ಐಪಿಎಲ್ 2017: ಹರಾಜಿನಲ್ಲಿ ಸೇಲ್ ಆಗದ ಟಾಪ್ 10 ಆಟಗಾರರು
ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ದಾಖಲೆಯ 14 ಕೋಟಿ ಪಡೆಯುವ ಮೂಲಕ ಈವರೆಗಿನ ಐಪಿಎಲ್ ಹರಾಜುಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದೆಲ್ಲದರ ಜತೆಗೆ, ತಮಿಳುನಾಡಿನ ಟಿ. ನಟರಾಜನ್ ಎಂಬ ಆಟಗಾರ ಇದ್ದಕ್ಕಿದ್ದಂತೆ 3 ಕೋಟಿ ರು.ಗೆ ಹರಾಜಾಗಿ ಎಲ್ಲರ ಹುಬ್ಬೇರಿಸುವಂತಾಗಿದ್ದಾನೆ.[ಐಪಿಎಲ್ 2017 ಹರಾಜು : ಮಾರಾಟವಾದ ಆಟಗಾರರ ಪೂರ್ಣ ಪಟ್ಟಿ]
ಆದರೆ, ಹರಾಜಿಗಿಂತ ಮುನ್ನ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಭಾರತದ ವೇಗಿ ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ, ವೆಸ್ಟ್ ಇಂಡೀಸ್ ನ ಹಾಲಿ ಏಕದಿನ ತಂಡದ ನಾಯಯಕ ಜೇಸನ್ ಹೋಲ್ಡರ್, ಶ್ರೀಲಂಕಾದ ಆಲ್ರೌಂಡರ್ ತಿಸಾರಾ ಪೆರೇರಾ ಸೇರಿದಂತೆ ಹಲವಾರು ಖ್ಯಾತ ನಾಮರು ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ ಹರಾಜಾಗದೇ ಉಳಿದ ಆಟಗಾರರ ಪಟ್ಟಿಯಲ್ಲಿ ಸೇರಿಕೊಂಡಿದ್ದು ಅಚ್ಚರಿ ತರಿಸಿದೆ.['ಫ್ಯುಮ' ಕಂಪನಿ ಜತೆ ವಿರಾಟ್ ಕೊಹ್ಲಿ 100 ಕೋಟಿ ರು. ಡೀಲ್!]
ಇತ್ತೀಚೆಗಿನ ಆಯಾ ಆಟಗಾರರ ಸಾಧನೆಯನ್ನು ಅವಲಂಬಿಸಿಯೇ ಹರಾಜಿಗೂ ಮುನ್ನ ಪ್ರತಿಯೊಬ್ಬ ಆಟಗಾರನಿಗೆ ಮೂಲ ಬೆಲೆಯನ್ನು (ಬೇಸ್ ಪ್ರೈಸ್) ನಿಗದಿಗೊಳಿಸಲಾಗಿರುತ್ತದೆ. ಈ ನಿಟ್ಟಿನಲ್ಲಿ ಭಾರತದ ಇಶಾಂತ್ ಶರ್ಮಾ, ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಮತ್ತಿರರಿಗೆ ಎರಡು ಕೋಟಿಯಷ್ಟು ಬೇಸ್ ಪ್ರೈಸ್ ನೀಡಲಾಗಿತ್ತು.[ವಿಡಿಯೋ: ಆರ್ ಸಿಬಿ ತಂಡದ ನಿಜವಾದ ಶಕ್ತಿ ಮಿ.ನಾಗ್ಸ್]
ಇವರಲ್ಲಿ ಬೆನ್ ಸ್ಟೋಕ್ಸ್ ಮಾತ್ರ ಈ ನಿರೀಕ್ಷೆಗೂ ಮೀರಿದ ಗಳಿಕೆಯ ಮೂಲಕ ರೈಸಿಂಗ್ ಪುಣೆ ತಂಡಕ್ಕೆ ಸೇರ್ಪಡೆಗೊಂಡರೆ, ಕೆಲವರಿಗೆ ಉತ್ತಮ ಬೇಸ್ ಪ್ರೈಸ್ ಇದ್ದರೂ, ಸಾಧನೆಯ ಪಟ್ಟಿ ಬೆನ್ನಿಗಿದ್ದರೂ ಅವರನ್ನು ಫ್ರಾಂಚೈಸಿಗಳು ಕೊಳ್ಳಲು ಆಸಕ್ತಿ ವಹಿಸಲಿಲ್ಲ.[ಹರಾಜು ನಂತರ ವಿರಾಟ್ ಕೊಹ್ಲಿ ಆರ್ ಸಿಬಿ ಪಡೆ ಹೀಗಿದೆ]
ಹೀಗೆ, ದೊಡ್ಡ ಮೊತ್ತದ ಬೇಸ್ ಪ್ರೈಸ್ ಹೊರತಾಗಿಯೂ ಹರಾಜಾಗದೇ ಉಳಿದ ಆಟಗಾರರ ಪಟ್ಟಿ ಇಲ್ಲಿದೆ.

ತೃಪ್ತಿ ತಾರದ ಪ್ರತಿಭೆ
ಹೆಸರು - ಇಶಾಂತ್ ಶರ್ಮಾ (ಭಾರತ)
ಸ್ಥಾನ - ವೇಗಿ
ಬೇಸ್ ಪ್ರೈಸ್ - 2 ಕೋಟಿ ರು.

ಅಲ್ಲೂ ನಿರಾಸೆ
ಹೆಸರು - ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)
ಸ್ಥಾನ - ಆಲ್ರೌಂಡರ್
ಬೇಸ್ ಪ್ರೈಸ್ - 1.50 ಕೋಟಿ ರು.

ಕಾಂಗರೂ ಆಟಗಾರ ನಿರ್ಲಕ್ಷ್ಯ
ಹೆಸರು - ಬ್ರಾಡ್ ಹಡಿನ್ (ಆಸ್ಟ್ರೇಲಿಯಾ)
ಸ್ಥಾನ - ವಿಕೆಟ್ ಕೀಪರ್ / ಬ್ಯಾಟ್ಸ್ ಮನ್
ಬೇಸ್ ಪ್ರೈಸ್ - 1.50 ಕೋಟಿ ರು.

ಆಸೀಸ್ ಆಟಗಾರನಿಗೆ ನಿರಾಸೆ
ಹೆಸರು - ನಥಾನ್ ಲಿಯಾನ್ (ಆಸ್ಟ್ರೇಲಿಯಾ)
ಸ್ಥಾನ - ಆಫ್ ಸ್ಪಿನ್ನರ್
ಬೇಸ್ ಪ್ರೈಸ್ - 1.50 ಕೋಟಿ ರು.

ಖಾಲಿ ಕೈಯ್ಯಲ್ಲಿ ಬೇರ್ ಸ್ಟೋ
ಹೆಸರು- ಜಾನಿ ಬೇರ್ ಸ್ಟೋ (ಇಂಗ್ಲೆಂಡ್)
ಸ್ಥಾನ - ವಿಕೆಟ್ ಕೀಪರ್, ಬ್ಯಾಟ್ಸ್ ಮನ್
ಬೇಸ್ ಪ್ರೈಸ್ - 1.50 ಕೋಟಿ ರು.

ಹರಿಣಗಳ ಆಟಗಾರನಿಗೆ ನಿರಾಸೆ
ಹೆಸರು - ಕೈಲ್ ಅಬ್ಬೊಟ್ (ದಕ್ಷಿಣ ಆಫ್ರಿಕಾ)
ಸ್ಥಾನ - ಮಧ್ಯಮ ವೇಗಿ
ಬೇಸ್ ಪ್ರೈಸ್ - 1.50 ಕೋಟಿ ರು.

ಬೇಡವಾದ ವಿಂಡೀಸ್ ಆಟಗಾರ
ಹೆಸರು - ಮರ್ಲಾನ್ ಸ್ಯಾಮ್ಯುಯೆಲ್ಸ್ (ವೆಸ್ಟ್ ಇಂಡೀಸ್)
ಸ್ಥಾನ - ಬ್ಯಾಟ್ಸ್ ಮನ್
ಬೇಸ್ ಪ್ರೈಸ್ - 1 ಕೋಟಿ ರು.

ಫ್ರಾಂಚೈಸಿಗಳ ನಿರಾಸಕ್ತಿ
ಹೆಸರು - ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್)
ಸ್ಥಾನ - ಬ್ಯಾಟ್ಸ್ ಮನ್
ಬೇಸ್ ಪ್ರೈಸ್ - 1 ಕೋಟಿ ರು.

ಆಲ್ರೌಂಡರ್ ಆದ್ರೂ ಇಲ್ಲ ಮಾನ್ಯತೆ
ಹೆಸರು - ಆ್ಯಂಡ್ರಿಲೆ ಪೆಹ್ಲುಕ್ವಾಯೊ (ವೆಸ್ಟ್ ಇಂಡೀಸ್)
ಸ್ಥಾನ - ಆಲ್ರೌಂಡರ್
ಬೇಸ್ ಪ್ರೈಸ್ - 1 ಕೋಟಿ ರು.

ಕೈಬಿಟ್ಟಿತು ಕೋಟಿ ರು.
ಹೆಸರು - ನಿಕ್ ಮ್ಯಾಡಿಸನ್ (ಆಸ್ಟ್ರೇಲಿಯಾ)
ಸ್ಥಾನ - ಬ್ಯಾಟ್ಸ್ ಮನ್
ಬೇಸ್ ಪ್ರೈಸ್ - 1 ಕೋಟಿ ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications