Dewald Brevis IPL unsold: SA T20 ಲೀಗ್‌ನಲ್ಲಿ ಅಬ್ಬರಿಸಿದ ಮಿನಿ ಎಬಿಡಿ
ಇಂಡಿಯನ್ ಪ್ರೀಮಿಯರ್ ಲೀಗ್.. ವಿಶ್ವ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್‌ಗಳಲ್ಲಿ ಇದು ಒಂದು. ಈ ಲೀಗ್‌ನಲ್ಲಿ ಯುವ ಹಾಗೂ ಅನುಭವಿ ಆಟಗಾರರು ಭಾಗವಹಿಸುತ್ತಾರೆ. ಈ ಲೀಗ್‌ನಲ್ಲಿ ಒಂದೇ ಸೂರಿನಲ್ಲಿ ಹಲವು ಸ್ಟಾರ್ ಆಟಗಾರರು ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಈ ಲೀಗ್‌ನಲ್ಲಿ ಆಡಲು ಹಲವು ಯುವ ಆಟಗಾರರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ ಅದೃಷ್ಟ ಸಹ ಇವರೊಂದಿಗೆ ಇದ್ದಾಗ ಮಾತ್ರ ಇವರಿಗೆ ಫ್ರಾಂಚೈಸಿಗಳು ಗಾಳ ಹಾಕುತ್ತಾರೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿನಲ್ಲಿ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದ ಆಟಗಾರ, ಫ್ರಾಂಚೈಸಿ ಮನ ಕದಿಯುವಲ್ಲಿ ವಿಫಲರಾಗಿದ್ದರು. ಆದರೆ ಈಗ ದಕ್ಷಿಣ ಆಫ್ರಿಕಾ ಲೀಗ್‌ನ ಮೊದಲ ಪಂದ್ಯದಲ್ಲಿ ಆರ್ಭಟ ನಡೆಸಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ದಕ್ಷಿಣ ಆಫ್ರಿಕಾ ಡೆವಾಲ್ಡ್ ಬ್ರೆವಿಸ್. ಈಗ ಫ್ರಾಂಚೈಸಿಗಳು ಇವರನ್ನು ಏಕೆ ತಂಡಕ್ಕೆ ಸೇರಿಸಿಕೊಳ್ಳಲಿಲ್ಲ ಎಂಬಂತೆ ಪೇಚಾಟ ನಡೆಸಿದ್ದಾರೆ.

ಐಪಿಎಲ್ ಅನ್‌ಸೋಲ್ಡ್
ಡೆವಾಲ್ಡ್ ಬ್ರೆವಿಸ್ ಅವರು ಪ್ರಸಕ್ತ ಐಪಿಎಲ್ ಮೆಗಾ ಹಾರಜಿನಲ್ಲಿ 75 ಲಕ್ಷ ಮೂಲ ಬೆಲೆಯೊಂದಿಗೆ ಅಖಾಡ ಪ್ರವೇಶಿಸಿದ್ದರು. ಆದರೆ ಇವರನ್ನು ಕೊಳ್ಳಲು ಯಾವುದೇ ಮಾಲೀಕ ಮುಂದಾಗಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಡೆವಾಲ್ಡ್ ಬ್ರೆವಿಸ್ ಅಬ್ಬರದ ಆಟವನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
MI ಗೆಲುವಿನ ಆರಂಭ
ಎಸ್‌ಎ ಟಿ20 ಲೀಗ್‌ನಲ್ಲಿ ಆಡಿದ ಮೊದಲ ಪಂದ್ಯವೇ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಂಐ ಕೇಪ್ ಟೌನ್ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ಗೆ 174 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ 15 ಓವರ್‌ಗಳಲ್ಲಿ 77 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದ ಪ್ಲೇಯರ್ ಡೆವಾಲ್ಡ್ ಬ್ರೆವಿಸ್. ಇವರು ತಮ್ಮ ಬಿರುಸಿನ ಬ್ಯಾಟಿಂಗ್ ಪ್ರದರ್ಶನದ ಬಲದಿಂದಲೇ ಎಂಐ ತಂಡದ ಮೊತ್ತ ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲ ಪಂದ್ಯದಲ್ಲೇ ಅಬ್ಬರ
ಡೆವಾಲ್ಡ್ ಬ್ರೆವಿಸ್ ತಮ್ಮ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಹೆಸರುವಾಸಿ. ಇವರನ್ನು ಅಭಿಮಾನಿಗಳು ಪ್ರೀತಿಯಿಂದ ಮಿನಿ ಎಬಿಡಿ ಎಂದೇ ಕರೆಯುತ್ತಾರೆ. ಇವರು ಸನ್ ತಂಡದ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ಎದುರಿಸಿದ 29 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಈ ವೇಳೆ 57 ರನ್ ಸಿಡಿಸಿದರು. ಇವರ ಸ್ಟ್ರೈಕ್ ರೇಟ್ 196 ಆಗಿತ್ತು. ಇವರ ಆಟವನ್ನು ಕಂಡು ಐಪಿಎಲ್ ಫ್ರಾಂಚೈಸಿಗಳು ಇವರನ್ನು ಸುಮ್ಮನೇ ಬಿಟ್ವಾ ಎಂದು ಕೈ ಕೈ ಹಿಚಿಕೊಳ್ಳುತ್ತಿದ್ದಾರೆ.
ಐಪಿಎಲ್ ಸಾಧನೆ
21 ವರ್ಷದ ಯುವ ಆಟಗಾರ ಡೇವಿಡ್ ಈಗಾಗಲೇ ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇವರು ಒಟ್ಟಾರೆ ಐಪಿಎಲ್‌ನಲ್ಲಿ 10 ಪಂದ್ಯಗಳನ್ನು ಆಡಿದ್ದು 230 ರನ್ ಸಿಡಿಸಿದ್ದಾರೆ. ಇದರಲ್ಲಿ 17 ಬೌಂಡರಿ, 16 ಸಿಕ್ಸರ್ ಸೇರಿವೆ. ದಕ್ಷಿಣ ಆಫ್ರಿಕಾ ಪರ ಟಿ20 ಕ್ರಿಕೆಟ್ ಆಡುವ ಅವಕಾಶ ಸಿಕ್ಕರೂ ಬಳಸಿಕೊಳ್ಳುವಲ್ಲಿ ಆರಂಭದಲ್ಲಿ ಎಡವಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications