ಅಂಡರ್19 ವಿಶ್ವಕಪ್: ಜಪಾನ್ ವಿರುದ್ಧ ದಾಖಲೆಯ ಜಯ ಸಾಧಿಸಿದ ಟೀಮ್ ಇಂಡಿಯಾ

ಅಂಡರ್19 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಕಿರಿಯರ ಅಬ್ಬರ ಎರಡನೇ ಪಂದ್ಯದಲ್ಲೂ ಮುಂದುವರಿದಿದೆ. ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು ಕನಿಷ್ಟ ಮೊತ್ತಕ್ಕೆ ಕಟ್ಟಿ ಹಾಕಿ ವಿರುದ್ಧ 10 ವಿಕೆಟ್‌ಗಳ ದಾಖಲೆಯ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್‌ನಲ್ಲಿ ಎರಡನೇ ಜಯ ದಾಖಲಿಸಿಕೊಂಡಿದೆ. ಅಂಡರ್-19 ವಿಶ್ವಕಪ್‌ನಲ್ಲಿ ಜಪಾನ್ ಎರಡನೇ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಅವಮಾನಕ್ಕೆ ತುತ್ತಾಗಿದೆ.
ದುರ್ಬಲ ಜಪಾನ್ ತಂಡವನ್ನು ಎರಡನೇ ಪಂದ್ಯದಲ್ಲಿ ಎದುರಿಸಿದ ಭಾರತೀಯ ಅಂಡರ್-19 ತಂಡ ಜಪಾನ್‌ಅನ್ನು ಕೇವಲ 41 ರನ್‌ಗಳಿಗೆ ಆಲೌಟ್ ಮಾಡಿತು. ಈ ಸಣ್ಣ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾದ ಕಿರಿಯರು ಐದು ಓವರ್ ಸಂಪೂರ್ಣಗೊಳ್ಳುವ ಮೊದಲೇ ವಿಜಯೋತ್ಸವ ಆಚರಿಸಿದರು.
ಹಾಲಿ ಚಾಂಪಿಯನ್ ಭಾರತ ಅಂಡರ್-19 ತಂಡದ ವಿರುದ್ಧ ಜಪಾನ್ ಕಿರಿಯರು ಉತ್ಸಾಹದಿಂದಲೇ ಎದುರಿಸಲು ಕಣಕ್ಕಿಳಿದಿದ್ದರು. ಆದರೆ ಭಾರತದ ಬೌಲರ್‌ಗಳನ್ನು ಎದುರಿಸಲು ಜಪಾನ್ ಆಟಗಾರರು ಅಕ್ಷರಶಃ ಬೆದರಿದರು. ಐವರು ಆಟಗಾರರು ಶೂನ್ಯ ಸುತ್ತಿ ಹೊರನಡೆದರು. ಮೂವರು ಒಂದು ರನ್‌ಗಳಿಸಿ ಔಟಾದರು. ಇಬ್ಬರು ಆಟಗಾರರು 7 ರನ್‌ಗಳಿಸಿದ್ದೇ ವೈಯಕ್ತಿಕ ದೊಡ್ಡ ಮೊತ್ತ. ಇಡೀ ಜಪಾನ್ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿಗಳು ಬಂದಿದೆ.
ಭಾರತದ ಕಿರಿಯರಲ್ಲಿ ರವಿ ಬಿಶ್ನೋಯ್ 4 ವಿಕೆಟ್ ಪಡೆದರೆ, ಕಾರ್ತಿಕ್ ತ್ಯಾಗಿ 3, ಆಕಾಶ್ ಸಿಂಗ್ 2 ಮತ್ತು ವಿದ್ಯಾಧರ್ ಪಾಟೀಲ್ ಒಂದು ವಿಕೆಟ್ ಪಡೆದರು. ಜಪಾನ್ ನೀಡಿದ ಕನಿಷ್ಟ ಗುರಿಯನ್ನು ಭಾರತದ ಆರಂಭಿಕ ಆಟಗಾರರು ಕೇವಲ 4.5 ಓವರ್‌ಗಳಲ್ಲಿ ತಲುಪಿದರು.
ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 29 ರನ್ ಸಿಡಿಸಿದರೆ, ಕುಮಾರ್ ಕುಶಾಗ್ರ 13 ರನ್ ಗಳಿಸಿ ಸುಲಭವಾಗಿ ಗೆಲುವಿನ ದಡ ತಲುಪಿಸಿದರು. ಈ ಗೆಲುವಿನೊಂದಿಗೆ ಭಾರತೀಯ ಕಿರಿಯರ ತಂಡ ಕ್ವಾರ್ಟರ್ ಫೈನಲ್‌ಗೆ ಕಾಲಿಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications