ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಟ ಮೊತ್ತಕ್ಕೆ ಆಲ್ಔಟ್ ಆದ ಯುಎಸ್‌ಎ

ಅಂತಾರಾಷ್ಟ್ರೀಯ ಏಕದಿನದಲ್ಲಿ ಯುಎಸ್‌ಎ ಕೆಟ್ಟದಾಖಲೆಯೊಂದನ್ನು ಮಾಡಿದೆ. ಏಕದಿನದಲ್ಲಿ ಕನಿಷ್ಟ ಮೊತ್ತಕ್ಕೆ ಆಲ್‌ಔಟ್ ಆಗಿ ಈ ಅವಮಾನಕ್ಕೆ ತುತ್ತಾಗಿದೆ. ಯುಎಸ್‌ಎ ನೇಪಾಳ ವಿರುದ್ಧದ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಕೇವಲ 35 ರನ್‌ಗೆ ಆಲೌಟ್ ಆಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಟ ಮೊತ್ತಕ್ಕೆ ಆಲೌಟ್ ಆದ ಪಟ್ಟಿಯಲ್ಲಿ ಜಿಂಬಾಬ್ವೆ ಜೊತೆಗೆ ಮೊದಲ ಸ್ಥಾನವನ್ನು ಅಲಂಕರಿಸಿ ಬೇಡದ ದಾಖಲೆಯನ್ನು ಮಾಡಿಕೊಂಡಿದೆ. ಜಿಂಬಾಬ್ವೆ ಶ್ರೀಲಂಕಾ ವಿರುದ್ಧ 2004ರಲ್ಲಿ ಇಷ್ಟೆ ಮೊತ್ತಕ್ಕೆ ಆಲೌಟ್ ಆಗಿತ್ತು.
ನೇಪಾಳದ ಸ್ಪಿನ್ನರ್ ಸಂದೀಪ್ ಲಮಿಚ್ಚನ್ನೆ ಮತ್ತು ಸುಶಾನ್ ಭರಿ ದಾಳಿಗೆ ಯುಎಸ್‌ಎ ದಾಂಡಿಗರು ಪಟಪಟನೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದಾರೆ. 6 ಓವರ್‌ಗಳನ್ನು ಎಸೆದ ಸಂದೀಪ್ 16 ರನ್ ನೀಡಿ 6 ವಿಕೆಟ್ ಪಡೆದರೆ ಸುಶಾನ್ ಭರಿ ಮೂರು ಓವರ್‌ಗಳನ್ನು ಎಸೆದು 4 ವಿಕೆಟ್ ಪಡೆದು ಮಿಂಚಿದರು.
ಈ ಪಂದ್ಯದಲ್ಲಿ ಯುಎಸ್‌ಎ ತಂಡ ಕೇವಲ 12 ಓವರ್‌ಗಳನ್ನು ಎದುರಿಸಲಷ್ಟೇ ಶಕ್ತವಾಯಿತು. ಈ ಮೂಲಕ ಕನಿಷ್ಟ ಮೊತ್ತಕ್ಕೆ ಆಲೌಟ್ ಆದ ಕೆಟ್ಟ ದಾಖಲೆಯನ್ನು ಜಿಂಬಾಬ್ವೆ ಜೊತೆಗೆ ಹಂಚಿಕೊಂಡಿದೆ.
ಯುಎಸ್‌ಎ ಪರವಾಗಿ ಆರಂಭಿಕ ಆಟಗಾರ ಗ್ಸೇವಿಯರ್ ಮಾರ್ಶಲ್ 16 ರನ್‌ಗಳಿಸಿದ್ದನ್ನು ಬಿಟ್ಟರೆ ಉಳಿದ ಯಾವ ಆಟಗಾರನೂ ಕೂಡ 5 ರನ್‌ಗಳಿಸಲು ಕೂಡ ವಿಫಲರಾದರು. ನಾಲ್ಕು ಆಟಗಾರರು ಸೊನ್ನೆ ಸುತ್ತಿದರು. ಐಸಿಸಿ ವರ್ಲ್ಡ್‌ಕಪ್ ಲೀಗ್ 2 ರ ಪಂದ್ಯದಲ್ಲಿ ಯುಎಸ್‌ಎ ಈ ಕನಿಷ್ಟ ಮೊತ್ತವನ್ನು ದಾಖಲಿಸಿದೆ. 2023 ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲು ನಡೆಯುವ ಟೂರ್ನಿ ಇದಾಗಿದೆ.
ಯುಎಸ್‌ಎ ನೀಡಿದ ನೀಡಿದ ಈ ಮೊತ್ತವನ್ನು ಬೆನ್ನಟ್ಟಿದ ನೇಪಾಳ ತಂಡ 5.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications