For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಪ್ಲೇಯರ್‌ಗೆ ಹೆದರಿದೆ ಆಸೀಸ್‌: ಆ ಬೌಲರ್‌ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ನಿಸ್ಸೀಮರು

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಸರಣಿ ಈ ವರ್ಷದ ಬಹು ನಿರೀಕ್ಷಿತ ಸರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಈ ವರ್ಷ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ, ಈ ವೇಳೆ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಈ ಟೆಸ್ಟ್‌ ಸರಣಿ, ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಡಿಯಲ್ಲಿ ಆಡಲಾಗುತ್ತಿದ್ದು ರೋಚಕತೆ ಹೆಚ್ಚಿಸಿದೆ. ಈ ಸರಣಿಯನ್ನು ಗೆಲ್ಲುವ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಕಾಲಿಫೈ ಆಗಬಹುದು. ಹೀಗಾಗಿ ಕ್ರಿಕೆಟ್‌ ಪ್ರೇಮಗಳ ಚಿತ್ತ ಈ ಸರಣಿಯ ಮೇಲೆ ನೆಟ್ಟಿದೆ.

ಈ ಬಿಗ್‌ ಟೂರ್ನಿಗೂ ಇನ್ನು ಹಲವು ದಿನಗಳು ಬಾಕಿ ಇವೆ. ಈ ನಿಟ್ಟಿನಲ್ಲಿ ಈಗಾಗಲೇ ಎರಡೂ ತಂಡಗಳ ಮಾಜಿ ಆಟಗಾರರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗ ಈ ಸಾಲಿಗೆ ಆಸ್ಟ್ರೇಲಿಯಾದ ಹಾಲಿ ಓಪನರ್‌ ಸೇರಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜಾ ಅವರ ಹೆಸರೂ ಸೇರ್ಪಡೆ ಗೊಂಡಿದೆ. ಅನುಭವಿ ಓಪನರ್‌ ಖವಾಜಾ ಟೀಮ್ ಇಂಡಿಯಾದ ಸ್ಪಿನ್ ಬೌಲರ್‌ನನ್ನು ಹಾಡಿ ಹೊಗಳಿದ್ದಾರೆ.

Usman Khawaja Praises Ravichandran Ashwin s Tactical Brilliance Ahead of Border-Gavaskar Series

ಅಶ್ವಿನ್‌ ಬಗ್ಗೆ ಖವಾಜಾ ಹೇಳಿದ್ದೇನು?

ಸ್ಟಾರ್ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಉಸ್ಮಾನ್ ಖವಾಜಾ ಅವರು ರವಿಚಂದ್ರನ್ ಅಶ್ವಿನ್‌ ಅವರನ್ನು ಹಾಡಿ ಹೊಗಳಿದ್ದಾರೆ. ಅಶ್ವಿನ್‌ ಬ್ಯಾಟರ್‌ಗಳನ್ನು ಕಾಡಬಲ್ಲ ಬೌಲರ್‌. ಇವರು ಬ್ಯಾಟ್ಸ್‌ಮನ್‌ಗೆ ಖೆಡ್ಡಾ ತೋಡಲು ಒಂದೆರೆಡು ಯೋಜನೆಯನ್ನು ಹೊಂದಿಲ್ಲ.

ಇವರ ಬತ್ತಳಿಕೆಯಲ್ಲಿ ಅಪಾರ ಯೋಜನೆಗಳಿವೆ. ಅವರು ಬ್ಯಾಟರ್‌ಗಳ ನಡೆಯನ್ನು ಅರ್ಥಮಾಡಿಕೊಂಡು, ಅವರಿಗಿಂತ ಮುಂದೇ ಸಾಗಲು ಅಶ್ವಿನ್ ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಅಶ್ವಿನ್‌ ಅವರ ಅನುಭವವನ್ನು ಗೌರವಿಸುತ್ತೇನೆ. ನಾನು ಸವಾಲುಗಳನ್ನು ಇಷ್ಟ ಪಡುವ ಆಟಗಾರ. ಹೀಗಾಗಿ ನನಗೆ ಅಶ್ವಿನ್‌ ಅವರ ಎಸೆತಗಳನ್ನು ಎದುರಿಸುವುದು ತುಂಬ ಇಷ್ಟ ಎಂದಿದ್ದಾರೆ.

Usman Khawaja Praises Ravichandran Ashwin s Tactical Brilliance Ahead of Border-Gavaskar Series

ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ, ಇದರಲ್ಲಿ ಅವರು ಆಸ್ಟ್ರೇಲಿಯಾದಲ್ಲಿ ಇದುವರೆಗೆ ಆಡಿರುವ 10 ಟೆಸ್ಟ್ ಪಂದ್ಯಗಳಲ್ಲಿ 39 ವಿಕೆಟ್‌ಗಳನ್ನು ಪಡೆದಿದ್ದಾರೆ, ಆದರೆ ಅವರು ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 114 ವಿಕೆಟ್‌ಗಳನ್ನು ಹೊಂದಿದ್ದಾರೆ.

ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಭಾರತ

ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಬಾರಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಈಗಾಗಲೇ ಹಿಂದಿನ ಎರಡು ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆದಿರುವ ಭಾರತ, ಹ್ಯಾಟ್ರಿಕ್‌ ಸರಣಿ ಗೆಲುವಿನ ಕನಸು ಕಾಣುತ್ತಿದೆ. ಈ ಬಗ್ಗೆ ಆಸೀಸ್‌ ಸ್ಟಾರ್ ಆಟಗಾರ ಟ್ರಾವಿಸ್‌ ಹೆಡ್‌ ಸಹ ಹೇಳಿಕೆಯನ್ನು ನೀಡಿದ್ದಾರೆ. ಕಳೆದ ಎರಡು ಬಾರಿಯಂತೆ ಈ ಬಾರಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ಸುಲಭವಲ್ಲ ಎಂದು ಟ್ರಾವಿಸ್ ಹೆಡ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಭಾರತದ ವಿರುದ್ಧ ಹಲವು ಸರಣಿಗಳನ್ನು ಆಡಿದ್ದು ಈ ವೇಳೆ ನಮ್ಮ ತಂಡದ ಕೈ ಮೇಲಾಗಿದೆ ಎಂದಿದ್ದಾರೆ.

Story first published: Monday, September 16, 2024, 7:30 [IST]
Other articles published on Sep 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+