ಬೋಲ್ಟ್ ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್‌ಗೆ ಕೊರೊನಾ ಆತಂಕ

ವೇಗದ ಓಟಗಾರ ಉಸೇನ್ ಬೋಲ್ಟ್‌ಗೆ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡ ಬಳಿಕ ಕೊರೊನಾ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಇದೀಗ ಆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಕೆಟ್‌ನ ದಿಗ್ಗಜ ಕ್ರಿಸ್‌ಗೇಲ್ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಸೆಲೆಬ್ರಿಟಿಗಳಿಕೆ ಆತಂಕವನ್ನುಂಟು ಮಾಡಿದೆ.
ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಂದರ್ಭದಲ್ಲಿ ಕ್ರಿಸ್ ಗೇಲ್ ಅವರಾಗಿಯೇ ಸಂಕಟವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಸುರಕ್ಷತಾ ದೃಷ್ಠಿಯಿಂದ ಬೋಲ್ಟ್ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸುವ ಸಾಧ್ಯತೆಗಳಿವೆ. ಹೀಗಾಗಿ ಕ್ರಿಸ್ ಗೇಲ್ ಐಪಿಎಲ್‌ಗಾಗಿ ಯುಎಇಗೆ ವಿಳಂಬವಾಗಿ ಪ್ರಯಾಣಿಸಬಹುದು ಎನ್ನಲಾಗುತ್ತಿದೆ.
ಕಳೆದ ಶುಕ್ರ್ವಾರ ಉಸೇನ್ ಬೋಲ್ಟ್ ತಮ್ಮ ಹುಟ್ಟುಹಬ್ಬದ ಪಾರ್ಟಿನ್ನು ಅದ್ಧೂರಿಯಾಗಿ ಏರ್ಪಡಿಸಿದ್ದರು. ಈ ಬಗ್ಗೆ ಉಸೇನ್ ಬೋಲ್ಟ್ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನೂ ಹಂಚಿಕೊಂಡಿದ್ದರು. ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಗೆ ಫುಟ್ಬಾಲ್ ಆಟಗಾರರಾದ ರಹೀಮ್ ಸ್ಟೆರ್ಲಿಂಗ್ ಮತ್ತು ಲಿಯೋನ್ ಬೈಲಿ ಕೂಡ ಪಾಲ್ಗೊಂಡಿದ್ದರು.
ಅಚ್ಚರಿಯೆಂದರೆ ಕೊರೊನಾ ವೈರಸ್ ಮಧ್ಯೆಯೇ ಏರ್ಪಡಿಸಲಾಗಿದ್ದ ಈ ಬರ್ತ್‌ಡೇ ಪಾರ್ಟಿಯಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಯಾವುದೇ ಮುಂಜಾಗ್ರತಾ ಕ್ರಮವನ್ನೂ ಕೈಗೊಂಡಿಲ್ಲ. ಕನಿಷ್ಠ ಮಾಸ್ಕ್ ಕೂಡ ಹಾಕಿಕೊಳ್ಳದೆ ಈ ಪಾರ್ಟಿಯಲ್ಲಿ ಅತಿಥಿಗಳು ಪಾಲ್ಗೊಂಡಿದ್ದರು. ಇದು ಈಗ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಹಾಗೆ ನೋಡಿದರೆ ಜಮೈಕಾದಲ್ಲಿ ಕೊರೊನಾ ವೈರಸ್ ಸಾಕಷ್ಟು ನಿಯಂತ್ರಣದಲ್ಲಿದೆ. ಆದರೆ ಕಳೆದ ಹದಿನಾಲ್ಕು ದಿನಗಳಲ್ಲಿ 410 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವುದು ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿ ಆತಂಕವನ್ನು ಮೂಡಿಸಿದೆ. ಈ ಮಧ್ಯೆ ಉಸೇನ್ ಬೋಲ್ಟ್ ಬರ್ತ್‌ಡೇ ಪಾರ್ಟಿ ಅಲ್ಲಿನ ಸರ್ಕಾರಕ್ಕೆ ಮತ್ತಷ್ಟು ತಲೆನೋವು ತಂದಿರುವುದು ಸುಳ್ಳಲ್ಲ. ಈವರೆಗೆ 1413 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಜಮೈಕಾದಲ್ಲಿ ಈ ಡೆಡ್ಲಿ ವೈರಸ್‌ಗೆ 14 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications