ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರ ಹಿಂದಿನ ಕೆಟ್ಟ ಕಾರಣವನ್ನು ಬಿಚ್ಚಿಟ್ಟ ಉನ್ಮುಕ್ತ್ ಚಂದ್!

ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ಯುವ ಪ್ರತಿಭೆಗಳಲ್ಲಿ ಉನ್ಮುಕ್ತ್ ಚಂದ್ ಕೂಡ ಓರ್ವರು. ಅಂಡರ್ 19 ತಂಡದ ನಾಯಕನಾಗಿ ಅತ್ಯದ್ಭುತವಾಗಿ ಕಾರ್ಯ ನಿರ್ವಹಿಸಿದ್ದ ಉನ್ಮುಕ್ತ್ ಚಂದ್ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ 111 ರನ್ ಬಾರಿಸುವ ಮೂಲಕ ಟ್ರೋಫಿ ಗೆಲ್ಲಲು ಪ್ರಮುಖ ಕಾರಣಕರ್ತರಾಗಿದ್ದರು. ಹೀಗೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನವನ್ನು ತೋರಿದ ಉನ್ಮುಕ್ತ್ ಚಂದ್ ಶೀಘ್ರದಲ್ಲಿಯೇ ಟೀಮ್ ಇಂಡಿಯಾಗೆ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ಹಲವಾರು ಮಾಜಿ ಕ್ರಿಕೆಟಿಗರು ವ್ಯಕ್ತಪಡಿಸಿದ್ದರು.
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಉನ್ಮುಕ್ತ್ ಚಂದ್ ಅತ್ಯುತ್ತಮ ಆಟವನ್ನಾಡಿದ ಕಾರಣ ಟೀಮ್ ಇಂಡಿಯಾ ಎ ತಂಡದ ನಾಯಕನ ಪಟ್ಟವನ್ನು ಸಹ ನೀಡಲಾಯಿತು. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಜೀವನದಲ್ಲಿ ಮೇಲೇರುತ್ತಿದ್ದ ಉನ್ಮುಕ್ತ್ ಚಂದ್ ಟೀಮ್ ಇಂಡಿಯಾ ಹಿರಿಯರ ತಂಡದ ಪರ ಆಡುವ ಕನಸನ್ನು ಹೊತ್ತಿದ್ದರು. ಅದರಲ್ಲಿಯೂ ಟೀಮ್ ಇಂಡಿಯಾ ಎ ತಂಡದ ನಾಯಕನಾಗಿ ಆಯ್ಕೆಯಾದ ಉನ್ಮುಕ್ತ್ ಚಂದ್ ಆದಷ್ಟು ಬೇಗ ಹಿರಿಯರ ತಂಡಕ್ಕೆ ಆಯ್ಕೆಯಾಗಲಿದ್ದೇನೆ ಎಂಬ ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಆ ನಂಬಿಕೆ ಮತ್ತು ಭರವಸೆ ಇಂದಿಗೂ ಸಹ ನಿಜವಾಗಲೇ ಇಲ್ಲ, ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಉನ್ಮುಕ್ತ್ ಚಂದ್ ಯಾವುದೇ ಅವಕಾಶಗಳಿಲ್ಲದೆ ವರ್ಷಾನುಗಟ್ಟಲೆ ಕಾಯ್ದು ಇದೀಗ ನಿವೃತ್ತಿ ಘೋಷಿಸುವ ತೀರ್ಮಾನವನ್ನು ಕೈಗೆತ್ತಿಕೊಂಡುಬಿಟ್ಟಿದ್ದಾರೆ.
ಶುಕ್ರವಾರ ( ಆಗಸ್ಟ್ 13 ) ದಿಢೀರನೆ ತಮ್ಮ ನಿರ್ಧಾರವನ್ನು ಘೋಷಿಸಿದ ಉನ್ಮುಕ್ತ್ ಚಂದ್ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಿಷಯವನ್ನು ಬಹಿರಂಗಪಡಿಸಿದರು. ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವಕಾಶ ಸಿಗದ ಉನ್ಮುಕ್ತ್ ಚಂದ್ ತೆಗೆದುಕೊಂಡ ನಿರ್ಧಾರಕ್ಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಒಳ್ಳೆಯ ಪ್ರದರ್ಶನ ನೀಡಿದ ಇಂತಹ ಪ್ರತಿಭೆಗಳಿಗೂ ಅವಕಾಶ ಸಿಗದಿದ್ದರೆ ಕಿರಿಯ ವಯಸ್ಸಿನಲ್ಲಿಯೇ ಈ ರೀತಿ ನಿವೃತ್ತಿ ಘೋಷಿಸದೆ ಬೇರೆ ದಾರಿಯಿಲ್ಲ ಎಂದು ಉನ್ಮುಕ್ತ್ ಚಂದ್ ಪರಿಸ್ಥಿತಿ ಕಂಡು ಮರುಗಿದ್ದಾರೆ.
ಇನ್ನು ತನ್ನ ನಿವೃತ್ತಿ ಕುರಿತು ಮಾತನಾಡಿರುವ ಉನ್ಮುಕ್ತ್ ಚಂದ್ ಯಾವ ಕಾರಣದಿಂದಾಗಿ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು ಎಂಬ ವಿಷಯವನ್ನು ಈ ಕೆಳಕಂಡಂತೆ ಬಹಿರಂಗ ಪಡಿಸಿದ್ದಾರೆ.

ಅಂತಾರಾಷ್ಟ್ರೀಯ ತಂಡದ ಪರ ಆಡದೇ ಇರುವ ನೋವಿದೆ
ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಉನ್ಮುಕ್ತ್ ಚಂದ್ ತಾವು ನಿವೃತ್ತಿ ಘೋಷಿಸಿದ್ದರ ಹಿಂದಿನ ಕಾರಣವನ್ನು ಸಹ ತಿಳಿಸಿದ್ದಾರೆ. ಹೀಗೆ ತಮ್ಮ ನಿವೃತ್ತಿ ಕುರಿತು ಪ್ರೇಕ್ಷಕರ ಜತೆ ಹಂಚಿಕೊಂಡಿರುವ ಉನ್ಮುಕ್ತ್ ಚಂದ್ 'ಯಾವಾಗಲೂ ಅಂತಾರಾಷ್ಟ್ರೀಯ ತಂಡದ ಪರ ಆಡಬೇಕೆಂದು ಕನಸು ಕಾಣುವ ನನ್ನಂತಹ ಕ್ರಿಕೆಟಿಗನಿಗೆ ಇಂತಹ ಪರಿಸ್ಥಿತಿ ಎದುರಿಸುವುದು ತೀರಾ ಕಷ್ಟಕರ ಎಂದು ಉನ್ಮುಕ್ತ್ ಚಂದ್ ಬೇಸರ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಕಷ್ಟಪಟ್ಟು ಉತ್ತಮ ಪ್ರದರ್ಶನ ತೋರಿದರೂ ಸಹ ಅಂತಾರಾಷ್ಟ್ರೀಯ ತಂಡದ ಪರ ಕ್ರಿಕೆಟ್ ಆಡುವ ಅವಕಾಶ ನನಗೆ ಲಭಿಸಿಲ್ಲ ಎನ್ನುವ ನೋವಿದೆ ಎಂದು ಉನ್ಮುಕ್ತ್ ಚಂದ್ ಭಾವುಕರಾಗಿದ್ದಾರೆ.

ಭಾರತ ಕ್ರಿಕೆಟ್‍ನಲ್ಲಿ ರಾಜಕೀಯವಿದೆ, ಅವಕಾಶ ಸಿಗುವುದಿಲ್ಲ!
ಇನ್ನೂ ಮುಂದುವರೆದು ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದಿರುವುದರ ಕುರಿತು ಬೇಸರ ವ್ಯಕ್ತಪಡಿಸಿದ ಉನ್ಮುಕ್ತ್ ಚಂದ್ ಟೀಮ್ ಇಂಡಿಯಾದ ಪರ ನಾನು ಕ್ರಿಕೆಟ್ ಆಡಲು ಅವಕಾಶ ಪಡೆದುಕೊಳ್ಳದೆ ಇರುವುದಕ್ಕೆ ಪ್ರಮುಖ ಕಾರಣ ಇಲ್ಲಿನ ಅಸೋಸಿಯೇಶನ್‌ಗಳಲ್ಲಿನ ರಾಜಕೀಯ ಎಂದು ಉನ್ಮುಕ್ತ್ ಚಂದ್ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ಕೆಟ್ಟ ರಾಜಕೀಯವಿದೆ, ಹೀಗಾಗಿ ಇಲ್ಲಿ ಪ್ರತಿಭಾವಂತರಿಗೆ ಅವಕಾಶ ಲಭಿಸುವುದಿಲ್ಲ. ಹೀಗಾಗಿ ಇಂಥ ಕೆಟ್ಟ ರಾಜಕೀಯವನ್ನು ಮಾಡುವವರಿಂದಲೇ ನಾನು ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ತೀರ್ಮಾನವನ್ನು ಕೈಗೊಂಡಿದ್ದೇನೆ' ಎಂದು ಉನ್ಮುಕ್ತ್ ಚಂದ್ ಹೇಳಿದ್ದಾರೆ.

ಯುಎಸ್ ಕ್ರಿಕೆಟ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಉನ್ಮುಕ್ತ್ ಚಂದ್
ಭಾರತೀಯ ಕ್ರಿಕೆಟ್‍ಗೆ ನಿವೃತ್ತಿಯನ್ನು ಘೋಷಿಸಿರುವ ಉನ್ಮುಕ್ತ್ ಚಂದ್ 3 ವರ್ಷಗಳ ಕಾಲ ಅಮೇರಿಕಾದ ಮೇಜರ್ ಲೀಗ್ ಕ್ರಿಕೆಟ್ ಒಪ್ಪಂದವನ್ನು ಮಾಡಿಕೊಂಡಿದ್ದು ಅಮೇರಿಕಾ ಕ್ರಿಕೆಟ್‍ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಸದ್ಯ ತನಗೆ 28 ವರ್ಷ ವಯಸ್ಸಾಗಿದ್ದು ಇನ್ನೂ 10 ವರ್ಷಗಳ ಕಾಲ ಕ್ರಿಕೆಟ್ ಆಡುವ ಸಾಮರ್ಥ್ಯವಿದೆ ಮತ್ತು ಅದನ್ನು ಕ್ರಿಕೆಟ್ ಆಡಲೆಂದು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುತ್ತೇನೆ ಎಂದು ಉನ್ಮುಕ್ತ್ ಚಂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications