UP vs GG WPL 2025: ಅಂಕ ಪಟ್ಟಿಯಲ್ಲಿ ಬಡ್ತಿಗಾಗಿ ಗುಜರಾತ್, ಯುಪಿ ಕಾದಾಟ
ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ನಡುವಿನ ಕಾದಾಟ ಲಕ್ನೋನಲ್ಲಿ ನಡೆಯಲಿದೆ. ಗೆಲುವಿನ ಟ್ರ್ಯಾಕ್‌ಗೆ ಮರಳಿರುವ ಗುಜರಾತ್ ಜೈಂಟ್ಸ್ ತವರಿನ ತಂಡವನ್ನು ಎದುರಿಸಲಿದೆ. ದೀಪ್ತಿ ಶರ್ಮಾ ಪಡೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಗೆಲುವಿನ ಖಾತೆ ಓಪನ್ ಮಾಡಲು ರಣ ತಂತ್ರ ಹೆಣೆದುಕೊಂಡಿದೆ. ಎರಡೂ ತಂಡಗಳಲ್ಲಿ ಸ್ಟಾರ್ ಆಟಗಾರ್ತಿಯರು ಇದ್ದು ರೋಚಕತೆ ಹೆಚ್ಚಿಸಿದೆ.
ಗುಜರಾತ್ ಜೈಂಟ್ಸ್ ಆಡಿದ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಕಂಡಿದ್ದು 4 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಇನ್ನು ಯುಪಿ ಆಡಿದ 5 ಪಂದ್ಯಗಳಲ್ಲಿ 2 ಜಯ, 3 ಸೋಲು ಕಂಡಿದ್ದು, 4 ಅಂಕ ಕಲೆ ಹಾಕಿದ್ದು, 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಅಂಕ ಪಟ್ಟಿಯಲ್ಲಿ ಬಡ್ತಿ ಸಾಧಿಸಲಿದೆ. ಉಭಯ ತಂಡಗಳು ಈಗಾಗಲೇ 5 ಬಾರಿ ಮುಖಾಮುಖಿ ಆಗಿದ್ದು, ಗುಜರಾತ್ 2 ಬಾರಿ, ಯುಪಿ 3 ಜಯ ಸಾಧಿಸಿದೆ.

ಸ್ಟಾರ್‌ಗಳೇ ಬಲ
ಯುಪಿ ವಾರಿಯರ್ಸ್ ತಂಡದ ಬ್ಯಾಟರ್‌ಗಳು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಚಿಲ್ಲ ಹೆನ್ರಿ ಟೂರ್ನಿಯಲ್ಲಿ ವೇಗದ ಅರ್ಧಶತಕ ಬಾರಿಸಿ ಸುದ್ದಿಯಲ್ಲಿದ್ದಾರೆ. ಇವರು ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲರು. ಉಳಿದಂತೆ ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ ಸಹ ಬೌಲರ್‌ಗಳ ರಣ ತಂತ್ರವನ್ನು ಬುಡಮೇಲು ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಆದರೆ ನಾಯಕಿ ದೀಪ್ತಿ ಶರ್ಮಾ ಸ್ಥಿರ ಬ್ಯಾಟಿಂಗ್ ನಡೆಸಬೇಕಿದೆ. ಇವರು ಈ ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದಿದ್ದಾರೆ. ಉಳಿದ ಬ್ಯಾಟರ್‌ಗಳು ತಮ್ಮ ಜವಾಬ್ದಾರಿ ಅರಿತು ಆಡಬೇಕಿದೆ.
ಆಸ್ಟ್ರೇಲಿಯಾದ ಗ್ರೇಸ್ ಹ್ಯಾರಿಸ್ ತಂಡದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್. ಇವರಿಗೆ ಭಾರತೀಯ ಬೌಲರ್‌ಗಳು ಸಹ ಉತ್ತಮ ಸಾಥ್ ನೀಡಬೇಕಿದೆ. ಆರ್‌ಸಿಬಿ ವಿರುದ್ಧದ ಸೂಪರ್ ಓವರ್‌ನಲ್ಲಿ ಬಿಗುವಿನ ದಾಳಿ ನಡೆಸಿದ್ದ ಸೋಫಿ ಎಕ್ಲೆಸ್ಟೋನ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರಲಿದೆ. ಕ್ರಾಂತಿ ಗೌಡ ಸಹ ಸರಿಯಾದ ಸ್ಥಳದಲ್ಲಿ ಬೌಲಿಂಗ್ ನಡೆಸಬೇಕಿದೆ. ಅಂದಾಗ ಗೆಲುವಿನ ಕನಸು ನನಸಾಗುತ್ತದೆ.

ಲಯಕ್ಕೆ ಮರಳಿರುವ ಗುಜರಾತ್
ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದ್ದ ಗುಜರಾತ್ ಜೈಂಟ್ಸ್, ಆರ್‌ಸಿಬಿ ತಂಡವನ್ನು ಮಣಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಈಗ ಮತ್ತೊಂದು ಗೆಲುವು ಸಾಧಿಸಲು ನಾಯಕಿ ಆಶ್ಲೀಗ್ ಗಾರ್ಡ್ನರ್, ಡಿಯಾಂಡ್ರಾ ಡಾಟಿನ್, ಹರ್ಲೀನ್ ಡಿಯೋಲ್, ಬೆತ್ ಮೂನಿ ತಮ್ಮ ನೈಜ್ಯ ಆಟವನ್ನು ಆಡಬೇಕಿದೆ. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ. ಬೌಲಿಂಗ್‌ನಲ್ಲಿ ನಾಯಕಿಗೆ ಕಾಶ್ವೀ ಗೌತಮ್, ತನುಜಾ ಕನ್ವರ್ ಸಾಥ್ ನೀಡಬೇಕಿದೆ. ಯುವ ಸ್ಪಿನ್ ಬೌಲರ್ ಪ್ರೀಯಾ ಮಿಶ್ರಾ ಭರವಸೆ ಮೂಡಿಸಿದ್ದಾರೆ. ಇನ್ನು ಡಿಯಾಂಡ್ರಾ ಡಾಟಿನ್ ಸಹ ಬೌಲಿಂಗ್ ಬಿಗುವಿನ ದಾಳಿ ನಡೆಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications