For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್: ಭಾರತ ಗೆದ್ದ ಕಿರಿಯರ ವಿಶ್ವಕಪ್‌ನ ಸಂಪೂರ್ಣ ಪಟ್ಟಿ ಹಾಗೂ ಸ್ಕ್ವಾಡ್

Under-19 World Cup: Heres complete list of Under-19 WC Winning Captains of India and Squads details

ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಕಿರಿಯರ ತಂಡ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ಮತ್ತೊಂದು ಬಾರಿ ಅಂಡರ್ 19 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. 2020ರ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ ಕೈತಪ್ಪಿದ್ದ ಅಂಡರ್ 19 ವಿಶ್ವಕಪ್ ಈ ಬಾರಿ ಭಾರತದ ಕೈ ತಪ್ಪದಂತೆ ನೋಡಿಕೊಳ್ಳುವಲ್ಲಿ ಯಶ್ ಧುಲ್ ಪಡೆ ಯಶಸ್ವಿಯಾಗಿದೆ.

ಅಂಡರ್ 19 ವಿಶ್ವಕಪ್‌ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಈ ಬಾರಿಯ ಗೆಲುವಿನೊಂದಿಗೆ ಭಾರತ ಐದನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ. ಅಲ್ಲದೆ ಸತತ ನಾಲ್ಕು ಆವೃತ್ತಿಯಿಂದ ಭಾರತ ಫೈನಲ್ ಹಂತಕ್ಕೇರಲು ಯಶಸ್ವಿಯಾಗುತ್ತಿದೆ. ಇದು ಕಿರಿಯರ ವಿಶ್ವಕಪ್‌ನಲ್ಲಿ ಭಾರತದ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ.

ಭಾರತ ಈವರೆಗೆ ಗೆದ್ದ ಅಂಡರ್ 19 ವಿಶ್ವಕಪ್‌ಗಳ ಪಟ್ಟಿಯನ್ನು ಬನ್ನಿ ನೋಡೋಣ

ಅಂಡರ್ 19 ವಿಶ್ವಕಪ್, 2000, ನಾಯಕ ಮೊಹಮ್ಮದ್ ಕೈಫ್

ಅಂಡರ್ 19 ವಿಶ್ವಕಪ್, 2000, ನಾಯಕ ಮೊಹಮ್ಮದ್ ಕೈಫ್

ಭಾರತ ಅಂಡರ್ 19 ವಿಶ್ವಕಪ್‌ಅನ್ನು ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದ್ದು 2000ನೇ ಇಸವಿಯಲ್ಲಿ. ಅಂದು ಭಾರತ ಅಂಡರ್ 19 ತಂಡದ ನಾಯಕನಾಗಿದ್ದವರು ಮೊಹಮ್ಮದ್ ಕೈಫ್. ಕೊಲಂಬೋದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ವನ್ನು 6 ವಿಕೆಟ್‌ಗಳಿಂದ ಮಣಿಸಿ ಗೆಲುವು ಸಾಧಿಸಿತ್ತು. ಈ ಅಂಡರ್ 19 ವಿಶ್ವಕಪ್ ಭಾರತಕ್ಕೆ ಭವಿಷ್ಯದ ಸೂಪರ್ ಸ್ಟಾರ್ ಯುವರಾಜ್ ಸಿಂಗ್ ಅವರನ್ನು ಪರಿಚಯ ಮಾಡಿಕೊಟ್ಟಿತ್ತು.

ಭಾರತ ತಂಡ: ಮೊಹಮ್ಮದ್ ಕೈಫ್ (ನಾಯಕ), ಯುವರಾಜ್ ಸಿಂಗ್, ಅನುಪ್ ದಾವೆ, ಮಿಹಿರ್ ದಿವಾಕರ್, ನೀರಜ್ ಪಟೇಲ್, ವೇಣುಗೋಪಾಲ್ ರಾವ್, ಅಜಯ್ ರಾತ್ರಾ, ರವನೀತ್ ರಿಕಿ, ಮನೀಶ್ ಶರ್ಮಾ, ವಿದ್ಯುತ್ ಶಿವರಾಮಕೃಷ್ಣನ್, ರೀತೀಂದರ್ ಸೋಧಿ, ಶಲಭ್ ಶ್ರೀವಾಸ್ತವ, ಮೃತ್ಯುಂಜಯ್ ತ್ರಿಪಾಠಿ, ಅರ್ಜುನ್ ಯಾದವ್.

ಅಂಡರ್ 19 ವಿಶ್ವಕಪ್ 2008, ನಾಯಕ ವಿರಾಟ್ ಕೊಹ್ಲಿ

ಅಂಡರ್ 19 ವಿಶ್ವಕಪ್ 2008, ನಾಯಕ ವಿರಾಟ್ ಕೊಹ್ಲಿ

ಭಾರತ 2ನೇ ಬಾರಿಗೆ ಅಂಡರ್ 19 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದು 2008ರಲ್ಲಿ. ಅಂದು ಭಾರತ ಕಿರಿಯರ ತಂಡವನ್ನು ಮುನ್ನಡೆಸಿದ್ದು ವಿರಾಟ್ ಕೊಹ್ಲಿ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಡಿಎಲ್‌ಎಸ್ ನಿಯಮದಲ್ಲಿ ಗೆಲುವು ಸಾಧಿಸಿತ್ತು. ಈ ವಿಶ್ವಕಪ್ ಟೂರ್ನಿಯಿಂದ ಭಾರತಕ್ಕೆ ಕೆಲ ಸೂಪರ್ ಸ್ಟಾರ್‌ಗಳನ್ನು ದೊರೆತರು. ವಿರಾಟ್ ಕೊಹ್ಲಿ ಮಾತ್ರವಲ್ಲದೆ ರವೀಂದ್ರ ಜಡೇಜಾ, ಮನೀಶ್ ಪಾಂಡೆ ಕೂಡ ಈ ತಂಡದ ಭಾಗವಾಗಿದ್ದರು.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ (ಉಪನಾಯಕ), ಅಜಿತೇಶ್ ಅರ್ಗಲ್, ನೆಪೋಲಿಯನ್ ಐನ್‌ಸ್ಟೈನ್, ಶ್ರೀವತ್ಸ್ ಗೋಸ್ವಾಮಿ, ಪೆರ್ರಿ ಗೋಯಲ್, ಇಕ್ಬಾಲ್ ಅಬ್ದುಲ್ಲಾ, ಸಿದ್ಧಾರ್ಥ್ ಕೌಲ್, ತರುವರ್ ಕೊಹ್ಲಿ, ಅಭಿನವ್ ಮುಕುಂದ್, ಮನೀಶ್ ಪಾಂಡೆ, ಪ್ರದೀಪ್ ಸಾಂಗ್ವಾನ್, ಡಿ ಶಿವ ಕುಮಾರ್ ಸಾಂಗ್ವಾನ್ , ತನ್ಮಯ್ ಶ್ರೀವಾಸ್ತವ್, ಸೌರಭ್ ತಿವಾರಿ

ಅಂಡರ್ 19 ವಿಶ್ವಕಪ್ 2012, ನಾಯಕ ಉನ್ಮುಕ್ತ್ ಚಾಂದ್

ಅಂಡರ್ 19 ವಿಶ್ವಕಪ್ 2012, ನಾಯಕ ಉನ್ಮುಕ್ತ್ ಚಾಂದ್

ಭಾರತದ ಮೂರನೇ ಕಿರಿಯರ ವಿಶ್ವಕಪ್ ಚಾಂಪಿಯನ್ ಪಟ್ಟ ನಾಲ್ಕು ವರ್ಷಗಳ ನಂತರ ಮುಡಿಗೇರಿತ್ತು. 2012ರಲ್ಲಿ ಭಾರತ ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಆಸ್ಟ್ರೇಲಿಯಾ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ನಾಯಕ ಉನ್ಕುಕ್ತ್ ಚಾಂದ್ ಶತಕ ಸಿಡಿಸಿ ಗೆಲುವಿಗೆ ಪ್ರಮುಖ ಕಾರಣವಾಗಿದ್ದರು. ಹನುಮ ವಿಹಾರಿ ಈ ಟೂರ್ನಿಯಿಂದ ಭಾರತಕ್ಕೆ ದೊರೆತ ಪ್ರಮುಖ ತಾರಾ ಆಟಗಾರನಾಗಿದ್ದಾರೆ.

ಭಾರತ ತಂಡ:ಉನ್ಮುಕ್ತ್ ಚಂದ್ (ನಾಯಕ), ಅಕ್ಷದೀಪ್ ನಾಥ್ (ಉಪನಾಯಕ), ಬಾಬಾ ಅಪರಾಜಿತ್, ಪ್ರಶಾಂತ್ ಚೋಪ್ರಾ, ಸಂದೀಪನ್ ದಾಸ್, ಹರ್ಮೀತ್ ಸಿಂಗ್, ಅಖಿಲ್ ಹೆರ್ವಾಡ್ಕರ್, ರಶ್ ಕಲಾರಿಯಾ, ವಿಕಾಸ್ ಮಿಶ್ರಾ, ಕಮಲ್ ಪಾಸಿ, ಸ್ಮಿತ್ ಪಟೇಲ್, ರವಿಕಾಂತ್ ಸಿಂಗ್, ಸಂದೀಪ್ ಶರ್ಮಾ , ಹನುಮ ವಿಹಾರಿ, ವಿಜಯ್ ಜೋಲ್.

Rohit Sharma ಪ್ರಕಾರ ತಂಡದವರ ಈ ಒಂದರ ಕಡೆ ಗಮನ ಹರಿಸಬೇಕು | Oneindia Kannada
ಅಂಡರ್ 19 ವಿಶ್ವಕಪ್ 2018, ನಾಯಕ ಪೃಥ್ವಿ ಶಾ

ಅಂಡರ್ 19 ವಿಶ್ವಕಪ್ 2018, ನಾಯಕ ಪೃಥ್ವಿ ಶಾ

ಇನ್ನು 2018ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಅಂಡರ್ 19 ವಿಶ್ವಕಪ್‌ನಲ್ಲಿ ಭಾರತ ಪೃಥ್ವಿ ಶಾ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಈ ಸಂದರ್ಭದಲ್ಲಿಯೂ ಭಾರತ ಆಸ್ಟ್ರೇಲಿಯಾ ಕಿರಿಯರ ತಂಡವನ್ನು ಭರ್ಜರಿಯಾಗಿ ಮಣಿಸಿ ಗೆಲುವು ಸಾಧಿಸುವ ಮೂಲಕ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು. ಈ ಸಂದರ್ಭದಲ್ಲಿ ಭಾರತ ಅಂಡರ್ 19 ತಂಡಕ್ಕೆ ಕೋಚ್ ಆಗಿದ್ದವರು ಹಾಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್.

ಭಾರತ ತಂಡ: ಪೃಥ್ವಿ ಶಾ, ಶುಭ್ಮನ್ ಗಿಲ್ (ಉಪನಾಯಕ), ಶ್ರೀ ವಂಶಿ, ಆರ್ಯನ್ ಜುಯಲ್, ಮಂಜೋತ್ ಕಲ್ರಾ, ಶಿವಂ ಮಾವಿ, ಕಮಲೇಶ್ ನಾಗರಕೋಟಿ, ರಿಯಾನ್ ಪರಾಗ್, ಇಶಾನ್ ಪೊರೆಲ್, ಹಿಮಾಂಶು ರಾಣಾ, ಅನುಕುಲ್ ರಾಯ್, ಅಭಿಷೇಕ್ ಶರ್ಮಾ, ಅರ್ಷದೀಪ್ ಸಿಂಗ್, ಶಿವ ಸಿಂಗ್, ಆದಿತ್ಯ ಠಾಕ್ರೆ, ಪಂಕಜ್ ಯಾದವ್.

ಅಂಡರ್ 19 ವಿಶ್ವಕಪ್ 2022, ನಾಯಕ ಯಶ್ ಧುಲ್

ಅಂಡರ್ 19 ವಿಶ್ವಕಪ್ 2022, ನಾಯಕ ಯಶ್ ಧುಲ್

ಇನ್ನು ಶನಿವಾರ ನಡೆದ 2022ರ ಆವೃತ್ತಿಯ ಅಂಡರ್ 19 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ಕಿರಿಯರ ತಂಡವನ್ನು 4 ವಿಕೆಟ್‌ಗ: ಅಂತರದಿಂದ ಮಣಿಸಿದೆ. ಯಶ್ ಧುಲ್ ನೇತೃತ್ವದ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚುಹರಿಸಿದ್ದು ಅರ್ಹವಾಗಿಯೆ ಗೆದ್ದು ಬೀಗಿದೆ. ಈ ಮೂಲಕ ಕಿರಿಯರ ವಿಶ್ವಕಪ್‌ನಲ್ಲಿ ತನ್ನ ಟ್ರೋಫಿಯ ದಾಖಲೆಯನ್ನು ಭಾರತ 5ಕ್ಕೇರಿಸಿದೆ.

ಭಾರತ ತಂಡ: ಯಶ್ ಧುಲ್ (ನಾಯಕ), ಹರ್ನೂರ್ ಸಿಂಗ್, ಅಂಗ್‌ಕ್ರಿಶ್ ರಘುವಂಶಿ, ಎಸ್‌ಕೆ ರಶೀದ್ (ಉಪನಾಯಕ), ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್, ದಿನೇಶ್ ಬಾನಾ (ವಿಕೆಟ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಾಜ್ ಅಂಗದ್ ಬಾವಾ, ಮಾನವ್ ಪರಾಖ್, ಕೌಶಲ್ ತಾಂಬೆ , ಆರ್ ಎಸ್ ಹಂಗರ್ಗೇಕರ್, ವಾಸು ವತ್ಸ್, ವಿಕ್ಕಿ ಒಸ್ತ್ವಾಲ್, ರವಿಕುಮಾರ್, ಗರ್ವ್ ಸಾಂಗ್ವಾನ್.
ಸ್ಟ್ಯಾಂಡ್‌ಬೈ ಆಟಗಾರರು: ರಿಷಿತ್ ರೆಡ್ಡಿ, ಉದಯ್ ಸಹರನ್, ಅಂಶ್ ಗೋಸಾಯಿ, ಅಮಿತ್ ರಾಜ್ ಉಪಾಧ್ಯಾಯ, ಪಿಎಂ ಸಿಂಗ್ ರಾಥೋಡ್.

Story first published: Monday, February 7, 2022, 9:58 [IST]
Other articles published on Feb 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+