Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅನಧಿಕೃತ ಟೆಸ್ಟ್: ಭಾರತ 'ಎ' ವಿರುದ್ಧ ಆಸ್ಟ್ರೇಲಿಯಾ 'ಎ'ಗೆ 98 ರನ್ ಜಯ

unofficial Test: Jon Holland six-for gives Australia A 98-run win

ಬೆಂಗಳೂರು, ಸೆಪ್ಟೆಂಬರ್ 5: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಎ ಕ್ರಿಕೆಟ್ ತಂಡ ಬೆಂಗಳೂರಿನಲ್ಲಿ ನಡೆದ ಮೊದಲ ಅನಧಿಕೃತ ಟೆಸ್ಟ್ ನಲ್ಲಿ ಭಾರತ ಎ ವಿರುದ್ಧ 98 ರನ್ ಜಯ ಸಾಧಿಸಿದೆ. ಜಾನ್ ಹಾಲೆಂಡ್ ಅವರ ಮಾರಕ ಬೌಲಿಂಗ್ ದಾಳಿ ಭಾರತ ಎ ತಂಡಕ್ಕೆ ಸೋಲುಣಿಸಿತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ 262 ರನ್ ಗುರಿ ಬೆನ್ನತ್ತಿದ ಭಾರತ ಎ ತಂಡ ಬ್ಯಾಟಿಂಗ್ ಕಾವಲು ನಿಲ್ಲದೆ 163 ರನ್ ಪೇರಿಸಿ ಎಡವಿತು. ಮಯಾಂಕ್ ಅಗರ್ವಾಲ್ 80, ನಾಯಕ ಶ್ರೇಯಸ್ ಐಯ್ಯರ್ 28, ಅಂಕಿತ್ ಬಾವ್ನೆ 25 ರನ್ ನೀಡಿದ್ದು ಬಿಟ್ಟರೆ ಆರ್ ಸಮರ್ಥ್ ಮತ್ತು ಮೊಹಮ್ಮದ್ ಸಿರಾಜ್ ತಲಾ 8 ರನ್, ಕುಲದೀಪ್ ಯಾದವ್ 2 ರನ್, ಉಳಿದವರೆಲ್ಲರೂ 0ಗೆ ಔಟಾಗಿದ್ದು, ತಂಡ ಸೋಲಿನ ಬೆಲೆ ತೆರುವಂತೆ ಮಾಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಉಸ್ಮಾನ್ ಖಾಜಾ ಅವರ ಆಕರ್ಷಕ ಶತಕ (127 ರನ್) ಮತ್ತು ಮಾರ್ನಸ್ ಲ್ಯಾಬಸ್ಚ್ಯಾಗ್ನೆ 60 ರನ್ ನೆರವಿನಿಂದ 75.3 ಓವರ್ ನಲ್ಲಿ 243 ರನ್ ಪೇರಿಸಿತ್ತು. ಭಾರತ ಎ ತಂಡ ಅಂಕಿತ್ ಅವರ ಅಜೇಯ 91 ರನ್ ನೆರವಿನೊಂದಿಗೆ 274 ರನ್ ಪೇರಿಸಿತ್ತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಎ ಇನ್ನೂ ಉತ್ತಮ ಬ್ಯಾಟಿಂಗ್ ತೋರಿತು. 83.5 ಓವರ್ ನಲ್ಲಿ ಆಸ್ಟ್ರೇಲಿಯಾ 292 ರನ್ ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ ಬ್ಯಾಟ್ಸ್ಮನ್ ಗಳ ಬೆಂಬಲ ದೊರೆಯಲಿಲ್ಲ. ಜೊತೆಗೆ ಆಸ್ಟ್ರೇಲಿಯಾ ಬೌಲರ್ ಜಾನ್ ಹಾಲೆಂಡ್ 81 ರನ್ನಿಗೆ 6 ವಿಕೆಟ್ ಕಿತ್ತು ಭಾರತವನ್ನು ಕಾಡಿದರು. ಭಾರತ 59.3 ಓವರ್ ಗೆ 163 ರನ್ ಪೇರಿಸಿ ಶರಣಾಯಿತು.

Story first published: Wednesday, September 5, 2018, 16:34 [IST]
Other articles published on Sep 5, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+