For Quick Alerts
ALLOW NOTIFICATIONS  
For Daily Alerts
 

USA vs BAN: ಟಿ20 ವಿಶ್ವಕಪ್‌ಗೆ ಮುನ್ನ ಬಾಂಗ್ಲಾದೇಶ ವಿರುದ್ಧ ಐತಿಹಾಸಿಕ ಸರಣಿ ಗೆದ್ದ ಯುಎಸ್ಎ

ಹೂಸ್ಟನ್‌ನ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಎರಡನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ರನ್‌ಗಳ ಗೆಲುವಿನೊಂದಿಗೆ ತಮ್ಮ ಚೊಚ್ಚಲ ಟಿ20 ಸರಣಿಯ ವಿಜಯವನ್ನು ದಾಖಲಿಸಿದಾಗ, ಕ್ರಿಕೆಟ್ ಶಿಶು ಯುಎಸ್ಎ ತಂಡವು ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿತು.

ಎರಡನೇ ಪಂದ್ಯದಲ್ಲಿ 145 ರನ್‌ಗಳ ಗುರಿಯನ್ನು ಕಳೆದುಕೊಂಡ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾದೇಶ ವಿರುದ್ಧ ಯುಎಸ್ಎ ಟಿ20 ಸರಣಿ ಗೆಲುವು ಸಾಧಿಸುತ್ತಿದ್ದಂತೆಯೇ, ಆತಿಥೇಯ ಅಭಿಮಾನಿಗಳು ಮತ್ತು ಯುವ ಪೀಳಿಗೆಗೆ ಸುವರ್ಣ ಕ್ಷಣ ಒದಗಿಸಿದರು.

USA vs BAN USA Wins Historic Series Against Bangladesh Ahead of T20 World Cup 2024

ಯುವ ಯುಎಸ್ಎ ತಂಡದ ಆಟಗಾರರು ಪ್ರತಿಯೊಂದು ವಿಕೆಟ್‌ನ ಪತನದಲ್ಲಿ ಸಂತೋಷದಲ್ಲಿ ತೊಡಗುವುದರೊಂದಿಗೆ ಮೈದಾನದ ತುಂಬೆಲ್ಲಾ ಸಂಭ್ರಮಾಚರಣೆ ಮಾಡಿದರು.

3 ಪಂದ್ಯಗಳ ಟಿ20 ಸರಣಿಯಲ್ಲಿ ಯುಎಸ್ಎ ಸತತ ಎರಡನೇ ಪಂದ್ಯದಲ್ಲಿ ಪೂರ್ಣ ಸಾಮರ್ಥ್ಯದ ಬಾಂಗ್ಲಾದೇಶ ತಂಡಕ್ಕೆ ಆಘಾತ ನೀಡಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿತು. ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಯುಎಸ್‌ಎ ಕಡೆಯಿಂದ ದೊಡ್ಡ ಎಚ್ಚರಿಕೆಯ ಸಂದೇಶ ಪಡೆಯಿತು.

ಕೆಕೆಆರ್ ಮಾಜಿ ವೇಗದ ಬೌಲರ್ ಅಲಿ ಖಾನ್ ಅವರು ಶಕೀಬ್ ಅಲ್ ಹಸನ್ ಸೇರಿದಂತೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯದ ಸ್ಟಾರ್ ಆದರು ಮತ್ತು ಯುಎಸ್ಎ ಐತಿಹಾಸಿಕ ಸರಣಿ ಗೆಲುವನ್ನು ಸಾಧಿಸಲು ಸಹಾಯ ಮಾಡಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಟೆಸ್ಟ್ ಆಡುವ ರಾಷ್ಟ್ರದ ವಿರುದ್ಧ ಅವರ ಮೊದಲನೆಯ ಸರಣಿ ಗೆಲುವಾಗಿದೆ.

ಜೂನ್ 1ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ಯುಎಸ್ಎ ತಂಡಕ್ಕೆ ಈ ಗೆಲುವು ಒಂದು ದೊಡ್ಡ ಸ್ಫೂರ್ತಿಯಾಗಿದೆ.

ಮಂಗಳವಾರ, ಮೇ 21ರಂದು ನಡೆದ ಮೊದಲ ಟಿ20 ಪಂದ್ಯದಲ್ಲಿ ಸುಲಭವಾಗಿ 154 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನಂತರ, ಯುಎಸ್ಎ ತಂಡವು ಎರಡನೇ ಟಿ20 ಪಂದ್ಯವನ್ನು ಬಹಳ ಆತ್ಮವಿಶ್ವಾಸದಿಂದ ಆಡಿ ಮಣಿಸಿತು.

ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡದ ಹೊಸ ಬಾಲ್ ಬೌಲರ್‌ಗಳು ಯುಎಸ್ಎ ಆರಂಭಿಕ ಬ್ಯಾಟರ್‌ಗಳನ್ನು ಹೊರಹಾಕಲು ಹೆಣಗಾಡಿದರು. ಯುಎಸ್ಎ ನಾಯಕ ಮೊನಾಂಕ್ ಪಟೇಲ್ ಮತ್ತು ಸ್ಟೀವನ್ ಟೇಲರ್ ಜೋಡಿ 39 ಎಸೆತಗಳಲ್ಲಿ 44 ರನ್ ಜೊತೆಯಾಟದೊಂದಿಗೆ ಸ್ಕೋರ್‌ಬೋರ್ಡ್ ಹೆಚ್ಚಿಸಲು ನೆರವಾದರು.

ಮೊನಾಂಕ್ ಪಟೇಲ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 42 ರನ್ ಗಳಿಸಿದರೆ, ಸ್ಟೀವನ್ ಟೇಲರ್ 28 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 31 ರನ್ ಗಳಿಸಿದರು.

ನಾಯಕ ಮೊನಾಂಕ್ ಪಟೇಲ್ ಜೊತೆ ಮೂರನೇ ವಿಕೆಟ್‌ಗೆ 60 ರನ್‌ಗಳ ಜೊತೆಯಾಟದಲ್ಲಿ ಆರನ್ ಜೋನ್ಸ್ ನಿರ್ಣಾಯಕ 35 ರನ್ ಗಳಿಸಿದರು. ಮೊದಲ ಟಿ20 ಗೆಲುವಿನ ರೂವಾರಿಗಳಾದ ಕೋರಿ ಆಂಡರ್ಸನ್ ಮತ್ತು ಹರ್ಮೀತ್ ಸಿಂಗ್ ಗುರುವಾರ ವಿಫಲರಾದರು.

ಆದರೆ ಯುಎಸ್ಎ ತಂಡ ಕೊನೆಯ ನಾಲ್ಕು ಓವರ್‌ಗಳಲ್ಲಿ 40 ರನ್‌ಗಳನ್ನು ಗಳಿಸಿದರು. ನಿತಿನ್ ಕುಮಾರ್ ಮತ್ತು ವ್ಯಾನ್ ಸ್ಚಾಲ್ಕ್‌ವಿಕ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು.

Story first published: Friday, May 24, 2024, 11:11 [IST]
Other articles published on May 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+