For Quick Alerts
ALLOW NOTIFICATIONS  
For Daily Alerts
 

Under-19 World Cup: ಆಸ್ಟ್ರೇಲಿಯಾ ಚಾಂಪಿಯನ್: ಭಾರತಕ್ಕೆ ಫೈನಲ್‌ನಲ್ಲಿ ಸೋಲು

ನಿರೀಕ್ಷೆಗಳೆಲ್ಲಾ ಹುಸಿಯಾಗಿದೆ. ಐಸಿಸಿ ಅಂಡರ್‌ 19 ವಿಶ್ವಕಪ್‌ ಗೆಲ್ಲುವ ಭಾರತದ ಆಸೆ ಕಮರಿದೆ. ಪ್ರಶಸ್ತಿ ಸುತ್ತಿ ಕಾದಾಟದಲ್ಲಿ ಸಂಘಟಿತ ಆಟದ ಪ್ರದರ್ಶನವನ್ನು ನೀಡುವಲ್ಲಿ ಎಡವಿದ ಯಂಗ್ ಇಂಡಿಯಾ ಆಘಾತ ಅನುಭವಿಸಿದೆ.

ದಕ್ಷಿಣ ಆಫ್ರಿಕಾದ ಬೆನೋನಿ ಅಂಗಳದಲ್ಲಿ ಫೈನಲ್ ಪಂದ್ಯದಲ್ಲಿ ಭಾರತ ಹಾಕಿಕೊಂಡಿದ್ದ ಲೆಕ್ಕಾಚಾರಗಳೆಲ್ಲಾ ಉಲ್ಟಾ ಹೊಡೆದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 253 ರನ್ ಸೇರಿಸಿದೆ. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 43.5 ಓವರ್‌ಗಳಲ್ಲಿ 174 ರನ್‌ ಕಲೆ ಹಾಕಿ ನಿರಾಸೆ ಅನುಭವಿಸಿದೆ. ಈ ಮೂಲಕ ಆಸೀಸ್‌ 79 ರನ್‌ಗಳಿಂದ ಪಂದ್ಯ ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಭಾರತ ಆರನೇ ಬಾರಿ ಕಿರಿಯರ ವಿಶ್ವ ಚಾಂಪಿಯನ್ ಆಗುವ ಆಸೆಗೆ ಪೆಟ್ಟು ಬಿದ್ದಿದೆ.

Under-19 World Cup: Australia set India a target of 254 runs

ಟಾಪ್‌ ಆರ್ಡರ್‌ ಬ್ಯಾಟರ್‌ಗಳ ವೈಫಲ್ಯ

ಸರಣಿಯುದ್ದಕ್ಕೂ ಭರ್ಜರಿ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾದ ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ ನಿರಾಸೆ ಅನುಭವಿಸಿದ್ದಾರೆ. ಭಾರತದ ಪರ ಆದರ್ಶ ಸಿಂಗ್ 47, ಮುಶೀರ್ ಖಾನ್‌ 22, ಮುರಗನ್‌ ಅಭಿಷೇಕ್‌ 42, ನಮನ್‌ ತಿವಾರಿ 14 ರನ್‌ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದ್ದಾರೆ.

ಆಸೀಸ್ ಪರ ಮಾಹ್ಲಿ ಬಿಯರ್ಡ್ಮನ್ ಹಾಗೂ ರಾಫ್ ಮ್ಯಾಕ್‌ಮಿಲನ್ ಮೂರು ವಿಕೆಟ್‌ ಪಡೆದು ಜಯದಲ್ಲಿ ಮಿಂಚಿದರು.

ಭರ್ಜರಿ ಜೊತೆಯಾಟ

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡಲು ಮುಂದಾಯಿತು. ಆಸೀಸ್ ಪರ ಆರಂಭಿಕ ಸ್ಯಾಮ್ ಕಾನ್ಸ್ಟಾಸ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್‌ಗೆ ಈ ಜೋಡಿ 109 ಎಸೆತಗಳಲ್ಲಿ 78 ರನ್‌ಗಳ ಜೊತೆಯಾಟದ ಕಾಣಿಕೆಯನ್ನು ನೀಡಿತು. ನಾಯಕ ಹಗ್ ವೈಬ್ಜೆನ್ 5 ಬೌಂಡರಿ ಸೇರಿದಂತೆ 48 ರನ್ ಬಾರಿಸಿ ಔಟ್ ಆದರು. ನಾಯಕ ಔಟ್ ಆಗುತ್ತಿದ್ದಂತೆ ಹ್ಯಾರಿ ಡಿಕ್ಸನ್ 42 ರನ್‌ಗಳಿಗೆ ಆಟ ಮುಗಿಸಿದರು.

Under-19 World Cup: Australia set India a target of 254 runs

ನಾಲ್ಕನೇ ವಿಕೆಟ್‌ಗೆ ಹರ್ಜಸ್ ಸಿಂಗ್ ಹಾಗೂ ರಯಾನ್ ಹಿಕ್ಸ್ (20) ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕಲು ಟೀಮ್ ಇಂಡಿಯಾ ಬೌಲರ್‌ಗಳು ಮಾಡಿಕೊಂಡ ಪ್ಲ್ಯಾನ್ ಎಲ್ಲಾ ಉಲ್ಟಾ ಹೊಡಿಯಿತು. ಈ ಜೋಡಿ 68 ಎಸೆತಗಳಲ್ಲಿ 66 ರನ್‌ಗಳ ಜೊತೆಯಾಟವನ್ನು ನೀಡಿತು.

Under-19 World Cup: Australia set India a target of 254 runs

ಉಳಿದಂತೆ ಕೆಳ ಕ್ರಮಾಂಕದಲ್ಲಿ ಜೊತೆಯಾಟಗಳು ಬರಲಿಲ್ಲ. ಹರ್ಜಸ್ ಸಿಂಗ್ 64 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸೇರಿದಂತೆ 55 ರನ್ ಬಾರಿಸಿ ಮಿಂಚಿದರು. ಉಳಿದಂತೆ ಆಲಿವರ್ ಪೀಕ್ ಅಜೇಯ 46 ರನ್ ಸಿಡಿಸಿದರು. ಈ ಮೂಲಕ ಆಸೀಸ್‌ ಫೈನಲ್‌ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ನೆರವಾದರು.

Story first published: Sunday, February 11, 2024, 18:01 [IST]
Other articles published on Feb 11, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+