For Quick Alerts
ALLOW NOTIFICATIONS  
For Daily Alerts
 

ಅತ್ಯಧಿಕ ಸಿಕ್ಸರ್ : ಅಫ್ರಿದಿ ಸಮಕ್ಕೆ ನಿಂತ ಯೂನಿವರ್ಸಲ್ ಬಾಸ್!

By Mahesh
Universe Boss Chris Gayle equals Shahid Afridis record to smash most international sixes

ಬೆಂಗಳೂರು, ಜುಲೈ 31: ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಏಕದಿನ ಕ್ರಿಕೆಟ್ ನಲ್ಲಿ ಹೊಸ ಸಾಧನೆ ಮಾಡಿ, ಅಫ್ರಿದಿ ನಂತರದ ಸ್ಥಾನಕ್ಕೇರಿದ್ದ ಗೇಲ್ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ.

ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರು ಏಕದಿನ ಕ್ರಿಕೆಟ್ ನಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿರುವ ಆಟಗಾರರ ಪೈಕಿ ಗೇಲ್ ಈಗ ನಂ.2 ಸ್ಥಾನಕ್ಕೇರಿದ ಬಳಿಕ ಈಗ ಒಟ್ಟಾರೆ, ಅತ್ಯಧಿಕ ಸಿಕ್ಸರ್ ಗಳಿಕೆ ಪಟ್ಟಿಯಲ್ಲಿ ಅಫ್ರಿದಿ ಸಮಕ್ಕೆ ನಿಂತಿದ್ದಾರೆ.

ಜಮೈಕಾದ ಸ್ಫೋಟಕ ಬ್ಯಾಟ್ಸ್ ಮನ್ ಅವರು ಬಾಂಗ್ಲಾದೇಶ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಐದು ಸಿಕ್ಸರ್ ಬಾರಿಸಿದ ಗೇಲ್ ಅವರು, 66 ಎಸೆತಗಳಲ್ಲಿ 73ರನ್ ಗಳಿಸಿದರೂ, ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ 2-1ರಲ್ಲಿ ಸರಣಿ ಕಳೆದುಕೊಂಡಿತು.

ಆದರೆ, ಐದು ಸಿಕ್ಸರ್ ಬಾರಿಸುವ ಮೂಲಕ ಗೇಲ್ ಅವರು ಅಫ್ರಿದಿ ಅವರ 476 ಸಿಕ್ಸರ್ ದಾಖಲೆಯ ಸಮಕ್ಕೆ ನಿಂತರು.

38 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ ಮನ್ ಗೇಲ್ ಅವರು 443 ಪಂದ್ಯಗಳಲ್ಲಿ 476ಸಿಕ್ಸರ್ ಬಾರಿಸಿದರೆ, ಅಫ್ರಿದಿ ಅವರು 524 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಒಟ್ಟಾರೆ, ಟಿ20ಐ ಪಂದ್ಯದಲ್ಲಿ 103 ಸಿಕ್ಸರ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ 271 ಸಿಕ್ಸರ್ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ 98 ಸಿಕ್ಸರ್ ಬಾರಿಸಿದ್ದಾರೆ. ಅಫ್ರಿದಿ ಅವರು ಏಕದಿನ ಕ್ರಿಕೆಟ್ ನಲ್ಲಿ 351 ಸಿಕ್ಸರ್, ಟಿ20ಐನಲ್ಲಿ 73 ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ 52 ಸಿಕ್ಸರ್ ಗಳಿಸಿದ್ದಾರೆ.

ಐಪಿಎಲ್ ನಲ್ಲಿ 111 ಪಂದ್ಯಗಳಿಂದ 292 ಸಿಕ್ಸರ್ ಸೇರಿದಂತೆ ಟಿ20 ಪಂದ್ಯಗಳಲ್ಲಿ ಗೇಲ್ 846ಸಿಕ್ಸರ್ ಬಾರಿಸಿರುವ ಗೇಲ್ ಅವರು ಈ ಮಾದರಿಯಲ್ಲಿ 10,000ರನ್ ಗಳಿಸಿದ ಮೊದಲ ಕ್ರಿಕೆಟರ್.

ಆಗಸ್ಟ್ 01ರಂದು ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ಟಿ20ಐ ಪಂದ್ಯದಲ್ಲಿ ಅಫ್ರಿದಿ ದಾಖಲೆ ಮುರಿಯುವ ಅವಕಾಶ ಲಭಿಸಿದೆ. ಅತ್ಯಧಿಕ ಸಿಕ್ಸರ್ ಗಳಿಕೆ ಪಟ್ಟಿಯಲ್ಲಿ ಧೋನಿ ಅವರು 504 ಅಂತಾರಾಷ್ಟ್ರೀಯ ಪಂದ್ಯಗಳಿಂದ 342 ಸಿಕ್ಸರ್ ಗಳಿಸಿ ಐದನೆ ಸ್ಥಾನದಲ್ಲಿದ್ದಾರೆ.

Story first published: Tuesday, July 31, 2018, 13:11 [IST]
Other articles published on Jul 31, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+