Urvil Patel: ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್: ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ
ಸೌದಿ ಅರೆಬಿಯಾದಲ್ಲಿ ಇತ್ತೀಚಿಗೆ ಐಪಿಎಲ್ ಮೆಗ ಹರಾಜು ನಡೆಯಿತು. ಈ ಹರಾಜಿನಲ್ಲಿ ಸ್ಟಾರ್ ಆಟಗಾರರು ಬೇರೆ ಬೇರೆ ತಂಡಗಳತ್ತ ಮುಖ ಮಾಡಿದರು. ಹಲವು ಆಟಗಾರರು ಈ ಬಾರಿ ಅನ್‌ಸೋಲ್ಡ್ ಲೀಸ್ಟ್ ಸೇರಿದ್ದಾರೆ. ಇನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡು ಅನ್‌ಸೋಲ್ಡ್ ಆದ ಆಟಗಾರ, ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಹಾಗಿದ್ದರೆ ಆ ಆಟಗಾರ ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ನವೆಂಬರ್ 24 ಹಾಗೂ 25 ರಂದು ಐಪಿಎಲ್ ಮೆಗಾ ಹರಾಜು ನಡೆಯಿತು. ಈ ಹರಾಜಿನಲ್ಲಿ ಹಲವು ಯುವ ಆಟಗಾರರು ಉತ್ತಮ ಮೊತ್ತವನ್ನು ತಮ್ಮ ಜೇಬಿಗೆ ಹಾಕಿಕೊಂಡರು. ಆದರೆ ಗುಜರಾತ್ ಟೈಟಾನ್ಸ್ ರಿಲೀಸ್ ಮಾಡಿದ್ದ ವಿಕೆಟ್ ಕೀಪರ್ ಬ್ಯಾಟರ್ ಯಾವೊಬ್ಬ ಫ್ರಾಂಚೈಸಿ ಮಣೆ ಹಾಕಲಿಲ್ಲ. ಆದರೆ ಈ ಪ್ಲೇಯರ್ ಭಾರತದಲ್ಲಿ ನಡೆಯುತ್ತಿರುವ ಸೈಯ್ಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನವನ್ನು ನೀಡಿ ದಾಖಲೆ ಬರೆದಿದ್ದಾರೆ.

ವೇಗದ ಶತಕ ಬಾರಿಸಿದ ಬ್ಯಾಟರ್ ಯಾರು?
ಬುಧವಾರ ನಡೆದ ಸೈಯದ್ ಮುಷ್ತಾಕ್ ಅಲಿ ಬಿ ಗುಂಪಿನ ಪಂದ್ಯದಲ್ಲಿ ಗುಜರಾತ್ ಹಾಗೂ ತ್ರಿಪುರಾ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಗುಜರಾತ್ ಪರ ಬ್ಯಾಟ್ ಮಾಡಿದ ಉರ್ವಿಲ್ ಪಟೇಲ್ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡನೇ ವೇಗದ ಶತಕ ಬಾರಿಸಿದ್ದಾರೆ. ಈ ಮೂಲಕ ಇವರು ಇತಿಹಾಸದ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ಇವರು 28 ಎಸೆತಗಳಲ್ಲಿ ಶತಕ ಬಾರಿಸಿ ಸಾಧನೆ ಮಾಡಿದ್ದರೆ. ಈ ಮೂಲಕ ಚುಟುಕು ಫಾರ್ಮೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.
27 ಎಸೆತಗಳಲ್ಲಿ ಶತಕ
ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ಶತಕ ಬಾರಿಸಿದ ದಾಖಲೆ ಎಸ್ಟೋನಿಯಾದ ಸಾಹಿಲ್ ಚೌಹಾಣ್ ಅವರದ್ದಾಗಿದೆ. ಇವರು ಇದೇ ಜುನ್ 17 ರಂದು ಎಸ್ಟೋನಿಯಾ ಹಾಗೂ ಸೈಪ್ರಸ್ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಈ ವೇಳೆ ಇವರು ಕೇವಲ 41 ಎಸೆತಗಳಲ್ಲಿ 6 ಬೌಂಡರಿ, 18 ಸಿಕ್ಸರ್ ಸಹಾಯದಿಂದ 144 ರನ್ ಸಿಡಿಸಿದ್ದರು. ಆದರೆ ಇವರು ಶತಕ ಬಾರಿಸಲಿ ಜಸ್ಟ್ 27 ಎಸೆತಗಳನ್ನು ಪಡೆದಿದ್ದರು.
ಪಂದ್ಯದ ಫಲಿತಾಂಶ
ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಯಲ್ಲಿ ತ್ರಿಪುರ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 155 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಗುಜರಾತ್ 10.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 156 ರನ್ ಸೇರಿಸಿತು. ಈ ಪಂದ್ಯದಲ್ಲಿ ಗುಜರಾತ್ ಪರ ಇನಿಂಗ್ಸ್ ಆರಂಭಿಸಿದ ಉರ್ವಿಲ್ ಪಟೇಲ್ 35 ಎಸೆತಗಳಲ್ಲಿ 7 ಬೌಂಡರಿ, 12 ಸಿಕ್ಸರ್ ಸಹಾಯದಿಂದ 113 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು.
ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ
| ಆಟಗಾರ | ಎಸೆತ | ಪಂದ್ಯ |
| ಸಾಹಿಲ್ ಚೌಹಾಣ್ | 27 | ಎಸ್ಟೋನಿಯಾ vs ಸೈಪ್ರಸ್ |
| ಉರ್ವಿಲ್ ಪಟೇಲ್ | 28 | ಗುಜರಾತ್ vs ತ್ರಿಪುರಾ |
| ಕ್ರಿಸ್ ಗೇಲ್ | 30 | ಆರ್‌ಸಿಬಿ vs ಪುಣೆ ವಾರಿಯರ್ಸ್ |
| ರಿಷಭ್ ಪಂತ್ | 32 | ದೆಹಲಿ vs ಹಿಮಾಚಲ ಪ್ರದೇಶ |
| ವಿಹಾನ್ ಲುಬ್ಬೆ | 33 | ನಾರ್ತ್ ವೆಸ್ಟ್ vs ಲಿಂಪೊಪೊ |
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications