Under-19 World Cup: ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ ಟೀಮ್ ಇಂಡಿಯಾ
ನಾಯಕ ಆಯುಷ್ ಮಾತ್ರೆ ಹಾಗೂ ಆರ್‌ಎಸ್ ಅಂಬರೀಷ್ ಅವರ ಸೊಗಸಾದ ಆಟದ ನೆರವಿನಿಂದ ಟೀಮ್ ಇಂಡಿಯಾ ಅಂಡರ್ 19 ಏಕದಿನ ವಿಶ್ವಕಪ್‌ನಲ್ಲಿ 7 ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಅಂಡರ್ 19 ಭಾರತ ತಂಡ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ ಅಬ್ಬರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆರ್ಯನ್ ಮನ್ (5), ಹ್ಯೂಗೋ ಬೋಗ್ (4), ಟಾಮ್ ಜೋನ್ಸ್ (2), ಸ್ನೇಹಿತ್ ರೆಡ್ಡಿ (10), ಮಾರ್ಕೊ ವಿಲಿಯಂ ಆಲ್ಪೆ (1) ದೊಡ್ಡ ಇನಿಂಗ್ಸ್ ಕಲೆ ಹಾಕುವಲ್ಲಿ ವಿಫಲರಾದರು. ನ್ಯೂಜಿಲೆಂಡ್ ತಂಡ 22 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆರನೇ ವಿಕೆಟ್‌ಗೆ ಜಾಕೋಬ್ ಕಾಟರ್ ಹಾಗೂ ಜಸ್ಕರನ್ ಸಂಧು ಜೋಡಿ 62 ಎಸೆತಗಳಲ್ಲಿ 37 ರನ್ ಸೇರಿಸಿತು. ಈ ವೇಳೆ ಜಸ್ಕರನ್ ಸಂಧು 18 ರನ್ ಸಿಡಿಸಿದರು. ಜಾಕೋಬ್ ಕಾಟರ್ 23 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. 8ನೇ ವಿಕೆಟ್‌ಗೆ ಕ್ಯಾಲಮ್ ಸ್ಯಾಮ್ಸನ್ ಹಾಗೂ ಸೆಲ್ವಿನ್ ಸಂಜಯ್ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿತು. ಈ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 57 ಎಸೆತಗಳಲ್ಲಿ 53 ರನ್ ಸೇರಿಸಿತು. ಕ್ಯಾಲಮ್ ಸ್ಯಾಮ್ಸನ್ ಅಜೇಯ 37 ರನ್ ಸಿಡಿಸಿದ್ದಾರೆ. ಸೆಲ್ವಿನ್ ಸಂಜಯ್ 28 ರನ್ ಬಾರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 36.2 ಓವರ್‌ಗಳಲ್ಲಿ 135 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅಂಬರೀಷ್ 29 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಹೆನಿಲ್ ಪಟೇಲ್ 3 ವಿಕೆಟ್ ಪಡೆದರು.
ಆಯುಷ್ ಅರ್ಧಶತಕದ ಆಸರೆ
ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರನ್ ಜಾರ್ಜ್ (7) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆರಂಭಿಕರಾದ ವೈಭವ್ ಸೂರ್ಯವಂಶಿ ಹಾಗೂ ಆಯುಷ್ ಮಾತ್ರೆ ಜೋಡಿ ಅಮೋಘ ಜೊತೆಯಾಟವನ್ನು ಆಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 39 ಎಸೆತಗಳಲ್ಲಿ 76 ರನ್ ಸಿಡಿಸಿತು. ಆರಂಭಿಕ ವೈಭವ್ ಸೂರ್ಯವಂಶಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 40 ರನ್ ಸಿಡಿಸಿದರು. ನಾಯಕ ಆಯುಷ್ ಮಾತ್ರೆ 27 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಸಹಾಯದಿಂದ 53 ರನ್ ಬಾರಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಹಾನ್ ಮಲೋತ್ರ (ಅಜೇಯ 17) ಹಾಗೂ ವೇದಾಂತ್ ತ್ರಿವೇದಿ (ಅಜೇಯ 13) ರನ್ ಸಿಡಿಸಿದರು. ಅಂತಿಮವಾಗಿ ಭಾರತ 13.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 130 ರನ್ ಸೇರಿಸಿ ಜಯ ಸಾಧಿಸಿತು.
ಬಿ ಗುಂಪಿನಲ್ಲಿ ಭಾರತ ಅಂಡರ್ 19 ತಂಡ ಆಡಿದ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ, 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಬಾಂಗ್ಲಾ 1 ಗೆಲುವು ದಾಖಲಿಸಿದ್ದು, ಎರಡನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications