For Quick Alerts
ALLOW NOTIFICATIONS  
For Daily Alerts
 

ಅಂಡರ್ 19 ವಿಶ್ವಕಪ್ ಫೈನಲ್‌:ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಭಾರತದ ಮುಡಿಗೆ 5ನೇ ವಿಶ್ವಕಪ್ ಗರಿ

Under 19 world cup: India won by 4 wicket against England, India crowned champions for 5th time

ಅಂಡರ್ 19 ವಿಶ್ವಕಪ್‌ನ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಸೆಣೆಸಾಟದಲ್ಲಿ ಭಾರತ ತಂಡ ಅಮೋಘ ಗೆಲುವು ಸಾಧಿಸಿದ್ದು ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ ಅಂಡರ್ 19 ವಿಶ್ವಕಪ್ ಇತಿಹಾಸದಲ್ಲಿ ಭಾರತ 5ನೇ ಬಾರಿ ಟ್ರೋಫಿ ಎತ್ತಿ ಹಿಡಿದಿದೆ. ಇಂಗ್ಲಂಡ್ ಕಿರಿಯರ ವಿರುದ್ಧ ಭಾರತದ ಕಿರಿಯರ ಸೆಣೆಸಾಟ ಸಾಕಷ್ಟು ರೋಚಕತೆಯಿಂದ ಕೂಡಿದ್ದು ಅಂತಿಮವಾಗಿ ಭಾರತ 4 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ಭಾರತ ಈ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿಯೂ ಇಂಗ್ಲೆಂಡ್‌ಗಿಂತ ಸಂಪೂರ್ಣ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತ ಇಂಗ್ಲೆಂಡ್ ತಂಡವನ್ನು 189 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು. ಅದಾದ ಬಳಿಕ ಬ್ಯಾಟಿಂಗ್‌ನಲ್ಲಿಯೂ ಭಾರತ ಉತ್ತಮ ಪ್ರದರ್ಶನ ನೀಡಿತು. ಇಂಗ್ಲೆಂಡ್ ಬೌಲಿಂಗ್‌ ದಾಳಿಯನ್ನು ಉತ್ತಮ ರೀತಿಯಲ್ಲಿ ಎದುರಿಸಿದ ಭಾರತ ತಂಡ 14 ಎಸೆತಗಳು ಬಾಕಿಯಿರುವಂತೆ ಗೆಲುವು ಸಾಧಿಸಿದೆ. ಈ ಮೂಲಕ ಅರ್ಹವಾಗಿಯೇ ಚಾಂಪಿಯನ್ ಪಟ್ಟಕ್ಕೇರಿದೆ.

ಇನ್ನು ಭಾರತ ಅಂಡರ್ 19 ತಂಡದ ಪರವಾಗಿ ರಾಜ್ ಬಾವಾ ಐದು ವಿಕೆಟ್ ಗೊಂಚಲು ಪಡೆಯುವ ಮೂಲಕ ಎದುರಾಳಿಗೆ ಆಘಾರ ನೀಡಿದರೆ ರವಿ ಕುಮಾರ್ ಕೂಡ ನಾಲ್ಕು ವಿಕೆಟ್ ಪಡೆದು ಅದ್ಭುತ ಕೊಡುಗೆ ನೀಡಿದರು. ಇನ್ನು ಬ್ಯಾಟಿಂಗ್‌ನಲ್ಲಿ ಶೇಕ್ ರಶೀದ್ ಈ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಅರ್ಧ ಶತಕದ ಕೊಡುಗೆ ನೀಡಿ ಮಿಂಚಿದ್ದಾರೆ. ಇನ್ನು ನಿಶಾಂತ್ ಸಿಂಧು ಕೂಡ ಅಜೇಯ 50 ರನ್‌ಗಳ ಕೊಡುಗೆ ನೀಡಿದ್ದಾರೆ. ಈ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.

ಭಾರತ ಅಂಡರ್ 19 ತಂಡ: ಆಂಗ್ಕ್ರಿಶ್ ರಘುವಂಶಿ, ಹರ್ನೂರ್ ಸಿಂಗ್, ಶೇಕ್ ರಶೀದ್, ಯಶ್ ಧುಲ್ (ನಾಯಕ), ನಿಶಾಂತ್ ಸಿಂಧು, ರಾಜವರ್ಧನ್ ಹಂಗರ್ಗೇಕರ್, ದಿನೇಶ್ ಬಾನಾ (ವಾಕ್), ಕೌಶಲ್ ತಾಂಬೆ, ರಾಜ್ ಬಾವಾ, ವಿಕ್ಕಿ ಓಸ್ತ್ವಾಲ್, ರವಿ ಕುಮಾರ್
ಬೆಂಚ್: ಮಾನವ್ ಪರಾಖ್, ಸಿದ್ದಾರ್ಥ್ ಯಾದವ್, ಅನೀಶ್ವರ್ ಗೌತಮ್, ಗರ್ವ್ ಸಾಂಗ್ವಾನ್

ಇಂಗ್ಲೆಂಡ್ ಅಂಡರ್ 19 ತಂಡ: ಜಾರ್ಜ್ ಥಾಮಸ್, ಜಾಕೋಬ್ ಬೆಥೆಲ್, ಟಾಮ್ ಪರ್ಸ್ಟ್ (ನಾಯಕ), ಜೇಮ್ಸ್ ರೆವ್, ವಿಲಿಯಂ ಲಕ್ಸ್ಟನ್, ಜಾರ್ಜ್ ಬೆಲ್, ರೆಹಾನ್ ಅಹ್ಮದ್, ಅಲೆಕ್ಸ್ ಹಾರ್ಟನ್ (ವಾಕ್), ಜೇಮ್ಸ್ ಸೇಲ್ಸ್, ಥಾಮಸ್ ಆಸ್ಪಿನ್ವಾಲ್, ಜೋಶುವಾ ಬೋಡೆನ್
ಬೆಂಚ್: ಜೇಮ್ಸ್ ಕೋಲ್ಸ್, ಫತೇ ಸಿಂಗ್, ನಾಥನ್ ಬಾರ್ನ್ವೆಲ್, ಬೆಂಜಮಿನ್ ಕ್ಲಿಫ್

Story first published: Monday, February 7, 2022, 15:13 [IST]
Other articles published on Feb 7, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+