Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

USA vs IND: ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಈ ಕಳಪೆ ದಾಖಲೆ ಬರೆದ ವಿರಾಟ್ ಕೊಹ್ಲಿ

ಬುಧವಾರ, ಜೂನ್ 12ರಂದು ನ್ಯೂಯಾರ್ಕ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಅರ್ಶ್‌ದೀಪ್ ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಮೋಘ ಪ್ರದರ್ಶನದಿಂದ ಭಾರತ ತಂಡ ಗೆಲುವು ಗೆಲುವು ಸಾಧಿಸಿತು.

ಪ್ರಸಕ್ತ ಟಿ20 ವಿಶ್ವಕಪ್‌ನ ಈ ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಸೂಪರ್‌-8ರ ಹಂತಕ್ಕೆ ಸ್ಥಾನ ಪಡೆದರು. ಅರ್ಶ್‌ದೀಪ್ ಸಿಂಗ್ ತಮ್ಮ ವೃತ್ತಿಜೀವನದ-ಅತ್ಯುತ್ತಮ 9 ರನ್‌ಗೆ 4 ವಿಕೆಟ್ ಪಡೆಯುವ ಮೂಲಕ ಯುಎಸ್ಎ ತಂಡವನ್ನು 8 ವಿಕೆಟ್‌ಗೆ 110 ರನ್‌ಗಳಿಗೆ ನಿರ್ಬಂಧಿಸಿದರು.

USA vs IND Virat Kohli Registered This Poor Record for the First Time in T20 World Cup

ನಂತರ, ಸೂರ್ಯಕುಮಾರ್ ಕುಮಾರ್ 49 ಎಸೆತಗಳಲ್ಲಿ ಅಜೇಯ 50 ರನ್ ಗಳಿಸುವ ವಿಶ್ವದ ನಂ.1 ಟಿ20 ಶ್ರೇಯಾಂಕದ ಬ್ಯಾಟರ್‌ನ ಸ್ಥಾನಮಾನವನ್ನು ಮರುಸ್ಥಾಪಿಸಿದರು. ಇದಕ್ಕೂ ಮೊದಲು ಟೀಮ್ ಇಂಡಿಯಾ ಸವಾಲಿನ ಪಿಚ್‌ನಲ್ಲಿ ಸುಲಭವಾದ ಚೇಸ್ ಅನ್ನು ಹೋರಾಡಿ ಗೆಲ್ಲುವಂತೆ ಮಾಡಿತು.

ಸೂರ್ಯಕುಮಾರ್ ಯಾದವ್ ಮತ್ತು ಶಿವಂ ದುಬೆ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 67 ರನ್ ನಿರ್ಮಿಸಿತು. ಶಿವಂ ದುಬೆ 35 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿದರು.

USA vs IND Virat Kohli Registered This Poor Record for the First Time in T20 World Cup

ಮೊದಲ ಗೋಲ್ಡನ್ ಡಕ್‌ಗೆ ಔಟಾದ ವಿರಾಟ್ ಕೊಹ್ಲಿ

2024ರ ಟಿ20 ವಿಶ್ವಕಪ್‌ನ ಆಘಾತಕಾರಿ ಘಟನೆಗಳಲ್ಲಿ, ಭಾರತದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಮೊದಲ ಗೋಲ್ಡನ್ ಡಕ್‌ಗೆ ಔಟಾದರು.

ಇದೀಗ ಯುಎಸ್ಎ ತಂಡವನ್ನು ಪ್ರತಿನಿಧಿಸುತ್ತಿರುವ ಭಾರತೀಯ ಮೂಲದ ಕ್ರಿಕೆಟಿಗ ಸೌರಭ್ ನೇತ್ರವಾಳ್ಕರ್ ಅವರ ಬೌಲಿಂಗ್‌ನಲ್ಲಿ ವಿಕೆಟ್ ನೀಡಿದ್ದು ಕ್ರಿಕೆಟ್ ಜಗತ್ತಿನಲ್ಲಿ ಅಲೆಗಳನ್ನು ಉಂಟುಮಾಡಿತು.

ವಿರಾಟ್ ಕೊಹ್ಲಿಗೆ ಈ ಗೋಲ್ಡನ್-ಡಕ್ ಔಟ್ ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಮೊದಲನೆಯದು ಮತ್ತು ಒಟ್ಟಾರೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎರಡನೆಯ ಡಕ್ ಔಟ್ ನಿದರ್ಶನಕ್ಕೆ ಕಾರಣವಾಯಿತು. ಅಲ್ಲದೆ, ಕಳೆದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆರಂಭಿಕನಾಗಿ ವೈಫಲ್ಯ ಅನುಭವಿಸಿದ್ದಾರೆ.

ರೋಹಿತ್ ಶರ್ಮಾ ಶಾಕಿಂಗ್ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ ಔಟಾದ ನಂತರ, ಇನ್ನೊಂದು ಕ್ರೀಸ್‌ನಲ್ಲಿ ನಿಂತಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆಯು ವಿಶ್ವಾದ್ಯಂತ ಅಭಿಮಾನಿಗಳು ಅನುಭವಿಸಿದ ಆಘಾತವನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಕಳಪೆಯಾಗಿ ಔಟಾಗಿರುವುದನ್ನು ನೋಡಿದಾಗ ರೋಹಿತ್ ಶರ್ಮಾ ಅವರ ನಿರಾಶೆಯು ಸ್ಪಷ್ಟವಾಗಿತ್ತು.

ದುರದೃಷ್ಟವಶಾತ್, ರೋಹಿತ್ ಶರ್ಮಾ ಸ್ವತಃ ಭಾರತ ತಂಡವನ್ನು ಆರಂಭಿಕ ತೊಂದರೆಯಿಂದ ಹೊರತರಲು ಸಾಧ್ಯವಾಗಲಿಲ್ಲ. ಅದೇ ಸೌರಭ್ ನೇತ್ರವಾಳ್ಕರ್‌ಗೆ ಕೇವಲ 3 ರನ್‌ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.

ಇನ್ನು ಈ ಪಂದ್ಯದಲ್ಲಿ ಯುಎಸ್ಎ ತಂಡ ಮೂರು ಸಂದರ್ಭಗಳಲ್ಲಿ ಓವರ್‌ಗಳ ನಡುವೆ ಕೇವಲ 60 ಸೆಕೆಂಡ್‌ಗಳನ್ನು ತೆಗೆದುಕೊಳ್ಳುವ ನಿಯಮವನ್ನು ಉಲ್ಲಂಘಿಸಿತು. ಅತ್ಯಂತ ನೆಕ್-ಟು-ನೆಕ್ ಫೈಟ್‌ನಲ್ಲಿ 5 ಪೆನಾಲ್ಟಿ ರನ್‌ಗಳನ್ನು ಬಿಟ್ಟುಕೊಟ್ಟ ಯುಎಸ್ಎ ತಂಡದ ಬೌಲರ್‌ಗಳಿಗೆ ಐಸಿಸಿ ನಿಯಮಗಳ ಬಗ್ಗೆ ಸ್ವಲ್ಪ ಅಜ್ಞಾನವು ಮಹತ್ವದ ತಿರುವು ನೀಡಿತು.

Story first published: Thursday, June 13, 2024, 14:21 [IST]
Other articles published on Jun 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+