Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಜಲು ಬಳಕೆ ನಿಷೇಧ: ಮಾಜಿ ವೇಗಿ ಅಗರ್ಕರ್ ಕೊಟ್ಟರು ಮಹತ್ವದ ಸಲಹೆ

Use Of Saliva Can Be Allowed If Players Test Negative Before The Match: Ajit Agarkar

ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರಿಕೆಟ್‌ನಲ್ಲಿ ಕೆಲ ಅನಿವಾರ್ಯ ಬದಲಾವಣೆಗಳು ನಡೆದಿದೆ. ಆದರಲ್ಲಿ ಒಂದು ಬೌಲರ್‌ಗಳು ಚೆಂಡನ್ನು ಹೊಳಪುಗೊಳಿಸಲು ಬಳಸುವ ಎಂಜಲಿಗೆ ನಿಷೇಧ ಹೇರಿದ್ದು. ಹೀಗಾಗಿ ವೇಗದ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಪರ್ಯಾಯಕ್ಕೆ ಬೇಡಿಕೆಯನ್ನು ಇಡುತ್ತಿದ್ದಾರೆ. ಆದರೆ ಎಂಜಲು ನಿಷೇಧ ವಿಚಾರವಾಗಿ ಟೀಮ್ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್ಕರ್ ಪ್ರಮುಖ ವಿಚಾರವನ್ನು ಮುಂದಿಟ್ಟಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತೆಗೆದುಕೊಂಡಿರುವ ಎಂಜಲು ಬಳಕೆಯ ನಿಷೇಧ ಅನಿವಾರ್ಯವಾಗಿದೆ. ಹಾಗೂ ಸರಿಯಾದ ಕ್ರಮವನ್ನೇ ಐಸಿಸಿ ತೆಗೆದುಕೊಂಡಿದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ. ಅದರೆ ಷರತ್ತಿನೊಂದಿಗೆ ಬೌಲರ್‌ಗಳಿಗೆ ಎಂಜಲು ಬಳಕೆಗೆ ಅವಕಾಶ ಮಾಡಿಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನನ್ನ ವಾದವೆಂದರೆ ಆಟ ಪ್ರಾರಂಭವಾಗುವ ಮೊದಲು ಆಡುವ ಆಟಗಾರರನ್ನು ಅಂತಿಮವಾಗಿ ಪರೀಕ್ಷಿಸಲಾಗುತ್ತದೆ. ಋಣಾತ್ಮಕವೆಂದು ಕಂಡುಬಂದಲ್ಲಿ ಚೆಂಡಿನ ಮೇಲೆ ಲಾಲಾರಸವನ್ನು ಹಾಕುವುದು ಸುರಕ್ಷಿತ ಎಂದು ಪರಿಗಣಿಸಬಹುದು ಎಂದು ಅಗರ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಸಿಸಿ ಮಾಡಿರುವ ಹೊಸ ಬದಲಾವಣೆಗಳು ಮುಂಬರುವ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯಿಂದಲೇ ಜಾರಿಗೆ ಬರಲಿದೆ. 'ಸಹಜವಾಗಿ ಐಸಿಸಿ ತೆಗೆದುಕೊಂಡಿರುವ ನಿರ್ಧಾರ ಸಮಯೋಚಿತವಾಗಿದೆ. ಆದರೆ ನಾವು ಖಂಡಿತಾ ಮುಂದಿನ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಮೇಲೆ ಗಮನವಿಡಬೇಕಾಗುತ್ತದೆ. ಬೌಲರ್‌ಗಳಿಗೆ ಇದು ಅನುಕೂಲಕರವಲ್ಲ. ಆದರೆ ನಾವಯ ಕಾದು ನೋಡಬೇಕಿದ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಈಗಾಗಲೇ ಕ್ರಿಕೆಟ್‌ ಬ್ಯಾಟ್ಸ್‌ಮನ್‌ಗಳ ಪರವಾಗಿದೆ. ಅದರಲ್ಲೂ ಎಂಜಲು ನಿಷೇಧದಂತಾ ಕ್ರಮ ವೇಗದ ಬೌಲರ್‌ಗಳ ಪ್ರಮುಖ ಅಂಗವನ್ನು ಕಸಿದುಕೊಂಡಂತಾಗುತ್ತದೆ. ಯಾವುದೇ ಬೌಲರ್‌ಗಳಲ್ಲಿ ಈ ವಿಚಾರವಾಗಿ ಮಾತನಾಡಿ, ಅವರು ಸಾಕಷ್ಟು ಭೀತಿಗೊಂಡಿದ್ದಾರೆ ಎಂದು ಎಂಜಲು ನಿಷೇಧದ ಬಗ್ಗೆ ತಮ್ಮ ಅಭಿಪ್ರಾಯವನ್ನು ಅಜಿತ್ ಅಗರ್ಕರ್ ವ್ಯಕ್ತಪಡಿಸಿದ್ದಾರೆ.

Story first published: Monday, June 15, 2020, 22:22 [IST]
Other articles published on Jun 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+