ಚೊಚ್ಚಲ ಬಾರಿ ಅಂತಾರಾಷ್ಟ್ರೀಯ ಏಕದಿನಕ್ಕೆ ಸ್ಥಾನ ಕಾದಿರಿಸಿದ ಯುಎಸ್‌ಎ!

ವಿಂಡ್ಹೋಕ್, ಏಪ್ರಿಲ್ 25: ವರ್ಲ್ಡ್ ಕ್ರಿಕೆಟ್ ಲೀಗ್ (ಡಬ್ಲ್ಯೂಸಿಎಲ್) ಡಿವಿಷನ್ 2 ಪಂದ್ಯದಲ್ಲಿ ಹಾಂಗ್‌ಕಾಂಗ್ ತಂಡವನ್ನು 84 ರನ್‌ಗಳಿಂದ ಸೋಲಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಅಮೆರಿಕಾ ಕ್ರಿಕೆಟ್ ತಂಡ ಬುಧವಾರ (ಏಪ್ರಿಲ್ 24) ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಾತ್ಕಾಲಿಕ ಮಟ್ಟಿಗೆ ನೆಲೆಯೂರುವಲ್ಲಿ ಯಶಸ್ವಿಯಾಗಿದೆ.
ಡಬ್ಲ್ಯೂಸಿಎಲ್ ಆರಂಭಿಕ ಪಂದ್ಯದಲ್ಲಿ ಸೋತು ಮತ್ತೆ ಜಯದ ದಾರಿಗೆ ಮರಳಿದ ಯುಎಸ್‌ಎ ತಂಡ ನಂತರ ಸತತ ಮೂರು ಪಂದ್ಯಗಳನ್ನು ಗೆದ್ದು, 2004ರ ಚಾಂಪಿಯನ್ಸ್ ಟ್ರೋಫಿ ಬಳಿಕ ಇದೇ ಚೊಚ್ಚಲ ಬಾರಿಗೆ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಸ್ಥಾನ ಕಾದಿರಿಸಿಕೊಂಡಿದೆ.
ಡಬ್ಲ್ಯೂಸಿಎಲ್ ಟೂರ್ನಿ ಕೊನೆಗೊಂಡಾಗ ಅಗ್ರ ನಾಲ್ಕರೊಳಗೆ ಸ್ಥಾನ ಪಡೆದ ತಂಡಗಳು ಅಂತಾರಾಷ್ಟ್ರೀಯ ಏಕದಿನದಲ್ಲಿ ತಾತ್ಕಾಲಿಕವಾಗಿ ಸ್ಥಾನಗಳನ್ನು ಉಳಿಸಿಕೊಳ್ಳಲಿವೆ. ಅದರಂತೆ ಯುಎಸ್‌ಎ ತಂಡಕ್ಕೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಬಾಗಿಲು ತೆರೆದಂತಾಗಿದೆ.
ಹೀಗಾಗಿ ಟೂರ್ನಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ನೇಪಾಳ ಮತ್ತು ನೆದರ್ಲ್ಯಾಂಡ್ಸ್ ತಂಡಗಳ ಬಳಿಕ 4ನೇ ಸ್ಥಾನ ಪಡೆದ ಯುಎಸ್‌ಎ ಕೂಡ ತಾತ್ಕಾಲಿಕ ಅವಧಿಯವರೆಗೆ ಒಡಿಐ ಸ್ಥಾನ ಉಳಿಸಿಕೊಂಡಿದೆ. ಅಂದರೆ ಯುಎಸ್‌ಎ ಇನ್ನು ಎರಡೂವರೆ ವರ್ಷಗಳ ಕಾಲ ಒಟ್ಟು 36 ಒಡಿಐಗಳನ್ನು ಆಡಲು ಸಾಧ್ಯವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications