Vaishnavi Sharma: ಮಲೇಷ್ಯಾ ವಿರುದ್ಧ ವೈಷ್ಣವಿ ಶರ್ಮಾ ಹ್ಯಾಟ್ರಿಕ್ ಪಡೆದು ಇತಿಹಾಸ
ಮಲೇಷ್ಯಾದಲ್ಲಿ ಅಂಡರ್ 19 ಟಿ20 ವಿಶ್ವಕಪ್ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಭಾರತ ಅಮೋಘ ಪ್ರದರ್ಶನ ಮುಂದುವರೆಸಿದಿ. ತಾನಾಡಿದ ಎರಡನೇ ಪಂದ್ಯದಲ್ಲಿ ಭಾರತ ಆತಿಥೇಯ ಮಲೇಷ್ಯಾ ತಂಡಕ್ಕೆ ಕಾಟ ನೀಡಿದೆ. ಈ ಪಂದ್ಯದಲ್ಲಿ ಭಾರತದ ಬೌಲರ್ ವೈಷ್ಣವಿ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅಂಡರ್-19 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.
ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ಮುಂದಾಯಿತು. ಮೊದಲು ಬ್ಯಾಟ್ ಮಾಡಿದ ಮಲೇಷ್ಯಾ 14.3 ಓವರ್‌ಗಳಲ್ಲಿ 31 ರನ್‌ಗಳಿಗೆ ಸರ್ವಪತನ ಕಂಡಿತು. ಗುರಿಯನ್ನು ಹಿಂಬಾಲಿಸಿದ ಭಾರತ ಜಸ್ಟ್ 2.5 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಿ ಸಂಭ್ರಮಿಸಿತು. ಈ ಮೂಲಕ ಭಾರತ ಅಂಡರ್ 19 ಮಹಿಳಾ ತಂಡ "ಎ" ಗುಂಪಿನ ಪಂದ್ಯದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಮೊದಲು ಸ್ಥಾನದಲ್ಲಿದೆ.

ಸತತ ವಿಕೆಟ್ ಕಳೆದುಕೊಂಡ ಮಲೇಷ್ಯಾ
ಮಲೇಷ್ಯಾ ಪಂದ್ಯದ ಯಾವುದೇ ಹಂತದಲ್ಲೂ ಟೀಮ್ ಇಂಡಿಯಾ ಬೌಲರ್‌ಗಳ ಸವಾಲು ಎದುರಿಸಿ ಪುಟಿದೇಳುವ ಸೂಚನೆ ನೀಡಲಿಲ್ಲ. ಆರಂಭದಿಂದಲೇ ಭಾರತದ ವನಿತೆಯರು ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದರು. ಆತಿಥೇಯ ತಂಡ ಸತತವಾಗಿ ಪೆವಿಲಿಯನ್ ಪರೆಡ್ ನಡೆಸುತ್ತಾ ಸಾಗಿತು. ಒಂದು ಹಂತದಲ್ಲಿ 30 ರನ್‌ಗಳಿಗೆ 7 ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದ ಮಲೇಷ್ಯಾಕ್ಕೆ ವೈಷ್ಣವಿ ಮತ್ತಷ್ಟು ಕಾಟ ನೀಡಿದರು.
ಹ್ಯಾಟ್ರಿಕ್ ಪಡೆದ ವೈಷ್ಣವಿ
ಪಂದ್ಯದ 14ನೇ ಓವರ್‌ನ್ನು ವೈಷ್ಣವಿ ಶರ್ಮಾ ಬೌಲ್ ಮಾಡಿದರು. ಈ ಓವರ್‌ನ ಎರಡನೇ ಎಸೆತದಲ್ಲಿ ನೂರ್ ಐ ಬಿಂಟಿ ರುಸ್ಲಾನ್ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಮೂರನೇ ಎಸೆತದಲ್ಲಿ ನೂರ್ ಇಸ್ಮೆ ದಾನಿಯಾ ಸಹ ಎಲ್‌ಬಿ ಬಲೆಗೆ ಬಿದ್ದರು. ಈ ಇಬ್ಬರೂ ಆಟಗಾರ್ತಿಯರು ವೈಷ್ಣವಿ ಎಸೆದ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಔಟ್ ಆದರು. ಇನ್ನು ನಾಲ್ಕನೇ ಎಸೆತದಲ್ಲಿ ಸಿತಿ ನಜ್ವಾ ಚೆಂಡು ಬಿಡಲು ಹೋದಾಗ ಚೆಂಡು ಲೆಗ್ ಸ್ಟಂಪ್ ಮುತ್ತಿಕ್ಕಿತು. ಆಗ ಭಾರತದ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತ್ತು.
ಎಕ್ಸ್‌ಟ್ರಾ ಡಬಲ್ ಡಿಜಿಟಿ
ಮಲೇಷ್ಯಾ ತಂಡದ ಪರ ಯಾವೊಬ್ಬ ಬ್ಯಾಟರ್ ಡಬಲ್ ಡಿಜಿಟ್ ಮುಟ್ಟಲೇ ಇಲ್ಲ. ಬರೀ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದಿರು. ಆದರೆ ಭಾರತದ ಬೌಲರ್‌ಗಳು ಎಕ್ಸ್‌ಟ್ರಾ 11 ನೀಡಿ ಕೈ ಸುಟ್ಟುಕೊಂಡರು.
10 ವಿಕೆಟ್ ಜಯ
ಅಲ್ಪ ಗುರಿಯನ್ನು ಹಿಂಬಾಲಿಸಿದ ಭಾರತದ ಆರಂಭ ಅಮೋಘವಾಗಿತ್ತು. ಆರಂಭಿಕರಾದ ಗಂಗಡಿ ತ್ರಿಷಾ ಹಾಗೂ ಜಿ ಕಮಲಿನಿ ತಂಡಕ್ಕೆ ಅಗತ್ಯ ರನ್ ಕಲೆ ಹಾಕಿ ಮಿಂಚಿದರು. ಗಂಗಡಿ ತ್ರಿಷಾ 12 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ ಅಜೇಯ 27 ರನ್ ಬಾರಿಸಿ ಅಬ್ಬರಿಸಿದರು. ಭಾರತ ಈ ಪಂದ್ಯವನ್ನು 103 ಎಸೆತ ಬಾಕಿ ಇರುವಂತೆ ಗೆದ್ದುಇತಿಹಾಸ ಬರೆಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications