ಭಾರತ ವಿರುದ್ಧದ ಏಕದಿನ ಸರಣಿಗೆ ಶ್ರೀಲಂಕಾ ತಂಡ ಪ್ರಕಟ
ಕೊಲಂಬೋ, ಆಗಸ್ಟ್ 16 : ಟೀಂ ಇಂಡಿಯಾ ವಿರುದ್ಧ ಐದು ಏಕದಿನ ಕ್ರಿಕೆಟ್ ಸರಣಿಗೆ 15 ಮಂದಿ ಆಟಗಾರರ ಶ್ರೀಲಂಕಾ ತಂಡವನ್ನು ಆಯ್ಕೆಮಾಡಲಾಗಿದೆ.
ಏಂಜೆಲೋ ಮ್ಯಾಥ್ಯೂಸ್ ನಾಯಕ ಸ್ಥಾನದಿಂದ ಕೆಳಕ್ಕಿಳಿದ ಬಳಿಕ ಭಾರತ ವಿರುದ್ಧದ ಏಕದಿನ ಸರಣಿಗೆ ಎಡಗೈ ಬ್ಯಾಟ್ಸ್ ಮನ್ ಉಪುಲ್ ತರಂಗಾ ಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ.

ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದ ಆಲ್ ರೌಂಡರ್ ಗಳಾದ ತಿಸಾರ ಪೆರೇರಾ ಹಾಗೂ ಮಿಲಿಂದಾ ಸಿರಿವರ್ಧನ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಭಾನುವಾರ ದಂಬುಲಾದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಶ್ರೀಲಂಕಾ ಈಗಾಗಲೇ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿದೆ.
ಲಂಕಾ ತಂಡ ಇಂತಿದೆ:
ಉಪುಲ್ ತರಂಗಾ (ನಾಯಕ), ಮ್ಯಾಥ್ಯೂಸ್, ಡಿಕ್ ವೆಲ್ಲಾ, ದನುಷ್ಕಾ, ಕುಸಾಲ್, ಚಮರಾ ಕಪುಗೆಡೆರಾ, ಮಿಲಿಂದಾ ಸಿರಿವರ್ಧನ, ಪುಷ್ಪಕುಮಾರ, ಧನಂಜಯ, ಸಂಡಕನ್, ತಿಸಾರ, ವನ್ನಿಡು ಹಸರಂಗ, ಲಸಿತ್ ಮಾಲಿಂಗ, ದುಷ್ಮಾಂತ ಚಮೀರಾ, ಫೆರ್ನಾಂಡೋ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications