ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ದ್ವಿಶತಕ ಗಳಿಸಿದ ಸಾಧನೆ ಮಾಡಿದ್ದಾರೆ. ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ಉಸ್ಮಾನ್ ಖವಾಜಾ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ದ್ವಿಶತಕ ದಾಖಲಿಸಿದ್ದಾರೆ. ಉಸ್ಮಾನ್ ಖವಾಜಾ 352 ಎಸೆತಗಳಲ್ಲಿ 232 ರನ್ ಕಲೆ ಹಾಕಿದ್ದಾರೆ. ಉಸ್ಮಾನ್ ಖವಾಜಾ ಅವರ ಇನ್ನಿಂಗ್ಸ್‌ನಲ್ಲಿ 1 ಸಿಕ್ಸರ್ ಮತ್ತು 16 ಬೌಂಡರಿಗಳನ್ನು ಬಾರಿಸಿದ್ದಾರೆ. ಈ ದೊಡ್ಡ ಸಾಧನೆಯೊಂದಿಗೆ ಉಸ್ಮಾನ್ ಖವಾಜಾ ಅರು ದಿಗ್ಗಜ ಬ್ಯಾಟರ್ ಡಾನ್ ಬ್ರಾಡ್ಮನ್ ಕ್ಲಬ್‌ಗೆ ಸೇರ್ಪಡೆಗೊಂಡಿದ್ದಾರೆ.
ಉಸ್ಮಾನ್ ಖವಾಜ 38ನೇ ವಯಸ್ಸಿನಲ್ಲಿ ದ್ವಿಶತಕ ಗಳಿಸಿದ ಡಾನ್ ಬ್ರಾಡ್ಮನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಉಸ್ಮಾನ್ ಖವಾಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ 38 ವರ್ಷಕ್ಕಿಂತ ಮೇಲ್ಪಟ್ಟ ಎರಡನೇ ಆಸ್ಟ್ರೇಲಿಯಾದ ಆಟಗಾರ ಎನಿಸಿಕೊಂಡಿದ್ದಾರೆ. ಉಸ್ಮಾನ್ ಖವಾಜಾ ಶ್ರೀಲಂಕಾದಲ್ಲಿ ದ್ವಿಶತಕ ಗಳಿಸಿದ ಏಕೈಕ ಆಸ್ಟ್ರೇಲಿಯಾದ ಆಟಗಾರ.

ಕೊಲಂಬೊದಲ್ಲಿ 2004ರಲ್ಲಿ ಜಸ್ಟಿನ್ ಲ್ಯಾಂಗರ್ ಮಾಡಿದ 166 ರನ್‌ಗಳ ದಾಖಲೆಯನ್ನು ಉಸ್ಮಾನ್ ಖವಾಜಾ ಹಿಂದಿಕ್ಕಿದ್ದಾರೆ. ಇದು ಶ್ರೀಲಂಕಾದಲ್ಲಿ ಆಸ್ಟ್ರೇಲಿಯಾ ಬ್ಯಾಟರ್‌ವೊಬ್ಬರ ಗರಿಷ್ಠ ಸ್ಕೋರ್ ಆಗಿತ್ತು. ಇದರ ಹೊರತಾಗಿ, 2006 ರಲ್ಲಿ ಬಾಂಗ್ಲಾದೇಶದ ವಿರುದ್ಧ ಜೇಸನ್ ಗಿಲ್ಲೆಸ್ಪಿ 201 ರನ್‌ಗಳಿದ್ದರು. ಇದಾದ ನಂತರ ಉಸ್ಮಾನ್ ಖವಾಜಾ ಏಷ್ಯಾದಲ್ಲಿ ದ್ವಿಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಏಷ್ಯಾ ಖಂಡದಲ್ಲಿ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಿದ ಆಸ್ಟ್ರೇಲಿಯಾ ಆಟಗಾರರೆಂದರೆ ಮ್ಯಾಥ್ಯೂ ಹೇಡನ್ ಭಾರತದ ವಿರುದ್ಧ ಚೆನ್ನೈನಲ್ಲಿ ಅಜೇಯ 201 ರನ್, ಡೀನ್ ಜೋನ್ಸ್ 1986 ರಲ್ಲಿ ಮದ್ರಾಸ್‌ನಲ್ಲಿ ಟೈಡ್ ಟೆಸ್ಟ್‌ನಲ್ಲಿ ಭಾರತದ ವಿರುದ್ಧ 210 ರನ್, ಗ್ರೆಗ್ ಚಾಪೆಲ್ 1980 ರಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 201, ಮಾರ್ಕ್ ಟೇಲರ್ ಪಾಕಿಸ್ತಾನದ ವಿರುದ್ಧ 1998 ರಲ್ಲಿ ಪೇಶಾವರದಲ್ಲಿ ಅಜೇಯ 334 ರನ್ ಗಳಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕೂಡ ಇತಿಹಾಸ ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ 1 ರನ್ ಗಳಿಸುವ ಮೂಲಕ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 10000 ರನ್ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ10000 ರನ್ ಪೂರೈಸಿದ ಆಸ್ಟ್ರೇಲಿಯಾದ 3ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.