For Quick Alerts
ALLOW NOTIFICATIONS  
For Daily Alerts
 

IPL 2024ರ ಹರಾಜಿನಲ್ಲಿ ಅನ್‌ಸೋಲ್ಡ್, ಮತ್ತೆ ಕೌಂಟಿ ಕ್ರಿಕೆಟ್‌ನತ್ತ ಮುಖ ಮಾಡಿದ ತ್ರಿಶತಕ ವೀರ!

2024ರ ಐಪಿಎಲ್ ಮಿನಿ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸದ ಕಾರಣ, ಏಪ್ರಿಲ್‌ನಲ್ಲಿ ನಡೆಯುವ ಕೌಂಟಿ ಚಾಂಪಿಯನ್‌ಶಿಪ್‌ಗಾಗಿ ನಾರ್ಥಾಂಪ್ಟನ್‌ಶೈರ್‌ಗೆ ತಂಡಕ್ಕೆ ಮರಳಲು ಭಾರತೀಯ ಬ್ಯಾಟರ್ ಕರುಣ್ ನಾಯರ್ ಸಜ್ಜಾಗಿದ್ದಾರೆ.

ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟರ್ ಕರುಣ್ ನಾಯರ್ ಅವರು ಏಪ್ರಿಲ್ ಮತ್ತು ಮೇನಲ್ಲಿ 7 ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಿಗಾಗಿ ನಾರ್ಥಾಂಪ್ಟನ್‌ಶೈರ್‌ಗೆ ಸೇರಲಿದ್ದಾರೆ.

32 ವರ್ಷದ ಕರುಣ್ ನಾಯರ್ ಕಳೆದ ಋತುವಿನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡದೊಂದಿಗೆ ಕೆಲವೇ ಪಂದ್ಯಗಳನ್ನು ಆಡಿದ್ದರೂ, ಯಶಸ್ವಿ ಅವಧಿಯನ್ನು ಹೊಂದಿದ್ದರು. ಕರುಣ್ ಆಡಿದ 3 ಇನ್ನಿಂಗ್ಸ್‌ಗಳಲ್ಲಿ 78, 150 ಮತ್ತು 21 ರನ್ ಗಳಿಸಿದರು.

Unsold In IPL 2024 Auction; Karun Nair Returns to County Championship

ಕೌಂಟಿ ಚಾಂಪಿಯನ್‌ಶಿಪ್‌ನ ಸತತ 2ನೇ ಋತುವಿನಲ್ಲಿ ಕರುಣ್ ನಾಯರ್ ಅವರನ್ನು ತಂಡಕ್ಕೆ ಸೇರಿಸಿದ್ದಕ್ಕಾಗಿ ನಾರ್ಥಾಂಪ್ಟನ್‌ಶೈರ್ ತಂಡದ ಮುಖ್ಯ ಕೋಚ್ ಜಾನ್ ಸ್ಯಾಡ್ಲರ್ ಸಂತಸ ವ್ಯಕ್ತಪಡಿಸಿದರು. ಕರುಣ್ ನಾಯರ್ ಅವರ ವಿಧಾನ ಮತ್ತು ತಂಡಕ್ಕಾಗಿ ಅವರು ರನ್ ಗಳಿಸಿದ ರೀತಿಗಾಗಿ ಸ್ಯಾಡ್ಲರ್ ಶ್ಲಾಘಿಸಿದರು.

"ಕರುಣ್ ನಾಯರ್ ನಮಗೆ ಕೆಲವು ನಂಬಲಾಗದ ರನ್ ಗಳಿಸಿದರು. ಅಲ್ಲದೆ, ಅವರ ಶಾಂತತೆ, ಅವರ ಆಟದ ಮನೋಧರ್ಮ ಮತ್ತು ಹೆಚ್ಚಿನ ರನ್‌ಗಳ ಹಸಿವು ಅದ್ಭುತವಾಗಿದೆ," ಎಂದು ಜಾನ್ ಸ್ಯಾಡ್ಲರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಕರುಣ್ ನಾಯರ್‌ನನ್ನು ಮತ್ತೆ ತಂಡದೊಂದಿಗೆ ಸೇರಿಸಿಕೊಳ್ಳಲು ನಾವು ಸಂತೋಷಪಡುತ್ತೇವೆ ಮತ್ತು ಈ ಋತುವಿನಲ್ಲಿ ಅವರು ಮತ್ತೊಮ್ಮೆ ನಮಗೆ ದೊಡ್ಡ ಆಸ್ತಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ," ಎಂದು ನಾರ್ಥಾಂಪ್ಟನ್‌ಶೈರ್ ತಂಡದ ಮುಖ್ಯ ಕೋಚ್ ಜಾನ್ ಸ್ಯಾಡ್ಲರ್ ಹೇಳಿದರು.

ಈ ಹಿಂದೆ, ಕರ್ನಾಟಕ ಬ್ಯಾಟರ್ ಕರುಣ್ ನಾಯರ್ ಅವರ ಐಪಿಎಲ್ ಬದ್ಧತೆಗಳ ಸಾಧ್ಯತೆಯಿಂದಾಗಿ, ಡಿಸೆಂಬರ್‌ವರೆಗೆ ಕೌಂಟಿ ಚಾಂಪಿಯನ್‌ಶಿಪ್‌ಗೆ ಲಭ್ಯತೆಯ ಬಗ್ಗೆ ಅನುಮಾನಗಳಿದ್ದವು. ಆದರೆ, ದುಬೈನಲ್ಲಿ ನಡೆದ ಮಿನಿ-ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಹೀಗಾಗಿ ಕೌಂಟಿ ಋತುವಿನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡಕ್ಕಾಗಿ ಮೊದಲ 7 ಪಂದ್ಯಗಳನ್ನು ಆಡಲಿದ್ದಾರೆ.

Unsold In IPL 2024 Auction; Karun Nair Returns to County Championship

ಕೌಂಟಿ ತಂಡವನ್ನು ಪ್ರತಿನಿಧಿಸಲು ಮತ್ತೊಂದು ಅವಕಾಶವನ್ನು ನೀಡಿದಕ್ಕಾಗಿ ಕರುಣ್ ನಾಯರ್ ಅವರು ಧನ್ಯವಾದ ತಿಳಿಸಿದ್ದಾರೆ ಮತ್ತು ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಮತ್ತೊಂದು ಹಂತಕ್ಕೆ ಮರಳಲು ರೋಮಾಂಚನಗೊಂಡಿದ್ದಾರೆ.

"ಕೌಂಟಿ ಚಾಂಪಿಯನ್‌ಶಿಪ್ ಕ್ರಿಕೆಟ್‌ನ ಮತ್ತೊಂದು ಹಂತಕ್ಕಾಗಿ ನಾರ್ಥಾಂಪ್ಟನ್‌ಶೈರ್ ತಂಡಕ್ಕೆ ಮರಳಲು ನಾನು ರೋಮಾಂಚನಗೊಂಡಿದ್ದೇನೆ. ಪಂದ್ಯಗಳನ್ನು ಗೆಲ್ಲುವುದು ಮತ್ತು ಬಡ್ತಿ ಪಡೆಯುವುದು ನನ್ನ ಗುರಿಯಾಗಿದೆ. ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗಾಗಿ ಸಹಾಯ ಮಾಡಲು ನಾನು ಉತ್ಸುಕನಾಗಿದ್ದೇನೆ," ಎಂದು ಕರುಣ್ ನಾಯರ್ ತಿಳಿಸಿದರು.

"ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಈ ಅದ್ಭುತ ಅವಕಾಶವನ್ನು ನೀಡಿದ ಕೋಚ್ ಮತ್ತು ನಾಯಕನಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಕಳೆದ ಋತುವಿನಲ್ಲಿ ನನ್ನ ಫಾರ್ಮ್‌ನಿಂದ ನಾನು ನಿಜವಾಗಿಯೂ ಸಂತೋಷಪಟ್ಟಿದ್ದೇನೆ. ನಾನು ಈಗಿನಿಂದಲೇ ಮುಂದುವರಿಯಬಹುದು ಮತ್ತು ಸ್ಕೋರ್ ಬೋರ್ಡ್‌ನಲಲ್ಲಿ ದೊಡ್ಡ ರನ್‌ಗಳನ್ನು ಕಲೆಹಾಕುವ ವಿಶ್ವಾಸವಿದೆ," ಎಂದರು.

ಕರುಣ್ ನಾಯರ್ ಭಾರತ ತಂಡದ ಪರ 6 ​​ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ವೀರೇಂದ್ರ ಸೆಹ್ವಾಗ್ ನಂತರ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ 2ನೇ ಆಟಗಾರನಾಗಿದ್ದಾರೆ. 2016-17ರ ಸರಣಿಯಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕರುಣ್ ನಾಯರ್ 303 ರನ್ ಗಳಿಸಿದ್ದರು.

ಕೌಂಟಿ ಚಾಂಪಿಯನ್‌ಶಿಪ್‌ನ ಉತ್ತರಾರ್ಧದಲ್ಲಿ ಪೃಥ್ವಿ ಶಾ ಅವರು ಕರುಣ್ ನಾಯರ್ ಬದಲಿಗೆ ಆಡಲಿದ್ದಾರೆ. ಐಪಿಎಲ್ 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ ಬಳಿಕ, ಕೌಂಟಿ ಋತುವಿನ ದ್ವಿತೀಯಾರ್ಧದಲ್ಲಿ ಕ್ಲಬ್‌ಗೆ ಮರಳಲು ಪೃಥ್ವಿ ಶಾ ಒಪ್ಪಿಕೊಂಡಿದ್ದಾರೆ.

Story first published: Wednesday, January 24, 2024, 9:30 [IST]
Other articles published on Jan 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+