Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Under 19 Asia Cup: ಕೇವಲ 43 ಎಸೆತಗಳಲ್ಲಿ ನೇಪಾಳ ವಿರುದ್ಧದ ಪಂದ್ಯ ಗೆದ್ದ ಟೀಮ್ ಇಂಡಿಯಾ

ಅಂಡರ್‌ 19 ಎಷ್ಯಾ ಕಪ್ ನಲ್ಲಿ ಟೀಮ್ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೋತ ಬಳಿಕ ಟೂರ್ನಿಯಲ್ಲಿ ಭರ್ಜರಿಯಾಗಿ ಕಮ್ ಬ್ಯಾಕ್ ಮಾಡಿದೆ. ಮಂಗಳವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ ಕಿರಿಯರ ತಂಡ ಕೇವಲ 43 ಎಸೆತಗಳಲ್ಲಿ ಪಂದ್ಯ ಗೆದ್ದು ಬೀಗಿದೆ.

ನೇಪಾಳ ತಂಡದ ಸ್ಕೋರ್‌ ಬೋರ್ಡ್‌ ನೋಡಿದರೆ ಮೊಬೈಲ್‌ ನಂಬರ್ ನೆನಾಪಾಗುವಂತೆ ಇತ್ತು. ಯಾವೊಬ್ಬ ಪ್ಲೇಯರ್‌ ಡಬಲ್‌ ಡಿಜಿಟ್ ಮುಟ್ಟಲಿಲ್ಲ. ಸಿಂಗಲ್ ಡಿಜಿಟ್‌ನಲ್ಲಿಯೇ ನೇಪಾಳ ಬ್ಯಾಟರ್ ಆಟ ಮುಗಿಸಿದರು. ಟೀಮ್ ಇಂಡಿಯಾದ ಬೌಲರ್‌ಗಳು 13 ಎಕ್ಸಟ್ರಾ ನೀಡಿದ್ದೇ ಸ್ಕೋರ್‌ ಬೋರ್ಡ್‌ನಲ್ಲಿ ಎದ್ದು ಕಾಣುವಂತೆ ಇತ್ತು.

Under-19s Asia Cup: India U19 won by 10 wickets

ನೇಪಾಳ ತಂಡಕ್ಕೆ ವೇಗದ ಬೌಲರ್ ರಾಜ್ ಲಿಂಬಾನಿ ಕಾಡಿದರು. ಭಾರತೀಯ ಬೌಲರ್‌ಗಳ ಅಮೋಘ ಬೌಲಿಂಗ್‌ನ ಆಧಾರದ ಮೇಲೆ ಭಾರತವು ನೇಪಾಳ ತಂಡ 22.1 ಓವರ್‌ಗಳಲ್ಲಿ 52 ರನ್‌ಗಳಿಗೆ ಆಲೌಟ್ ಆಯಿತು.

ಭಾರತದ ನಾಯಕ ಉದಯ್ ಸಹರಾನ್ ಟಾಸ್ ಗೆದ್ದು ನೇಪಾಳವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಭಾರತದ ಬೌಲರ್‌ಗಳು ತಮ್ಮ ನಾಯಕನ ಈ ನಿರ್ಧಾರ ಸರಿ ಎಂದು ಸಾಬೀತುಪಡಿಸಿದರು. ಟೀಮ್ ಇಂಡಿಯಾದ ಯಂಗ್ ಬೌಲರ್‌ಗಳು ನೇಪಾಳದ ವಿಕೆಟ್‌ಗಳನ್ನು ಪಡೆಯುತ್ತಾ ಸಾಗಿದರು. ಇದರಿಂದಾಗಿ ನೇಪಾಳ ತಂಡವು ಅಲ್ಪಮೊತ್ತ ಸೇರಿಸಿ ಪೆವಿಲಿಯನ್‌ಗೆ ಮರಳಿತು. ಭಾರತದ ಪರ ರಾಜ್ ಲಿಂಬಾನಿ ಅಬ್ಬರಿಸಿದರು. ಇವರು ತಮ್ಮ 9.1 ಓವರ್‌ಗಳಲ್ಲಿ 3 ಮೇಡನ್‌ ಸಹಿತ 13 ರನ್ ನೀಡಿ ಏಳು ವಿಕೆಟ್ ಪಡೆದರು.

ನೇಪಾಳ ನೀಡಿದ 53 ರನ್‌ಗಳ ಗುರಿಯನ್ನು ಟೀಂ ಇಂಡಿಯಾ 7.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮುಟ್ಟಿತು. ಆರಂಭಿಕರಾದ ಅರ್ಶಿನ್ ಕುಲಕರ್ಣಿ 30 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 43 ರನ್ ಗಳಿಸಿದರೆ, ಆದರ್ಶ್ ಸಿಂಗ್ 2 ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿ ಅಜೇಯರಾಗಿ ಉಳಿದರು.

ಇದು 3 ಪಂದ್ಯಗಳಲ್ಲಿ ಭಾರತ ತಂಡದ ಎರಡನೇ ಗೆಲುವು. 'ಎ' ಗುಂಪಿನಲ್ಲಿ ಭಾರತ 4 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ತಲುಪಿದೆ. ಈ ಗುಂಪಿನಲ್ಲಿ ಪಾಕಿಸ್ತಾನ ತಂಡ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ಕೂಡ 4 ಅಂಕಗಳನ್ನು ಹೊಂದಿದೆ ಆದರೆ ನೆಟ್ ರನ್ ರೇಟ್ ಆಧಾರದ ಮೇಲೆ ಭಾರತ ತಂಡವು ಪಾಕಿಸ್ತಾನಕ್ಕಿಂತ ಮುಂದಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದರೆ, ಎರಡನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋತಿತ್ತು. ಮೂರನೇ ಪಂದ್ಯದಲ್ಲಿ ಭಾರತ ತಂಡ ನೇಪಾಳವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್

ಅಂಡರ್‌ 19 ನೇಪಾಳ: 22.1 ಓವರ್‌ಗೆ 52
ಅಂಡರ್ 19 ಭಾರತ: 7.1 ಓಔರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 57

Story first published: Tuesday, December 12, 2023, 15:49 [IST]
Other articles published on Dec 12, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+