ಆಗಸ್ಟ್ 10 ಶನಿವಾರ, ಕ್ರಿಕೆಟ್ ಲೋಕದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಕೆಲವು ದಾಖಲೆಗಳು ಅಪರೂಪವಾಗಿವೆ. ಇದೇ ರೀತಿಯ ದಾಖಲೆ ಇತ್ತೀಚೆಗೆ ಮುಕ್ತಾಯವಾದ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲಿ ಆಗಿದೆ.
ಆತಿಥೇಯ ಶ್ರೀಲಂಕಾ 27 ವರ್ಷಗಳ ನಂತರ ಭಾರತ ವಿರುದ್ಧ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಹೊಸದಾಗಿ ನೇಮಕಗೊಂಡ ನಾಯಕ ಚರಿತ್ ಅಸಲಂಕಾ ನೇತೃತ್ವದ ಶ್ರೀಲಂಕಾ ತಂಡವು ಮೊದಲ ಪಂದ್ಯ ಟೈ ಆದ ನಂತರ ಸರಣಿಯನ್ನು 2-0 ರಿಂದ ವಶಪಡಿಸಿಕೊಂಡಿದೆ.

ರೋಹಿತ್ ಶರ್ಮಾ ನೇತೃತ್ವದ ತಂಡದ ವಿರುದ್ಧದ ಎರಡನೇ ಮತ್ತು ಮೂರನೇ ಏಕದಿನ ಪಂದ್ಯದಲ್ಲಿ ಕ್ರಮವಾಗಿ 32 ರನ್ ಮತ್ತು 110 ರನ್‌ಗಳಿಂದ ಸೋಲು ಕಂಡಿತ್ತು. ಆದರೆ ಈ ಸೋಲು-ಗೆಲುವಿನ ನಡುವೆ ಉಭಯ ತಂಡಗಳ ಸ್ಪಿನ್ನರ್‌ಗಳು ಅಪರೂಪದ ದಾಖಲೆಗಳನ್ನು ಮಾಡಿದ್ದಾರೆ.
ಇಡೀ ಏಕದಿನ ಸರಣಿಯುದ್ದಕ್ಕೂ ಉಭಯ ತಂಡಗಳ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದರು. ಏಕೆಂದರೆ ಎರಡೂ ತಂಡಗಳು ಎಲ್ಲಾ ಮೂರು ಪಂದ್ಯಗಳಲ್ಲಿ ಮೂರಕ್ಕಿಂತ ಹೆಚ್ಚು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದ್ದವು. ಸ್ಪಿನ್ ಸ್ನೇಹಿ ಪಿಚ್‌ನ ಲಾಭ ಪಡೆದ ಬೌಲರ್‌ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.
ಮೊದಲ ಬಾರಿಗೆ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ 15 ಕ್ಕೂ ಹೆಚ್ಚು ಬ್ಯಾಟರ್‌ಗಳು ಎಲ್‌ಬಿಡ್ಲ್ಯೂ ಔಟ್ ಆಗಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾದ ಸ್ಪಿನ್ನರ್‌ಗಳು ಹೆಚ್ಚು ವಿಕೆಟ್ ಪಡೆದು ಮಿಂಚಿದರು.
ಶ್ರೀಲಂಕಾ ಪರ ಜೆಫ್ರಿ ವಾಂಡರ್ಸೆ 8 ವಿಕೆಟ್ ಪಡೆದರೆ, ಡುನಿತ್ ವೆಲ್ಲಾಘೆ 7 ವಿಕೆಟ್ ಕಬಳಿಸಿ ಏಕದಿನ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ 18 ಬ್ಯಾಟರ್‌ಗಳು ಎಲ್‌ಬಿಡ್ಲ್ಯೂ ಆಗಿ ಪೆವಿಲಿಯನ್‌ಗೆ ಹಿಂದಿರುಗುವುದು ಕೂಡ ಒಂದು ವಿಶೇಷ ದಾಖಲೆ ಆಗಿದೆ.
ಶ್ರೀಲಂಕಾ ತಂಡದ ಸ್ಪಿನ್ನರ್‌ಗಳು ಒಟ್ಟು 14 ಟೀಮ್ ಆಟಗಾರರನ್ನು ಎಲ್‌ಬಿಡಬ್ಲ್ಯೂ ಮೂಲಕ ಪೆವಿಲಿಯನ್‌ಗೆ ಕಳುಹಿಸಿದರು. ಆದರೆ ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಕೇವಲ ಎಲ್‌ಬಿಡಬ್ಲ್ಯೂ ಮೂಲಕ 3 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. 2018 ರಲ್ಲಿ ಯುಎಇ ಮತ್ತು ಜಿಂಬಾಬ್ವೆ ನಡುವಿನ ಏಕದಿನ ಸರಣಿಯಲ್ಲಿ ಸ್ಪಿನ್ನರ್‌ಗಳ ವಿರುದ್ಧ ಒಟ್ಟು 13 ಆಟಗಾರರು ಎಲ್‌ಬಿಡಬ್ಲ್ಯೂ ಆಗಿದ್ದರು.
ಭಾರತ vs ಶ್ರೀಲಂಕಾ (ವರ್ಷ 2024) - 18 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು
ಯುಎಇ ವಿರುದ್ಧ ಜಿಂಬಾಬ್ವೆ (2018) - 13 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು
ಪಾಕಿಸ್ತಾನ vs ದಕ್ಷಿಣ ಆಫ್ರಿಕಾ (2013) - 12 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು
ಪಾಕಿಸ್ತಾನ vs ನ್ಯೂಜಿಲೆಂಡ್ (2009) - 11 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು
ಬಾಂಗ್ಲಾದೇಶ vs ಅಫ್ಘಾನಿಸ್ತಾನ (2016) - 11 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು
ದಕ್ಷಿಣ ಆಫ್ರಿಕಾ vs ಭಾರತ (2018) - 11 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು