ಯುಎಇ vs ನ್ಯೂಜಿಲೆಂಡ್: 2ನೇ ಟಿ20 ಪಂದ್ಯ, ಲೈವ್ ಸ್ಕೋರ್, ಆಡುವ ಬಳಗ
ಯುನೈಟೆಡ್ ಅರಬ್ ಎಮಿರೇಟ್ಸ್ ಪ್ರವಾಸ ಕೈಗೊಂಡಿರುವ ನ್ಯೂಜಿಲೆಂಡ್ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿದೆ. ಈಗಾಗಲೇ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ 19 ರನ್‌ಗಳ ಅಂತರ ಗೆಲುವು ಸಾಧಿಸಿದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯದಲ್ಲಿ ಎರಡು ತಂಡಗಳು ಮುಖಾಮುಖಿಯಾಗಿದ್ದು ಕುತೂಹಲ ಮೂಡಿಸಿದೆ. ಈ ಪಂದ್ಯದಲ್ಲಿ ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ಟಾಸ್ ಗೆದ್ದುಕೊಂಡಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ನಿರೀಕ್ಷೆಗೆ ಮೀರಿ ಪೈಪೋಟಿ ನೀಡುವಲ್ಲಿ ಯುಎಇ ಯಶಸ್ವಿಯಾಗಿತ್ತು. ಅದರಲ್ಲೂ ಕಿವೀಸ್‌ನ ಬ್ಯಾಟಂಗ್ ವಿಭಾಗಕ್ಕೆ ತಡೆಯೊಡ್ಡುವಲ್ಲಿ ಒಂದು ಹಂತಕ್ಕೆ ಯುಎಇ ಬೌಲರ್‌ಗಳು ಯಶಸ್ವಿಯಾಗಿದ್ದರು. ಅದೇ ಆತ್ಮವಿಶ್ವಾಸದಲ್ಲಿರುವ ಯುಎಇ ಇಂದು ಎರಡನೇ ಪಂದ್ಯಕ್ಕೆ ಕಣಕ್ಕಿಳಿಯುತ್ತಿದೆ.

ಇನ್ನು ಈ ಪಂದ್ಯದಲ್ಲಿ ಯುಎಇ ತಂಡ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುತ್ತಿದೆ. ಮುಹಮ್ಮದ್ ಜವಾದುಲ್ಲಾ ಆಡುವ ಬಳಗದಿಂದ ಹೊರಬಿದ್ದಿದ್ದು ಜುನೈದ್ ಸಿದ್ದೀಕಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ನ್ಯೂಜಿಲೆಂಡ್ ತಂಡ ಯಾವುದೇ ಬದಲಾವನೆ ಮಾಡಿಕೊಳ್ಳದೆ ಕಳೆದ ಪಂದ್ಯದಲ್ಲಿ ಆಡಿದ ಬಳಗದೊಂದಿಗೆ ಕಣಕ್ಕಿಳಿಯುತ್ತಿದೆ.
Live ಸ್ಕೋರ್ ಹೀಗಿದೆ
ಯುಎಇ ಆಡುವ ಬಳಗ: ಮುಹಮ್ಮದ್ ವಸೀಮ್ (ನಾಯಕ), ಆರ್ಯನ್ಶ್ ಶರ್ಮಾ (ವಿಕೆಟ್ ಕೀಒರ್), ವೃತ್ಯ ಅರವಿಂದ್, ಆಸಿಫ್ ಖಾನ್, ಅಂಶ್ ಟಂಡನ್, ಬಾಸಿಲ್ ಹಮೀದ್, ಅಲಿ ನಸೀರ್, ಅಯಾನ್ ಅಫ್ಜಲ್ ಖಾನ್, ಮೊಹಮ್ಮದ್ ಫರಾಜುದ್ದೀನ್, ಜುನೈದ್ ಸಿದ್ದಿಕ್, ಜಹೂರ್ ಖಾನ್
ಬೆಂಚ್: ಸಂಚಿತ್ ಶರ್ಮಾ, ಜಶ್ ಗಿಯಾನಾನಿ, ಮುಹಮ್ಮದ್ ಜವಾದುಲ್ಲಾ, ಎಥಾನ್ ಡಿಸೋಜಾ, ಲವ್‌ಪ್ರೀತ್ ಸಿಂಗ್
ನ್ಯೂಜಿಲೆಂಡ್ ಆಡುವ ಬಳಗ: ಟಿಮ್ ಸೀಫರ್ಟ್, ಚಾಡ್ ಬೋವ್ಸ್, ಡೇನ್ ಕ್ಲೀವರ್ (ವಿಕೆಟ್ ಕೀಪರ್), ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ರಚಿನ್ ರವೀಂದ್ರ, ಕೋಲ್ ಮೆಕಾಂಚಿ, ಕೈಲ್ ಜೇಮಿಸನ್, ಟಿಮ್ ಸೌಥಿ (ನಾಯಕ), ಬೆನ್ ಲಿಸ್ಟರ್
ಬೆಂಚ್: ವಿಲ್ ಯಂಗ್, ಜಾಕೋಬ್ ಡಫಿ, ಡೀನ್ ಫಾಕ್ಸ್‌ಕ್ರಾಫ್ಟ್, ಆದಿತ್ಯ ಅಶೋಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications