Unsung Heroes of RCB: ಸ್ಟಾರ್ ಆಟಗಾರರ ನಡುವೆ ಸದ್ದಿಲ್ಲದೆ ಮಿಂಚುತ್ತಿರುವ ಆರ್‌ಸಿಬಿಯ ಆಟಗಾರರು
ಆರ್‌ಸಿಬಿ ಈ ಬಾರಿ ಐಪಿಎಲ್ ಟ್ರೋಫಿ ಡಿಫೆಂಡ್ ಮಾಡಿಕೊಳ್ಳುವ ಉದ್ದೇಶದಿಂದ ಕಣಕ್ಕೆ ಇಳಿಯಲಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ, ಜಿಟಿ ವಿರುದ್ಧ ಕಾದಾಟವನ್ನು ನಡೆಸಲಿದೆ. ಆರ್‌ಸಿಬಿ ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಅಬ್ಬರಿಸಿದೆ. ಬೆಂಗಳೂರು ತಂಡ ಈ ಬಾರಿಯ ಲೀಗ್‌ನಲ್ಲಿ ನೀಡಿದ ಪ್ರದರ್ಶನ ಅಭಿಮಾನಿಗಳಿಗೆ ಮುದ ನೀಡಿದೆ. ಈ ವರದಿಯಲ್ಲಿ ಆರ್‌ಸಿಬಿ ಪರ ಆಡಿ ಹೆಚ್ಚು ಪ್ರಚಾರವನ್ನು ಪಡೆಯದೇ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿರುವ ಆಟಗಾರರ ಬಗ್ಗೆ ಪರಿಚಯ ಇಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ಟ್ರೋಫಿ ಡಿಫೆಂಡ್ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಈ ವರದಿಯಲ್ಲಿ ಯಾವುದೇ ಪ್ರಚಾರವಿಲ್ಲದೇ ತಂಡಕ್ಕಾಗಿ ಎಲೆ ಮರೆಯ ಕಾಯಿಯಂತೆ ದುಡಿದ ಆಟಗಾರರ ಬಗ್ಗೆ ವರದಿ ಇಲ್ಲಿದೆ.

ದೇವದತ್ ಪಡಿಕ್ಕಲ್
ಕರ್ನಾಟಕ ಅಭಿಮಾನಿಗಳ ನೆಚ್ಚಿನ ಆಟಗಾರ ದೇವದತ್ ಪಡಿಕ್ಕಲ್, ಈ ಬಾರಿ ಆಕ್ರಮಣಕಾರಿ ಕಾಣಿಸಿಕೊಂಡಿದ್ದಾರೆ. ಪವರ್‌ಪ್ಲೇ ಓವರ್‌ಗಳನ್ನು ಚೆನ್ನಾಗಿ ಬಳಸಿಕೊಂಡು ದೊಡ್ಡ ಹೊಡೆತಗಳನ್ನು ಬಾರಿಸಿ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡವನ್ನು ಹೇರುವ ದೇವದತ್ ಈ ಆವೃತ್ತಿಯಲ್ಲಿ 450ಕ್ಕೂ ಹೆಚ್ಚು ರನ್ ಬಾರಿಸಿದ ಬಾರಿಸಿದ್ದು, ಬೆಂಗಳೂರು ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದಾರೆ.
ರಸಿಕ್ ಸಲಾಂ ದರ್
ಆರ್‌ಸಿಬಿ ತಂಡದ ಡಗೌಟ್‌ನಲ್ಲೇ ಒಂದು ಆವೃತ್ತಿಯನ್ನು ಕಾದು ಕುಳಿತ ವೇಗದ ಬೌಲರ್ ರಸಿಕ್ ಸಲಾಂ ದರ್ ಅವಕಾಶಕ್ಕಾಗಿ ಕಾಯ್ದುಕುಳಿತಿದ್ದರು. ಐಪಿಎಲ್ 2026ರಲ್ಲಿ ಇವರಿಗೆ ಆಡಲು ಅವಕಾಶ ಲಭಿಸಿತು. ಇವರು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಂಡದ ನಂಬಿಕಸ್ಥ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ಅಮೋಘ ದಾಳಿಯನ್ನು ಸಂಘಟಿಸಿ 4 ವಿಕೆಟ್ ಕಬಳಿಸಿದರು. ಈ ಬಾರಿಯ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಆರ್‌ಸಿಬಿ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಎರಡನೇ ಸ್ಥಾನ. ಇವರು ಆಡಿದ 11 ಪಂದ್ಯಗಳಲ್ಲಿ 16 ವಿಕೆಟ್ ಪಡೆದಿದ್ದಾರೆ.
ಸುಯಶ್ ಶರ್ಮಾ
ಯುವ ಲೆಗ್ ಸ್ಪಿನ್ನರ್ ಸುಯಶ್ ಶರ್ಮಾ ಒಂದೇ ಪಂದ್ಯದಲ್ಲಿ 20 ಡಾಟ್ ಬಾಲ್‌ಗಳನ್ನು ಬೌಲಿಂಗ್ ಮಾಡುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಸ್ಪಿನ್ನರ್ ಎಂಬ ದಾಖಲೆ ಬರೆದಿದ್ದಾರೆ. ರನ್ ಗಳಿಕೆಗೆ ಬ್ರೇಕ್ ಹಾಕಿ, ಎದುರಾಳಿ ಬ್ಯಾಟರ್‌ಗಳ ಮೇಲೆ ಒತ್ತಡ ಹೇರುವ ಸುಯಶ್ ಆರ್‌ಸಿಬಿ ತಂಡದ ನಂಬಿಕಸ್ಥ ಬೌಲರ್.

ಜಾಕೋಬ್ ಡಫಿ
ಈ ಆವೃತ್ತಿಯ ಆರಂಭದಲ್ಲಿ ಭರವಸೆಯ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ನೀಡಿದ ಬೌಲರ್ ನ್ಯೂಜಿಲೆಂಡ್ ತಂಡದ ಜಾಕೋಬ್ ಡಫಿ. ಇವರು ಪದಾರ್ಪಣೆ ಪಂದ್ಯದಿಂದ ಹಿಡಿದು ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದವರೆಗೆ ಇವರು ಆರಂಭದಲ್ಲೇ ವಿಕೆಟ್ ಪಡೆದು ಮಿಂಚಿದ್ದಾರೆ.
ವೆಂಕಟೇಶ್ ಅಯ್ಯರ್
ಆರಂಭದಲ್ಲಿ ಬೆಂಚ್ ಕಾಯ್ದಿದ್ದ ವೆಂಕಟೇಶ್ ಅಯ್ಯರ್, ಬಳಿಕ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಪ್ರತಿಭಾನ್ವಿತ ಆಟಗಾರ. ಇವರು ತಂಡ ಯಾವುದೇ ಜವಾಬ್ದಾರಿ ನೀಡಿದರೂ ಸಹ ಸಮರ್ಥವಾಗಿ ನಿಭಾಯಿಸಲು ಸದಾ ಸಿದ್ಧರಾಗಿರುವ ಪ್ಲೇಯರ್. ಪಂದ್ಯದ ನಿರ್ಣಾಯಕ ಹಂತದಲ್ಲಿ ಕಣಕ್ಕಿಳಿದು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಬ್ಯಾಟರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications

