Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Unnecessary record: ರೋಹಿತ್ ಶರ್ಮಾ ಹೆಸರಿಗೆ ಅನಗತ್ಯ ದಾಖಲೆ ಸೇರ್ಪಡೆ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ (ಪಿಂಕ್ ಬಾಲ್ ಟೆಸ್ಟ್)ನಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಈ ಸೋಲಿನೊಂದಿಗೆ ರೋಹಿತ್ ಶರ್ಮಾ ಹೆಸರಿನಲ್ಲಿ ಅನಗತ್ಯ ದಾಖಲೆ ಆಗಿದೆ. ಟೀಮ್ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಸತತವಾಗಿ ಟೆಸ್ಟ್ ಪಂದ್ಯಗಳಲ್ಲಿ ಸೋಲುತ್ತಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭಾರತ ನೀರು ಕುಡಿಸಿತ್ತು. ಆದರೆ, ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಆಸೀಸ್ ಪಡೆ ಸೋಲಿಸಿತು.

ರೋಹಿತ್ ಶರ್ಮಾ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮತ್ತು ಇದೀಗ ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಮುಜುಗರದ ಸೋಲುಗಳನ್ನು ಎದುರಿಸಿದ್ದಾರೆ. ಈ ಸೋಲುಗಳೊಂದಿಗೆ ಅವರು ಟೀಮ್ ಇಂಡಿಯಾ ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ದಾಖಲೆಯನ್ನು ಮಾಡಿದ್ದಾರೆ. ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯಂತಹ ಅಗ್ರ ಕ್ರಿಕೆಟಿಗರ ಪಟ್ಟಿಗೆ ರೋಹಿತ್ ಶರ್ಮಾ ಅವರು ಕೂಡ ಸೇರಿಕೊಂಡಿದ್ದಾರೆ.

Unnecessary record added to Rohit Sharma name

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋತಿದೆ. ರೋಹಿತ್ ಹೊರತುಪಡಿಸಿ, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಸಚಿನ್ ತೆಂಡೂಲ್ಕರ್, ದತ್ತಾ ಗಾಯಕ್ವಾಡ್ ಮತ್ತು ಎಂಕೆ ಪಟೌಡಿ ಭಾರತದ ನಾಯಕನಾಗಿ ಸತತ 4 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತಿದ್ದಾರೆ.

ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ನಾಯಕರು

ಮನ್ಸೂರ್ ಅಲಿ ಖಾನ್ ಪಟೌಡಿ (1967-68)- 6 ಸೋಲು
ಸಚಿನ್ ತೆಂಡೂಲ್ಕರ್ (1999-00)- 5 ಸೋಲು
ದತ್ತಾ ಗಾಯಕ್ವಾಡ್ (1959)- 4 ಸೋಲು
ಎಂಎಸ್‌ ಧೋನಿ (2011)- 4 ಸೋಲು
ಎಂಎಸ್‌ ಧೋನಿ (2014)- 4 ಸೋಲು
ವಿರಾಟ್ ಕೊಹ್ಲಿ (2020-21)- 4 ಸೋಲು
ರೋಹಿತ್ ಶರ್ಮಾ (2024)*- 4 ಸೋಲು

ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋತ ಕೊನೆಯ ಭಾರತದ ನಾಯಕ ವಿರಾಟ್ ಕೊಹ್ಲಿ. ಕೊಹ್ಲಿ ನಾಯಕತ್ವದಲ್ಲಿ ಭಾರತವು 2020-21ರ ಋತುವಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದು ಟೆಸ್ಟ್ ಪಂದ್ಯ, ನ್ಯೂಜಿಲೆಂಡ್ ವಿರುದ್ಧ ಎರಡು ಮತ್ತು ಇಂಗ್ಲೆಂಡ್ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಸೋತಿದೆ.

Story first published: Sunday, December 8, 2024, 19:15 [IST]
Other articles published on Dec 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+