For Quick Alerts
ALLOW NOTIFICATIONS  
For Daily Alerts
 

Single-Handed Catches in IPL: ಪಂದ್ಯದ ಗತಿಯನ್ನೇ ಬದಲಿಸಿದ ಕ್ಯಾಚ್‌ಗಳು: ಆರ್‌ಸಿಬಿ ಆಟಗಾರರ ಹಿಡಿದ ಕ್ಯಾಚ್‌ಗಳು ಅಮೋಘ

ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗುತ್ತದೆ. ಈ ವೇಳೆ ಎಲ್ಲರ ಕಣ್ಣುಗಳು ಸ್ಟಾರ್ ಆಟಗಾರರ ಮೇಲೆ ನೆಟ್ಟಿರುತ್ತವೆ. ಸ್ಟಾರ್ ಆಟಗಾರರು ಸಹ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಿಂದ ತಂಡಕ್ಕೆ ಆಧಾರವಾಗುತ್ತಾರೆ. ಇನ್ನು ಹಲವು ಬಾರಿ ತಮ್ಮ ಫೀಲ್ಡಿಂಗ್ ಮೂಲಕ ತಂಡಕ್ಕೆ ನೆರವಾಗುತ್ತಾರೆ. ಕಳೆದ 17 ಐಪಿಎಲ್ ಆವೃತ್ತಿಗಳಲ್ಲಿ ಅದೆಷ್ಟೋ ಕ್ಯಾಚ್‌ಗಳನ್ನು ಪಡೆದು ಫೀಲ್ಡರ್‌ಗಳು ತಂಡಕ್ಕೆ ನೆರವಾಗಿದ್ದಾರೆ. ಈ ವೇಳೆ ಪಂದ್ಯದ ಫಲಿತಾಂಶವನ್ನೇ ಬುಡಮೇಲು ಮಾಡಿದ್ದಾರೆ. ಅಂತಹ ಕೆಲವು ಕ್ಯಾಚ್‌ಗಳ ವಿವರ ಇಲ್ಲಿದೆ.

ಈ ಸಾಲಿನಲ್ಲಿ ಅದೆಷ್ಟೋ ಕ್ಯಾಚ್‌ಗಳನ್ನು ನಾವು ಕಾಣಬಹುದು. ಆದ್ರೆ ಈ ವರದಿಯಲ್ಲಿ ಆಯ್ದ ಕೆಲವು ಸಿಂಗಲ್‌ ಹ್ಯಾಡ್‌ ಕ್ಯಾಚ್‌ಗಳ ಬಗ್ಗೆ ವರದಿಯನ್ನು ನೀಡಿದ್ದೇವೆ.

Unforgettable Single-Handed Catches in IPL History That Changed the Game

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯಕ್ಕೆ ಆಗ ಬೆಂಗಳೂರು ಆತಿಥ್ಯ ನೀಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬೆಂಗಳೂರು 20 ಓವರ್‌ಗಳಲ್ಲಿ 5 ವಿಕೆಟ್‌ಗೆ 218 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಗೆ ಆರ್‌ಸಿಬಿ ಆಘಾತ ನೀಡಿತು. ಇದೇ ಪಂದ್ಯದಲ್ಲಿ 14.5 ಓವರ್‌ನಲ್ಲಿ ಸಿರಾಜ್‌ ಎಸೆತವನ್ನು ಮಿಚೆಲ್ ಸ್ಯಾಂಟ್ನರ್‌ ಮಿಡ್ ಆಫ್‌ ತಲೆಯ ಮೇಲೆ ಹೊಡೆಯಲು ಸಿದ್ಧರಾಗಿದ್ದರು. ಆಗ 30 ಯಾರ್ಡ್‌ ಸರ್ಕಲ್‌ಗೂ ಕೊಂಚ ಹಿಂದೆ ನಿಂತಿದ್ದ ಫಾಫ್‌ ಡುಪ್ಲೇಸಿಸ್‌ ಹಿಡಿದ ಆ ಅದ್ಭುತ ಕ್ಯಾಚ್ ಪಂದ್ಯದ ಚಿತ್ರಣವನ್ನೇ ಬದಲು ಮಾಡಿತು. ಈ ಪಂದ್ಯವನ್ನು ಆರ್‌ಸಿಬಿ 27 ರನ್‌ಗಳಿಂದ ಗೆದ್ದಿತು.

ಡೆಲ್ಲಿ ಹಾಗೂ ಬೆಂಗಳೂರು ನಡುವಿನ ಪಂದ್ಯವೂ ಸಹ 2018ರಲ್ಲಿ ಬೆಂಗಳೂರಿನಲ್ಲೇ ನಡೆದಿತ್ತು. ಈ ಪಂದ್ಯದಲ್ಲಿ ಬೆಂಗಳೂರು ಗುರಿಯನ್ನು ಬೆನ್ನಟ್ಟಿದಾಗ ಟ್ರೆಂಟ್‌ ಬೋಲ್ಟ್ ಹಿಡಿದ ಕ್ಯಾಚ್‌ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಹರ್ಷಲ್ ಪಟೇಲ್‌ ಎಸೆತವನ್ನು ವಿರಾಟ್ ಕೊಹ್ಲಿ ಡಿಪ್ ಸ್ಕ್ವೇರ್‌ ಲೆಗ್‌ನಲ್ಲಿ ಸಿಕ್ಸರ್ ಬಾರಿಸಲು ಮುಂದಾದರು. ಆಗ ಟ್ರೆಂಟ್‌ ಬೋಲ್ಟ್ ಸೂಪರ್‌ ಮ್ಯಾನ್‌ ರೀತಿ ಕ್ಯಾಚ್ ಪಡೆದು ಪಂದ್ಯದ ದಿಕ್ಕನೇ ಬದಲಿಸಿದರು.

ಮ್ಯಾಕ್ಸ್‌ವೆಲ್‌ ಕಮಾಲ್‌

ಇನ್ನು 2022ರ ಐಪಿಎಲ್‌ನಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ ಸಹ ಸೂಪರ್‌ ಮ್ಯಾನ್‌ ರೀತಿಯ ಕ್ಯಾಚ್ ಪಡೆದು ಎಲ್ಲರ ಚಿತ್ತ ಕದ್ದಿದ್ದಾರೆ. ಜೋಶ್‌ ಹ್ಯಾಜಲ್‌ವುಡ್ ಎಸೆದ ಇನಿಂಗ್ಸ್‌ ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಗ್ಲೇನ್‌ ಮ್ಯಾಕ್ಸ್‌ವೆಲ್‌ ಅಮೋಘ ಕ್ಯಾಚ್ ಪಡೆದರು. ಈ ಪಂದ್ಯದಲ್ಲಿ ಶುಭಮನ್‌ ಗಿಲ್‌ ಆಫ್‌ ಸ್ಟಂಪ್‌ ಆಚೆಯ ಚೆಂಡನ್ನು ಕೆಣಕಿದಾಗ ಸ್ಲಿಪ್‌ನಲ್ಲಿದ್ದ ಗ್ಲೇನ್‌ ಅಮೋಘ ಕ್ಯಾಚ್‌ ಪಡೆದರು.

Unforgettable Single-Handed Catches in IPL History That Changed the Game

ರಾಯುಡ್ ಅಮೋಘ

ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಣ ಪಂದ್ಯ 202ರಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ್ದ ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿ ಸಾಧರಣ ಪ್ರದರ್ಶನ ನೀಡಿತ್ತು. ಈ ವೇಳೆ ರವೀಂದ್ರ ಜಡೇಜಾ ಎಸೆತವನ್ನು ಆರ್‌ಸಿಬಿ ತಂಡದ ಆಕಾಶ್‌ ದೀಪ್‌ ಮಿಡ್‌ ಆಫ್‌ನತ್ತ ತಳ್ಳಿದ್ರು. ಆಗ ಅಂಬಟಿ ರಾಯುಡು ತಮ್ಮ ಎಡಕ್ಕೆ ನೆಗೆದು ಹಿಡಿದ ಕ್ಯಾಚ್‌ ಅಭಿಮಾನಿಗಳ ಮನಸ್ಸಿನಲ್ಲೀ ಈಗಲೂ ಹಸಿರಾಗಿದೆ.

ಡೆವಿಡ್‌ ಹಸಿ ಕ್ಲಾಸಿಕ್

2010ರಲ್ಲಿ ಡೆಲ್ಲಿ ಹಾಗೂ ಕೆಕೆಆರ್‌ ತಂಡಗಳ ನಡುವೆ ಪಂದ್ಯ ನಡೆದಿತ್ತು. ಡೆಲ್ಲಿ ಡೆರ್‌ ಡೆವಿಲ್ಸ್ ತಂಡದ ಪರ ಪೌಲ್‌ ಕಾಲಿಂಗ್‌ ವುಡ್‌ 53 ರನ್‌ ಬಾರಿಸಿ ಅಬ್ಬರಿಸುತ್ತಿದ್ದರು. ಈ ವೇಳೆ ಇನಿಂಗ್ಸ್‌ನ ಕೊನೆಯ ಓವರ್‌ನ ಮೊದಲ ಎಸೆತವನ್ನು ಲಾಂಗ್‌ ಆನ್‌ ಬೌಂಡರಿ ಮೇಲೆ ಬಾರಿಸಿದರು. ಈ ವೇಳೆ ಅಲ್ಲಿ ಫೀಲ್ಡ್ ಮಾಡುತ್ತಿದ್ದ ಡೇವಿಡ್‌ ಹಸ್ಸಿ ಅತ್ಯದ್ಭುತ ಕ್ಯಾಚ್ ಪಡೆದು ಮಿಂಚಿದರು.

ರಮಣದೀಪ್‌ ಅಮೋಘ

ಎಲ್‌ಎಸ್‌ಜಿ ಹಾಗೂ ಕೆಕೆಆರ್‌ ನಡುವಣ ಪಂದ್ಯ ನಡೆಯಿತು. ಈ ವೇಳೆ ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 235 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಲು ಬಂದಿದ್ದ ಎಲ್‌ಸಿಜಿ ಆರಂಭಿಕ ಆಟಗಾರ ಅರ್ಶಿನ್ ಕುಲಕರ್ಣಿ ಅವರು ರಮಣದೀಪ್‌ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದ್ರು. ಮಿಚೆಲ್‌ ಸ್ಟಾರ್ಕ್‌ ಅವರ ಮೊದಲ ಓವರ್‌ನ ಕೊನೆಯ ಎಸೆತ ಅರ್ಶಿನ್ ಕುಲಕರ್ಣಿ ಅವರ ಬ್ಯಾಟ್‌ಗೆ ತಗುಲಿ ಗಾಳಿಯಲ್ಲಿ ತೇಲಿತು. ರಮಣದೀಪ್‌ ಸಿಂಗ್‌ 21 ಮೀಟರ್ ಓಡಿ ಹೋಗಿ ಅದ್ಭುತ ಕ್ಯಾಚ್ ಪಡೆದರು.

ಕ್ರಿಸ್‌ ಲಿಯಾನ್ ಆಕರ್ಷಕ

2014ರ ಐಪಿಎಲ್‌ ಶಾರ್ಜಾದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 150 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆರ್‌ಸಿಬಿ ಉತ್ತಮ ಸ್ಥಿತಿಯಲ್ಲಿತ್ತು. ಆರ್‌ಸಿಬಿ ಗೆಲುವಿಗೆ ಕೊನೆಯ ಓವರ್‌ನಲ್ಲಿ 10 ರನ್‌ ಅವಶ್ಯಕತೆ ಇತ್ತು. ಕ್ರಿಸ್‌ನಲ್ಲಿ ಸ್ಫೋಟಕ ಬ್ಯಾಟರ್ ಎಬಿಡಿ ವಿಲಿಯರ್ಸ್ ಇದ್ದರು. ಕನ್ನಡಿಗ ವಿನಯ್‌ ಕುಮಾರ್‌ ಎಸೆತವನ್ನು ಡಿಪ್‌ ಮಿಡ್‌ ವಿಕೆಟ್‌ ಮೇಲೆ ಸಿಕ್ಸರ್ ಬಾರಿಸಲು ಮುಂದಾದ್ರು. ಆದ್ರೆ ಅಲ್ಲಿ ಫಿಲ್ಡ್ ಮಾಡ್ತಾ ಇದ್ದ ಕ್ರಿಸ್ ಲಿಯಾನ್‌ ಅಮೋಘ ಕ್ಯಾಚ್ ಪಡೆದು, ಪಂದ್ಯದ ಗತಿಯನ್ನು ಬದಲಿಸಿದರು. ಈ ಪಂದ್ಯವನ್ನು ಆರ್‌ಸಿಬಿ 2 ರನ್‌ಗಳಿಂದ ಸೋತಿತ್ತು.

ಸೂಪರ್ ಮ್ಯಾನ್‌ ಎಬಿಡಿ

ಎಸ್‌ಆರ್‌ಎಚ್‌ ವಿರುದ್ಧ ಮೊದಲು ಬ್ಯಾಟ್‌ ಮಾಡಿದ್ದ ಆರ್‌ಸಿಬಿ ಸವಾಲಿನ ಮೊತ್ತವನ್ನು ಕಲೆ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ವೇಳೆ ಇನಿಂಗ್ಸ್‌ನ 8ನೇ ಓವರ್‌ ಮೋಯಿನ್ ಅಲಿ ಮಾಡಿದ್ರು. ಈ ವೇಳೆ ಅಲೆಕ್ಸ್‌ ಹೆಲ್ಸ್‌ ಸಿಕ್ಸರ್‌ ಬಾರಿಸಲು ಮುಂದಾದ್ರು. ಆದ್ರೆ ಬೌಂಡರಿ ಗೆರೆಯಲ್ಲಿ ಫೀಲ್ಡ್ ಮಾಡ್ತಾ ಇದ್ದ ಎಬಿಡಿ ಸೂಪರ್‌ ಮ್ಯಾನ್‌ ರೀತಿ ಕ್ಯಾಚ್ ಪಡೆದು ಅಬ್ಬರಿಸಿದರು. ಈ ಕ್ಯಾಚ್‌ ಅಭಿಮಾನಿಗಳಿಗೆ ಎಬಿಡಿ ಇನ್ನು ಹತ್ತಿರವಾಗಲು ಸಹಾಯವಾಯಿತು.

ಎಂದು ಮರೆಯದ ಕ್ಯಾಚ್‌

ರಾಜಸ್ಥಾನ ಹಾಗೂ ಮುಂಬೈ ನಡುವಣ ಪಂದ್ಯದ ವೇಳೆ ಕಿರನ್‌ ಪೋಲಾರ್ಡ್‌ ಕ್ಯಾಚ್‌ ಅವರ ಫೀಲ್ಡಿಂಗ್ ಕ್ಷಮತೆಯನ್ನು ಎತ್ತಿ ತೋರಿಸುವಂತೆ ಇತ್ತು. ಹರ್ಭಜನ್‌ ಬೌಲಿಂಗ್‌ನಲ್ಲಿ ರಾಜಸ್ಥಾನ ತಂಡದ ಕೂಪರ್‌ ಸಿಕ್ಸರ್ ಬಾರಿಸಲು ಮುಂದಾದ್ರು. ಆದ್ರೆ ಚೆಂಡು ಹೋಗುವ ದಾರಿಯಲ್ಲಿ ಪೊಲಾರ್ಡ್ ಎಂಬ ದೈತ್ಯ ಅದಕ್ಕೆ ಅಡ್ಡಿಯಾದ. ಹಾರಿ ಬಲಗೈಯಿಂದ ಕ್ಯಾಚ್ ಪಡೆದರು. ಆದ್ರೆ ಆಯಾ ತಪ್ಪುವ ಲಕ್ಷಣಗಳು ಬಂದಾಗ ಅವರು ಚೆಂಡನ್ನು ಗಾಳಿಯಲ್ಲಿ ತೂರಿ ಬೌಂಡ್ರಿ ಗೆರೆ ದಾಟಿದ್ರು. ಅಲ್ಲದೆ ಬೌಂಡರಿ ಗೆರೆಯ ಹೊರಗಿನಿಂದ ನೆಗೆದು ಅದ್ಭುತ ಕ್ಯಾಚ್ ಕಂಪ್ಲೀಟ್ ಮಾಡಿದ್ರು.

ರೈನಾ ಮಾಸ್ಟರ್‌ ಕ್ಲಾಸ್

ಕೆಕೆಆರ್‌ ಹಾಗೂ ಗುಜರಾತ್ ಲಯನ್ಸ್ ನಡುವಣ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕೆಕೆಆರ್ ಪರ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ ಅವರಿಗೆ ಡ್ವೇನ್‌ ಸ್ಮಿತ್ ಖೆಡ್ಡಾ ತೋಡಿದ್ರು. ಸೂರ್ಯ ಕಟ್‌ ಮಾಡಿ ಬೌಂಡರಿ ಬಾರಿಸುವ ಯತ್ನಕ್ಕೆ ರೈನಾ ಬ್ರೇಕ್ ಹಾಕಿದ್ರು. ಸ್ಲಿಪ್‌ನಲ್ಲಿ ಸುರೇಶ್‌ ರೈನಾ ಅಮೋಘ ಕ್ಯಾಚ್ ಪಡೆದರು.

Story first published: Tuesday, March 18, 2025, 7:08 [IST]
Other articles published on Mar 18, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+