Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Yo-Yo Test: ಕೊಹ್ಲಿಗಿಂತಲೂ ಹೆಚ್ಚು ಅಂಕ ಕಲೆ ಹಾಕಿದ ಟಾಪ್‌ 5 ಪ್ಲೇಯರ್ಸ್‌: ಇಬ್ಬರು ಕನ್ನಡಿಗರು

ಕ್ರಿಕೆಟ್‌ನಲ್ಲಿ ಆಟ ತಂತ್ರಗಾರಿಕೆ ಎಷ್ಟು ಮುಖ್ಯವೋ ಅಷ್ಟೇ ಫಿಟ್ನೆಸ್‌ ಸಹ ಮುಖ್ಯ ಎಂಬುದನ್ನು ಸಾಬೀತು ಪಡಿಸಿದ ಭಾರತೀಯ ಆಟಗಾರರಲ್ಲಿ ವಿರಾಟ್‌ ಕೊಹ್ಲಿ ಅವರಿಗೆ ಅಗ್ರ ಸ್ಥಾನ. ಇವರು ಫಿಟ್ನೆಸ್‌ ವಿಚಾರದಲ್ಲಿ ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದಲ್ಲೇ ರೋಲ್ ಮಾಡಲ್ ಆಗಿದ್ದಾರೆ. ಇವರು ತಾವಷ್ಟೇ ಫಿಟ್‌ ಆಗಿರದೇ ಇಡೀ ತಂಡದಲ್ಲೂ ಇಂತಹದ್ದೇ ವಾತಾವರಣವನ್ನು ಕ್ರಿಯೇಟ್ ಮಾಡಿದರು. ಕೊಹ್ಲಿ ಹೊಸ ಫಿಟ್ನೆಸ್ ಟೆಸ್ಟ್‌ಗಳ ಮೂಲಕ ತಂಡದಲ್ಲಿ ಹೊಸ ಹೊಸ ಮಾನದಂಡಗಳನ್ನು ತರಲು ಪ್ರಮುಖ ಪಾತ್ರವನ್ನು ವಹಿಸಿದರು.

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಆಟಗಾರರಿಗೆ ಯೋ-ಯೋ ಟೆಸ್ಟ್‌ ಪಾಸಾಗುವುದು ಅವಶ್ಯಕ. ಪ್ರತಿಯೊಬ್ಬ ಆಟಗಾರ ಈ ಟೆಸ್ಟ್‌ ಅಡಿಯಲ್ಲಿ ಆಡುತ್ತಾನೆ. ಹಿರಿಯ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನ್ ಅವರಂತಹ ಆಟಗಾರರು ಸಹ ಫಿಟ್ನೆಸ್ ಟೆಸ್ಟ್‌ ಎದುರಿಸಿದ್ದಾರೆ. ಈ ಟೆಸ್ಟ್‌ ಈಗ ಮತ್ತೆ ಸುದ್ದಿಯಲ್ಲಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಸೇರಿದಂತೆ ಹಲವು ಸ್ಟಾರ್ ಆಟಗಾರರು ಇದರಲ್ಲಿ ಉತ್ತೀರ್ಣರಾಗಿದ್ದಾರೆ.

Unlocking the Secrets of Yo-Yo Test The Fittest Players in Indian Cricket

ವಿರಾಟ್ ಕೊಹ್ಲಿ ಸಹ ಇತ್ತೀಚಿಗೆ ಯೋ ಯೋ ಟೆಸ್ಟ್‌ನ್ನು ಲಂಡನ್‌ನಲ್ಲಿ ಮಾಡಿಸಿದ್ದಾರೆ. ಆದರೆ ಇವರ ಫಲಿತಾಂಶ ಇನ್ನು ಹೊರ ಬಂದಿಲ್ಲ. ಆದಾಗ್ಯೂ ವಿರಾಟ್ ಕೊಹ್ಲಿ ಅವರ ಇತ್ತಿಚಿನ ಬೆಸ್ಟ್ ಸ್ಕೊರ್‌ 19 ಆಗಿದೆ. ಕೊಹ್ಲಿ ಗಿಂತ ಹೆಚ್ಚು ಸ್ಕೋರ್‌ ಮಾಡಿ, ತಮ್ಮ ಫಿಟ್ನೆಸ್ ಸಾಬೀತು ಪಡಿಸಿರುವ ಆಟಗಾರರ ಪಟ್ಟಿ ಇಲ್ಲಿದೆ.

ಮನೀಷ್ ಪಾಂಡೆ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಮನೀಶ್‌ ಪಾಂಡೆ, ಸಹ ತಮ್ಮ ಫಿಟ್ನೆಸ್‌ನಿಂದ ಚರ್ಚೆಯಲ್ಲಿರುವ ಆಟಗಾರ. ಇವರು ವೇಗದ ಓಟ, ರನ್ನಿಂಗ್‌ ಬಿಟ್ವಿನ್‌ ದಿ ವಿಕೆಟ್‌ ವಿಷದಲ್ಲಿ ಇವರು ಹೆಸರುವಾಸಿ. ಇತ್ತೀಚಿಗೆ ನಡೆದ ಯೋಯೋ ಟೆಸ್ಟ್‌ನಲ್ಲಿ ಮನೀಷ್ ಪಾಂಡೆ 19.2 ಅಂಕಗಳನ್ನು ಗಳಿಸಿದ್ದಾರೆ.

ಮಯಾಂಕ್ ದಾಗರ್

ಇನ್ನು ಹಿಮಾಚಲ ಪ್ರದೇಶದ ಪರ ಆಡುವ ಮಯಾಂಕ್‌ ದಗಾರ್ ಒಮ್ಮೆ ತಮ್ಮ ಫಿಟ್ನೆಸ್‌ನಿಂದ ಎಲ್ಲರ ಗಮನ ಸೆಳೆದ ಪ್ಲೇಯರ್. ಇವರು ಯೋ ಯೋ ಟೆಸ್ಟ್‌ನಲ್ಲಿ ವಿರಾಟ್‌, ಮನೀಷ್‌ ಅವರಿಗಿಂತಲೂ ಹೆಚ್ಚಿನ ಅಂಕ ಗಳಿಸಿದ್ದಾರೆ. ಇವರು ಯೋ-ಯೋ ಪರೀಕ್ಷೆಯಲ್ಲಿ 19.3 ಅಂಕಗಳನ್ನು ಗಳಿಸಿದ್ದಾರೆ.

Unlocking the Secrets of Yo-Yo Test The Fittest Players in Indian Cricket

ಅಹ್ಮದ್ ಬಂದೆ

ಜಮ್ಮು ಕಾಶ್ಮೀರ್ ಪರ ಆಡವು ಅಹ್ಮದ್‌ ಬಂದೆ ಯೋ-ಯೋ ಟೆಸ್ಟ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದ್ದರು. ಇವರು 2018ರಲ್ಲಿ ನಡೆದ ಪರೀಕ್ಷೆಯಲ್ಲಿ 9.4 ಅಂಕಗಳನ್ನು ಗಳಿಸಿದ್ದರು. ಈ ಸ್ಕೋರ್ ಬಹು ಕಾಲ ಗರಿಷ್ಠ ಸ್ಕೋರ್ ಆಗಿತ್ತು.

ಮಯಾಂಕ್ ಅಗರ್ವಾಲ್

ಇನ್ನು ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್‌ ಅಗರ್ವಾಲ್‌ ಸಹ ಫಿಟ್ನೆಸ್ ವಿಷಯದಲ್ಲಿ ಬಹಳ ಬೆವರು ಹರಿಸಿರುವ ಆಟಗಾರ. ಇವರು ಭಾರತದ ಪರ ಸಹ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು 2023 ರಲ್ಲಿ ನಡೆದಿದ್ದ ಯೋ ಯೋ ಟೆಸ್ಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದರು. ಇವರು 20.1 ಅಂಕಗಳನ್ನು ಗಳಿಸುವ ಮೂಲಕ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದಿದ್ದರು.

Story first published: Friday, September 5, 2025, 18:39 [IST]
Other articles published on Sep 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+