾಧ್ಯ ಶುಕ್ಲಾ, ರಾಜ್ ಲಿಂಬಾನಿ, ನಮನ್ ತಿವಾರಿ, ಅರವೇಲಿ ಅವನೀಶ್ (ಡಬ್ಲ್ಯುಕೆ), ಸೌಮ್ಯಾ ಪಾಂಡೆ , ಅಭಿಷೇಕ್.ಮುರುಗನ್, ಇನೇಶ್ ಮಹಾಜನ್, ಧನುಷ್ ಗೌಡ
ಅಫ್ಘಾನಿಸ್ತಾನ ಅಂಡರ್-19 ತಂಡ: ನಾಸೀರ್ ಖಾನ್ ಮರೂಫ್ ಖಿಲ್ (ನಾಯಕ), ವಫಿವುಲ್ಲಾ ತಾರ್ಖಿಲ್, ಜಮ್ಶೆಡ್ ಝದ್ರಾನ್, ಖಾಲಿದ್ ತನಿವಾಲ್, ಅಕ್ರಮ್ ಮೊಹಮ್ಮದ್‌ಜಾಯ್, ಸೊಹೈಲ್ ಖಾನ್ ಜುರ್ಮತಿ, ರಹಿಮುಲ್ಲಾ ಜುರ್ಮತಿ, ನೋಮನ್ ಶಾ ಆಗಾ, ಮೊಹಮ್ಮದ್ ಯೂನಿಸ್ ಝದ್ರಾನ್, ಅಲ್ಲಾ ಮೊಹಮ್ಮದ್ ಝಡ್ರಾನ್, ಅಲ್ಲಾ ಮೊಹಮ್ಮದ್ ಝಾದ್ರಾನ್, ಅಲ್ಲಾ ಮೊಹಮ್ಮದ್, ಅಹ್ಮದ್ ಅಫ್ಘಾನ್, ಫರಿದೂನ್ ದಾವೂದ್ಜಾಯ್ ಮತ್ತು ಖಲೀಲ್ ಖಲೀಲ್ ಅಹ್ಮದ್
ಪಂದ್ಯ ನಡೆಯುವ ಸ್ಥಳ: ದುಬೈನ ಐಸಿಸಿ ಅಕಾಡೆಮಿ ಓವಲ್ 1 ಮೈದಾನ
ನೇರ ಪ್ರಸಾರ: ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಯೂಟ್ಯೂಬ್ ಚಾನೆಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications