Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೆ.ಎಲ್ ರಾಹುಲ್ ಬಗ್ಗೆ ನಿಮಗೆ ಗೊತ್ತೇ ಇಲ್ಲದ ಕುತೂಹಲಕರ ಸಂಗತಿಗಳು

Unknown Facts About India Cricketer Kl Rahul

ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ಪಾಲಿನ ಆಪತ್ಭಾಂಧವ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕೆ.ಎಲ್ ರಾಹುಲ್ ಟೀಮ್ ಇಂಡಿಯಾದ ಪ್ರಮುಖ ಅಸ್ತ್ರವಾಗಿದೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರಾಹುಲ್‌ ಈಗ ಅಗ್ರ ಕ್ರಮಾಂಕದಲ್ಲಿ ಬ್ಯಾಟ್‌ ಬೀಸುತ್ತಿದ್ದಾರೆ.

ಮಂಗಳೂರು ಮೂಲದ ಕೆಎಲ್ ರಾಹುಲ್ ಸದ್ಯ ಎಲ್ಲಾ ಕ್ರಮಾಂಕದಲ್ಲೂ ಆಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ ಆಗಿದ್ದ ರಾಹುಲ್ ಸದ್ಯ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ವಿಕೆಟ್ ಕೀಪರ್ ಕೂಡ ಹೌದು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ನೆಚ್ಚಿ ಆಟಗಾರನಾಗಿದ್ದಾರೆ ಕೆ.ಎಲ್ ರಾಹುಲ್

ಕರ್ನಾಟಕದ ಹೆಮ್ಮೆಯ ಆಟಗಾರ ಕೆ.ಎಲ್ ರಾಹುಲ್ ಕುರಿತಾದ ಕೆಲ ಕುತೂಹಲಕರ ಮಾಹಿತಿಗಳು ನಿಮಗಾಗಿ.

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕ

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕ

ಐಪಿಎಲ್‌ನಲ್ಲಿ ವೇಗದ ಅರ್ಧ ಶತಕವನ್ನು ದಾಖಲಿಸಿರುವ ದಾಖಲೆ ಕೆ.ಎಲ್ ರಾಹುಲ್ ಹೆಸರಿನಲ್ಲಿದೆ. ಕಿಂಗ್ಸ್‌ ಇಲವೆನ್ ಪಂಜಾಬ್ ತಂಡವನ್ನು ಪ್ರತಿನಿಧಿಸುವ ರಾಹುಲ್ 2018ರ ಐಪಿಎಲ್ ಆವೃತ್ತಿಯಲ್ಲಿ ಈ ದಾಖಲೆಯನ್ನು ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ರಾಹುಲ್ ಮಾಡಿದ್ದಾರೆ. ಈ ದಾಖಲೆಯ ಅರ್ಧ ಶತಕ ಕೇವಲ 14 ಎಸೆತಗಳಲ್ಲಿ ಮೂಡಿಬಂದಿದೆ. ಆರು ಬೌಂಡರಿ ಮತ್ತು ನಾಲ್ಕು ಭರ್ಜರಿ ಸಿಕ್ಸರ್‌ನೊಂದಿಗೆ ಈ ದಾಖಲೆಯನ್ನು ಮಾಡಿದ್ದಾರೆ ರಾಹುಲ್.

ದೇಸಿ ಕ್ರಿಕೆಟ್‌ ಸೀಸನ್‌ನಲ್ಲಿ 1000ರನ್

ದೇಸಿ ಕ್ರಿಕೆಟ್‌ ಸೀಸನ್‌ನಲ್ಲಿ 1000ರನ್

2013ರ ರೆಡ್‌ಬುಲ್ ಕ್ಯಾಂಪಸ್ ಕ್ರಿಕೆಟ್ ಟೂರ್ನಿಯಲ್ಲಿ ರಾಹುಲ್ ಅದ್ಭುತ ಪ್ರದರ್ಶನದೊಂದಿಗೆ ಟಾಪ್ ಸ್ಕೋರರ್ ಆಗಿದ್ದರು. ಇದೇ ವರ್ಷ ಕೆಎಲ್ ರಾಹುಲ್ ಆರ್‌ಸಿಬಿ ತಂಡದ ಮೂಲಕ ಮೊದಲ ಬಾರಿಗೆ ಐಪಿಎಲ್‌ಗೆ ಪದಾರ್ಪಣೆಯನ್ನೂ ಮಾಡಿದ್ದರು. ಬಳಿಕ ಇದೇ ವರ್ಷ ರಣಜಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಕರ್ನಾಟಕ ತಂಡದ ಪರವಾಗಿ ಕೆಎಲ್ ರಾಹುಲ್ 1033ರನ್‌ಗಳಿಸಿದ್ದರು. ಈ ಮೂಲಕ ಕೆಎಲ್ ರಾಹುಲ್ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

3 ಮಾದರಿಯಲ್ಲಿ ಶತಕ ಗಳಿಸಿದ ಹೆಗ್ಗಳಿಕೆ

3 ಮಾದರಿಯಲ್ಲಿ ಶತಕ ಗಳಿಸಿದ ಹೆಗ್ಗಳಿಕೆ

ಟೀಮ್ ಇಂಡಿಯಾದಲ್ಲಿ ಮೂರೂ ಮಾದರಿಯಲ್ಲಿ ಶತಕವನ್ನು ಗಳಿಸಿದ ಮೂರೇ ಆಟಗಾರರಲ್ಲಿ ಕೆಎಲ್ ರಾಹುಲ್ ಕೂಡ ಒಬ್ಬರು. ಕೆಎಲ್ ರಾಹುಲ್ ಏಕದಿನ ಟೆಸ್ಟ್ ಶತಕದ ಜೊತೆಗೆ ಟಿ20 ಕ್ರಿಕೆಟ್‌ನಲ್ಲೂ ಶತಕವನ್ನು ದಾಖಲಿಸಿದ್ದಾರೆ. ಈ ಸಾಧನೆಯನ್ನು ಮಾಡಿರುವ ಇನ್ನಿಬ್ಬರು ಆಟಗಾರರು ಅಂದರೆ ಸುರೇಶ್ ರೈನಾ ಮತ್ತು ರೋಹಿತ್ ಶರ್ಮಾ ಮಾತ್ರ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅವಳಿ ಶತಕ

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಅವಳಿ ಶತಕ

ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಿಭಾಗವನ್ನು ಪ್ರತಿನಿಧಿಸುವ ಕೆಎಲ್ ರಾಹುಲ್ 2014ರ ಫೈನಲ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕವನ್ನು ದಾಖಲಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 185 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 130ರನ್ ಗಳಿಸಿದ್ದರು. ದುರದೃಷ್ಟವಶಾತ್ ಈ ಪಂದ್ಯವನ್ನು ದಕ್ಷಿಣ ವಿಭಾಗ 9 ರನ್‌ಗಳಿಂದ ಸೋಲು ಕಂಡಿತ್ತು.

ಟ್ಯಾಟೂ ಪ್ರಿಯ ರಾಹುಲ್

ಟ್ಯಾಟೂ ಪ್ರಿಯ ರಾಹುಲ್

ಕ್ರಿಕೆಟ್ ಅಂಗಳದಲ್ಲಿ ರಾಹುಲ್ ಸಾಧನೆ ಮಾಡಿದ್ದಾರೋ ಅಂಗಳದಾಚೆ ಅಷ್ಟೇ ಸ್ಟೈಲಿಶ್. ಕೆಎಲ್ ರಾಹುಲ್‌ಗೆ ಟ್ಯಾಟೂಗಳು ಅಂದರೆ ಪಂಚಪ್ರಾಣ. ರಾಹುಲ್ ಮೈಮೇಲೆ 7 ಟ್ಯಾಟೂಗಳು ಇದೆ. ಈ ಏಳೂ ಟ್ಯಾಟೂಗಳ ಹಿಂದೆಯೂ ಕುತೂಹಲಕಾರಿ ಕತೆಯೂಇದೆ.

ವಿರಾಟ್ ದಾಖಲೆ ಮುರಿದ ಕೆ.ಎಲ್

ವಿರಾಟ್ ದಾಖಲೆ ಮುರಿದ ಕೆ.ಎಲ್

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆಯನ್ನು ಕೆಎಲ್ ರಾಹುಲ್ ಮುರಿದಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ವಿರುದ್ದ ನಡೆದ ಟಿ20 ಸರಣಿಯಲ್ಲಿ ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದರು ರಾಹುಲ್. ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ಈ ದಾಖಲೆಯನ್ನು ತನ್ನ ಹೆಸರಿಗೆ ರಾಹುಲ್ ಬರೆದುಕೊಂಡಿದ್ದಾರೆ.

Story first published: Sunday, May 3, 2020, 22:17 [IST]
Other articles published on May 3, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+