For Quick Alerts
ALLOW NOTIFICATIONS  
For Daily Alerts
 

WPL 2026: ಹರ್ಲಿನ್ ಮಿಂಚು: ಯುಪಿ ವಾರಿಯರ್ಸ್‌ಗೆ ಮೊದಲ ಜಯ

ನವಿ ಮುಂಬೈ: ಭರವಸೆಯ ಆಟಗಾರ್ತಿ ಹರ್ಲಿನ್ ಡಿಯೋಲ್‌ ಅವರು ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ಯುಪಿ ವಾರಿಯರ್ಸ್‌ 4ನೇ ಆವೃತ್ತಿಯ ಮಹಿಳಾ ಆವೃತ್ತಿಯ ಲೀಗ್‌ನಲ್ಲಿ 5 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ ತಂಡವನ್ನು ಮಣಿಸಿ, ಲೀಗ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.

162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಯುಪಿ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಮೆಗ್ ಲ್ಯಾನಿಂಗ್‌ ಹಾಗೂ ಕಿರಣ್ ನವಗಿರೆ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟವನ್ನು ನೀಡಿತು. ಈ ಜೋಡಿ 6.1 ಓವರ್‌ಗಳಲ್ಲಿ 42 ರನ್‌ ಜೊತೆಯಾಟ ನೀಡಿತು. ಈ ವೇಳೆ ನಾಯಕಿ ಮೆಗ್‌ ಲ್ಯಾನಿಂಗ್‌ 3 ಬೌಂಡರಿ, 1 ಸಿಕ್ಸರ್‌ ನೆರವಿನಿಂದ 25 ರನ್‌ ಸಿಡಿಸಿದರು. ಕಿರಣ್ ನವಗಿರೆ 10 ರನ್‌ ಬಾರಿಸಿ ಅಬ್ಬರಿಸಿದರು.

UP Warriorz Clinch First Win as Harleen Deol s Fifty Powers 5-Wicket Victory Over Mumbai Indians

ಫೋಬೆ ಲಿಚ್‌ಫೀಲ್ಡ್ ಹಾಗೂ ಹರ್ಲಿನ್‌ ಡಿಯೋಲ್‌ ಜೋಡಿ ಕಮಾಲ್‌ ಪ್ರದರ್ಶನ ನೀಡಿದರು. ಈ ಜೋಡಿ ಉತ್ತಮ ಆಟದ ಪ್ರದರ್ಶನ ನೀಡಿತು. ಈ ಜೋಡಿ 49 ಎಸೆತಗಳಲ್ಲಿ 73 ರನ್‌ ಸೇರಿಸಿತು. ಫೋಬೆ ಲಿಚ್‌ಫೀಲ್ಡ್ 22 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್‌ ಬಾರಿಸಿ ಔಟ್ ಆದರು.

ಹರ್ಲಿನ್‌ ಅರ್ಧಶತಕ

ನಾಲ್ಕನೇ ವಿಕೆಟ್‌ಗೆ ಕ್ಲೋಯ್ ಟ್ರಯಾನ್ ಹಾಗೂ ಭರವಸೆಯ ಆಟಗಾರರಾದ ಹರ್ಲಿನ್ ಜೋಡಿ ತಂಡಕ್ಕೆ ಅಗತ್ಯವಿದ್ದ ರನ್‌ಗಳನ್ನು ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಈ ಜೋಡಿ 20 ಎಸೆತಗಳಲ್ಲಿ ಅಜೇಯ 44 ರನ್‌ಗಳ ಜೊತೆಯಾಟವನ್ನು ನೀಡಿತು. ಕ್ಲೋಯ್ ಟ್ರಯಾನ್ 11 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ ಅಜೇಯ 27 ರನ್‌ ಸಿಡಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಹರ್ಲಿನ್‌ 39 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ ಅಜೇಯ 64 ರನ್‌ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

UP Warriorz Clinch First Win as Harleen Deol s Fifty Powers 5-Wicket Victory Over Mumbai Indians

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾಗಿ ಆಡುವ ಅವಕಾಶವನ್ನು ಬಡ್ತಿ ಪಡೆದ ಆಲ್‌ರೌಂಡರ ಅಮನ್‌ಜೋತ್ ಕೌರ್‌ಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ನೀಡಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಅಮನ್‌ಜೋತ್‌ ಕೌರ್‌ 33 ಎಸೆತಗಳಲ್ಲಿ 7 ಬೌಂಡರಿ ಸಹಾಯದಿಂದ 38 ರನ್‌ ಸಿಡಿಸಿದರು. ಮೊದಲ ವಿಕೆಟ್‌ಗೆ ಆರಂಭಿಕರು 43 ರನ್‌ ಸೇರಿಸಿತು. ಯುವ ಆಟಗಾರ್ತಿ ಜಿ ಕಮಲಿನಿ (5) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ನಾಯಕಿ ಹರ್ಮನ್‌ ಪ್ರೀತ್‌ ಕೌರ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 16 ರನ್‌ ಬಾರಿಸಿದರು.

ನ್ಯಾಟ್ ಸಿವರ್-ಬ್ರಂಟ್ ಅರ್ಧಶತಕ

ನಿಕೋಲಾ ಕ್ಯಾರಿ ಹಾಗೂ ನ್ಯಾಟ್ ಸಿವರ್-ಬ್ರಂಟ್ ಜೋಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಯಿತು. ಈ ಜೋಡಿ 44 ಎಸೆತಗಳಲ್ಲಿ 85 ರನ್‌ ಸೇರಿಸಿತು. ನ್ಯಾಟ್ ಸಿವರ್-ಬ್ರಂಟ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು 43 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 65 ರನ್‌ ಬಾರಿಸಿದರು. ನಿಕೋಲಾ ಕ್ಯಾರಿ ಅಜೇಯ 32 ರನ್‌ ಸಿಡಿಸಿದರು. ಅಂತಿಮವಾಗಿ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 161 ರನ್‌ ಸಿಡಿಸಿತು.

Story first published: Thursday, January 15, 2026, 23:52 [IST]
Other articles published on Jan 15, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+