ಉನ್ಮುಕ್ತ್ ಚಂದ್ -ತ್ರಿಕೋನ ಸರಣಿಗೆ ಭಾರತ ಎ ನಾಯಕ
ಬೆಂಗಳೂರು, ಆಗಸ್ಟ್ 02: ಭಾರತ ಎ ತಂಡದ ಮುಂಬರುವ ತ್ರಿಕೋನ ಏಕದಿನ ಸರಣಿಗೆ ದೆಹಲಿ ಬ್ಯಾಟ್ಸ್ ಮನ್ ಉನ್ಮುಕ್ತ್ ಚಂದ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಆ.5 ರಿಂದ ಚೆನ್ನೈನಲ್ಲಿ ಆರಂಭವಾಗಲಿರುವ ತ್ರಿಕೋನ ಸರಣಿಯಲ್ಲಿ ಆತಿಥೇಯ ಭಾರತದ ಜೊತೆಗೆ ಆಸ್ಟ್ರೇಲಿಯ ಎ ಹಾಗೂ ದಕ್ಷಿಣ ಆಫ್ರಿಕ ಎ ತಂಡಗಳು ಆಡಲಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ 15 ಸದಸ್ಯರನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿದ್ದು, ಕರ್ನಾಟಕದ ಬ್ಯಾಟ್ಸ್ ಮನ್ ಕರುಣ್ ನಾಯರ್‌ರನ್ನು ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತ್ರಿಕೋನ ಸರಣಿಯ ಎಲ್ಲಾ ಪಂದ್ಯಗಳು ನಡೆಯಲಿದೆ. ಸರಣಿಯ ಅಂತಿಮ ಪಂದ್ಯ ಆಗಸ್ಟ್ 14 ರಂದು ನಡೆಯಲಿದೆ. ಆ.18 ರಿಂದ ವಯನಾಡ್‌ನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾಎ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಎ ತಂಡವನ್ನು ಅಂಬಟಿ ರಾಯುಡು ಮುನ್ನಡೆಸಲಿದ್ದಾರೆ.
ತ್ರಿಕೋನ ಸರಣಿಗೆ ಭಾರತ 'ಎ' ತಂಡ: ಉನ್ಮುಕ್ತ್ ಚಂದ್(ನಾಯಕ), ಮಯಾಂಕ್ ಅಗರವಾಲ್, ಮನೀಶ್ ಪಾಂಡೆ, ಕರುಣ್ ನಾಯರ್(ಉಪ ನಾಯಕ), ಕೇದಾರ್ ಜಾಧವ್, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಪರ್ವೇಝ್ ರಸೂಲ್, ಕರಣ್ ಶರ್ಮ, ಧವಳ್ ಕುಲಕರ್ಣಿ, ಸಂದೀಪ್ ಶರ್ಮ, ರುಶ್ ಕಲಾರಿಯ, ಮನ್‌ದೀಪ್ ಸಿಂಗ್, ಗುರುಕೀರತ್ ಸಿಂಗ್, ರಿಷಿ ಧವನ್.
ಟೆಸ್ಟ್‌ಗೆ ಭಾರತ 'ಎ' ತಂಡ: ಅಂಬಟಿ ರಾಯುಡು(ನಾಯಕ),ಕರುಣ್ ನಾಯರ್, ಅಭಿನವ್ ಮುಕುಂದ್, ಅಂಕುಶ್ ಬೈನ್ಸ್, ಶ್ರೇಯಸ್ ಐಯ್ಯರ್, ಬಾಬಾ ಅಪರಾಜಿತ್, ವಿಜಯ್ ಶಂಕರ್, ಜಯಂತ್ ಯಾದವ್, ಅಕ್ಷರ್ ಪಟೇಲ್, ಕರಣ್ ಶರ್ಮ, ಅಭಿಮನ್ಯು ಮಿಥುನ್, ಶ್ರಾದೂಲ್ ಠಾಕೂರ್, ಈಶ್ವರ ಪಾಂಡೆ, ಶೆಲ್ಡನ್ ಜಾಕ್ಸನ್ ಹಾಗೂ ಜೀವನ್‌ಜ್ಯೋತ್ ಸಿಂಗ್.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications