For Quick Alerts
ALLOW NOTIFICATIONS  
For Daily Alerts
 

2024ರ ಟಿ20 ವಿಶ್ವಕಪ್‌ಗೆ ಯುಎಸ್ಎ ತಂಡ ಪ್ರಕಟ; ಉನ್ಮುಕ್ತ್ ಚಾಂದ್ ಔಟ್; ಕೋರಿ ಆಂಡರ್ಸನ್ ಇನ್!

ಜೂನ್‌ 1ರಿಂದ ಜೂನ್ 29ರವರೆಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ ಸಹ-ಆತಿಥ್ಯದಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ಹಲವು ಈಗಾಗಲೇ ಹಲವು ರಾಷ್ಟ್ರಗಳು ತಮ್ಮ ತಂಡಗಳನ್ನು ಪ್ರಕಟಿಸಿವೆ.

ಇದೀಗ 20 ರಾಷ್ಟ್ರಗಳ ಐಸಿಸಿ ಪಂದ್ಯಾವಳಿಗೆ 15 ಸದಸ್ಯರ ತಂಡವನ್ನು ಯುಎಸ್ಎ ಪ್ರಕಟಿಸಿದ್ದು, ಜೂನ್ 1ರಂದು ಡಲ್ಲಾಸ್‌ನಲ್ಲಿ ಕೆನಡಾ ವಿರುದ್ಧ ಯುಎಸ್ಎ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳೊಂದಿಗೆ ಗುಂಪು ಹಂಚಿಕೊಂಡಿರುವ ಅಮೆರಿಕ ತಂಡ ಜೂನ್ 12ರಂದು ಭಾರತ ತಂಡವನ್ನು ಎದುರಿಸಲಿದೆ.

USA Squad Announced for T20 World Cup 2024 Unmukt Chand out Corey Anderson In

ಅನುಭವಿ ಆಟಗಾರ ಉನ್ಮುಕ್ತ್ ಚಾಂದ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಕಾರಣ, ಟಿ20 ವಿಶ್ವಕಪ್‌ಗೆ ಯುಎಸ್ಎ ತಂಡದ 15 ಸದಸ್ಯರ ತಂಡದಲ್ಲಿ ಕೋರಿ ಆಂಡರ್ಸನ್ ಅವರನ್ನು ಸೇರ್ಪಡೆಗೊಳಿಸಲಾಗಿದೆ.

ಏಪ್ರಿಲ್‌ನಲ್ಲಿ ಕೆನಡಾ ವಿರುದ್ಧದ ಟಿ20 ಸರಣಿಗಾಗಿ ಭಾರತೀಯ ಮಾಜಿ ಆಟಗಾರ ಉನ್ಮುಕ್ತ್ ಚಾಂದ್ ಯುಎಸ್ಎ ತಂಡದ ಭಾಗವಾಗಿರಲಿಲ್ಲ. ಇದು ಟಿ20 ವಿಶ್ವಕಪ್‌ಗೆ ಪ್ರವೇಶಿಸುವ ಚಾಂದ್ ಅವರ ಭರವಸೆಯನ್ನು ಅನುಮಾನಕ್ಕೆ ಒಳಪಡಿಸಿತ್ತು ಮತ್ತು ಇದೀಗ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ.

USA Squad Announced for T20 World Cup 2024 Unmukt Chand out Corey Anderson In

ಉನ್ಮುಕ್ತ್ ಚಾಂದ್ ಅವರು ಕೆನಡಾ ವಿರುದ್ಧದ ಸರಣಿಯಿಂದ ಹೊರಗುಳಿದ ನಂತರ, ಬದಲಾವಣೆಯ ಅಗತ್ಯವಿದೆ ಎಂದು ಹೇಳಿದ್ದರು. ಏಪ್ರಿಲ್‌ನಲ್ಲಿ ನಡೆದ ಸರಣಿಯಲ್ಲಿ 6 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಾಪಸ್ಸಾದ ನ್ಯೂಜಿಲೆಂಡ್ ಮಾಜಿ ಆಟಗಾರ ಕೋರಿ ಆಂಡರ್ಸನ್, ಯುಎಸ್ಎನ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾದರು.

ಕೋರಿ ಆಂಡರ್ಸನ್ ಕೊನೆಯದಾಗಿ 2018ರಲ್ಲಿ ನ್ಯೂಜಿಲೆಂಡ್ ತಂಡದ ಪರ ಆಡಿದ್ದರು ಮತ್ತು ಎಲ್ಲಾ ಮೂರು ಸ್ವರೂಪಗಳಲ್ಲಿ 93 ಬಾರಿ ಕಿವೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಯುಎಸ್ಎ ತಂಡದ ನಾಯಕತ್ವವನ್ನು ಭಾರತೀಯ ಮೂಲದ ಮೊನಾಂಕ್ ಪಟೇಲ್ ವಹಿಸಿದ್ದು, ಆರನ್ ಜೋನ್ಸ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಅನುಭವಿ ವೇಗಿ ಅಲಿ ಖಾನ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

"ಯುಎಸ್ಎ ಕ್ರಿಕೆಟ್ (ಯುಎಸ್ಎಸಿ) ಐದು ಸದಸ್ಯರ ಪುರುಷರ ರಾಷ್ಟ್ರೀಯ ಆಯ್ಕೆ ಸಮಿತಿಯು ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಜೂನ್ 1ರಂದು ಆರಂಭವಾಗಲಿರುವ ಪಂದ್ಯಾವಳಿಯನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸಿದ್ದು, ಮೊನಾಂಕ್ ಪಟೇಲ್ ಮತ್ತೊಮ್ಮೆ ಯುಎಸ್ಎ ತಂಡವನ್ನು ಮುನ್ನಡೆಸಲಿದ್ದಾರೆ".

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ತಂಡವು ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್‌ಗೆ ಮುಂಚಿತವಾಗಿ ಮೂರು ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನು ಆಡಲಿದೆ.

"ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಜಾನಂದ್ ಸಿಂಗ್ ಬದಲಿಗೆ ಬಲಗೈ ಬ್ಯಾಟರ್-ವಿಕೆಟ್ ಕೀಪರ್ ಶಯಾನ್ ಜಹಾಂಗೀರ್ ಮತ್ತು ಉಸ್ಮಾನ್ ರಫೀಕ್ ಬದಲಿಗೆ ವೇಗದ ಬೌಲರ್ ಅಲಿ ಖಾನ್ ಅವರನ್ನು ಸೇರ್ಪಡೆಗೊಂಡಿರುವುದು ತಂಡದಲ್ಲಿನ ಎರಡು ಬದಲಾವಣೆಗಳಾಗಿವೆ," ಎಂದು ಯುಎಸ್‌ಎ ಕ್ರಿಕೆಟ್ ಹೇಳಿಕೆ ನೀಡಿದೆ.

2024ರ ಟಿ20 ವಿಶ್ವಕಪ್‌ಗೆ ಯುಎಸ್ಎ ತಂಡ

ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪನಾಯಕ), ಸ್ಟೀವನ್ ಟೇಲರ್, ಕೋರಿ ಆಂಡರ್ಸನ್, ಸೌರಭ್ ನೇತ್ರಾವಲ್ಕರ್, ಜೆಸ್ಸಿ ಸಿಂಗ್, ಹರ್ಮೀತ್ ಸಿಂಗ್, ನೋಷ್ಟುಶ್ ಕೆಂಜಿಗೆ, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ನಿತೀಶ್ ಕುಮಾರ್, ಆಂಡ್ರೀಸ್ ಗೌಸ್, ಶಯಾನ್ ಜಹಾಂಗೀರ್, ಅಲಿ ಖಾನ್, ನಿಸರ್ಗ್ ಪಟೇಲ್, ಮಿಲಿಂದ್ ಕುಮಾರ್.

ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾನೊಯ್ ಡ್ರೈಸ್‌ಡೇಲ್, ಯಾಸಿರ್ ಮೊಹಮ್ಮದ್.

Story first published: Saturday, May 4, 2024, 12:20 [IST]
Other articles published on May 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+