Under-19s Asia Cup: ಮೊಹಮ್ಮದ್ ಅಮನ್ ಶತಕ: ಜಪಾನ್ ವಿರುದ್ಧ ಭಾರತಕ್ಕೆ 211 ರನ್ ಜಯ
ನಾಯಕ ಮೊಹಮ್ಮದ್ ಅಮನ್ ಅಜೇಯ 122 ಹಾಗೂ ಟೀಮ್ ಇಂಡಿಯಾ ಬೌಲರ್‌ಗಳ ಕರಾರುವಕ್ ದಾಳಿಗೆ ಅಂಡರ್ 19 ಏಷ್ಯಾ ಕಪ್‌ನಲ್ಲಿ ಜಪಾನ್ ನಲುಗಿದೆ. ಈ ಮೂಲಕ ಟೀಮ್ ಇಂಡಿಯಾ ಸರಣಿಯಲ್ಲಿ ಮೊದಲ ಗೆಲುವಿನಗೆ ನಗೆ ಬೀರಿದೆ. ಆಡಿದ ಎರಡು ಪಂದ್ಯಗಳಲ್ಲಿ, 1 ಜಯ, 1 ಸೋಲು ಕಂಡಿದ್ದು, 2 ಅಂಕಗಳೊಂದಿಗೆ "ಎ" ಗುಂಪಿನ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಭಾರತ ತನ್ನ ಮುಂದಿನ ಪಂದ್ಯವನ್ನು ಯುಎಇ ವಿರುದ್ಧ ಇದೇ ಬುಧವಾರ ಆಡಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 339 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಪಾನ್ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 128 ರನ್ ಸೇರಿಸಿ, 211 ರನ್‌ಗಳ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ಜೊತೆಗೂಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 65 ರನ್ ಸೇರಿಸಿತು. ವೈಭವ್ 23 ರನ್‌ಗಳಿಗೆ ಪೆವಿಲಿಯನ್ ಸೇರಿದರು. ಉತ್ತಮವಾಗಿ ಆಡುತ್ತಿದ್ದ ಆಯುಷ್ ಮಾತ್ರೆ 29 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 54 ರನ್ ಸಿಡಿಸಿದರು.
ಕರ್ನಾಟಕದ ಕಾರ್ತಿಕೇಯ ಅರ್ಧಶತಕ
ಮಧ್ಯಮ ಕ್ರಮಾಂಕದಲ್ಲಿ ಅಂದ್ರೆ ಸಿದ್ದಾರ್ಥ್ 35 ರನ್‌ಗಳಿಗೆ ಆಟ ಮುಗಿಸಿದರು. ನಾಲ್ಕನೇ ವಿಕೆಟ್‌ಗೆ ಕರ್ನಾಟಕದ ಕೆಪಿ ಕಾರ್ತಿಕೇಯ ಹಾಗೂ ಮೊಹಮ್ಮದ್ ಅಮನ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಅಧಾರವಾಯಿತು. ಕರ್ನಾಟಕದ ಉದಯೋನ್ಮುಖ ಆಟಗಾರ ಕಾರ್ತಿಕೇಯ 49 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 57 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ನಾಯಕನ ಆರ್ಭಟ
ನಂತರ ಬಂದ ಬ್ಯಾಟರ್‌ಗಳು ನೆಲಕಚ್ಚಿ ಬ್ಯಾಟ್ ಮಾಡಲಿಲ್ಲ. ಆದರೆ ಒಂದು ತುದಿಯನ್ನು ಗಟ್ಟಿಯಾಗಿ ಹಿಡಿದು ಇಟ್ಟುಕೊಂಡಿದ್ದ ನಾಯಕ ಮೊಹಮ್ಮದ್ ಅಮನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನಿಡಿದರು. ಇವರು 118 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 122 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ತಂಡದಲ್ಲಿರುವ ಇನ್ನೋರ್ವ ಕನ್ನಡಿಗ ಹಾರ್ದಿಕ್ ರಾಜ್ 12 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 25 ರನ್ ಬಾರಿಸಿದರು.
ಉತ್ತಮ ಆರಂಭ
ಗುರಿಯನ್ನು ಬೆನ್ನಟ್ಟಿದ ಜಪಾನ್ ತಂಡದ ಉತ್ತಮ ಆರಂಭವಾಗಿತ್ತು. ಹ್ಯೂಗೋ ಕೆಲ್ಲಿ ಹಾಗೂ ನಿಹಾರ್ (14) ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲ ವಿಕೆಟ್‌ಗೆ 50 ರನ್ ಸಿಡಿಸಿತು. ಉಳಿದ ಬ್ಯಾಟರ್ ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಚಾರ್ಲ್ಸ್ ಹಿಂಜ್ 35 ರನ್ ಸಿಡಿಸಿದರು. ಹ್ಯೂಗೋ ಕೆಲ್ಲಿ 6 ಬೌಂಡರಿ ನೆರವಿನಿಂದ 50 ರನ್ ಸಿಡಿಸಿದರು.
ಟೀಮ್ ಇಂಡಿಯಾ ಪರ ಚೇತನ್ ಶರ್ಮಾ, ಕರ್ನಾಟಕದ ಹಾರ್ದಿಕ್ ರಾಜ್, ಕೆಪಿ ಕಾರ್ತಿಕೇಯ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications