For Quick Alerts
ALLOW NOTIFICATIONS  
For Daily Alerts
 

ಮಾಜಿ ರಣಜಿ ಆಟಗಾರರ ನೆರವಿಗೆ ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ನಿರ್ಧಾರ

Uttar Pradesh Cricket Association to give financial aid to former Ranji Trophy players

ನವದೆಹಲಿ: ಭಾರತದಲ್ಲಿ ಕೋವಿಡ್-19 ದ್ವಿತೀಯ ಅಲೆ ಜನರ ಸಾವು ನೋವಿಗಳಿಗೆ ಕಾರಣವಾಗುತ್ತಿದೆ. ಪಿಡುಗಿನಿಂದಾಗಿ ಸಂಕಷ್ಟಕ್ಕೀಡಾಗಿರುವ ರಣಜಿ ಕ್ರಿಕೆಟ್ ಮಾಜಿ ಆಟಗಾರರ ನೆರವಿಗೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ (ಯುಪಿಸಿಎ) ನಿರ್ಧಾರ ಮಾಡಿದೆ.

ಟ್ವೀಟ್‌ ಮಾಡಿರುವ ಉತ್ತರಪ್ರದೇಶ ಕ್ರಿಕೆಟ್ ಅಸೋಸಿಯೇಶನ್, 'ಕೋವಿಡ್-19 ಪಿಡುಗಿನ ಸಮಯದಲ್ಲಿ ರಣಜಿ ಟ್ರೋಫಿ ಮಾಜಿ ಆಟಗಾರರಿಗೆ ಯುಪಿಸಿಎ ಆರ್ಥಿಕ ಸಹಾಯ ಘೋಷಿಸಿದೆ ಎಂದು ಪ್ರಮುಖ ಮಾಹಿತಿ ತಿಳಿಸುತ್ತಿದ್ದೇವೆ' ಎಂದು ಬರೆದುಕೊಂಡಿದೆ.

ಮಾಜಿ ರಣಜಿ ಆಟಗಾರರಿಗೆ ಒಂದು ಬಾರಿ ಆರ್ಥಿಕ ಸಹಾಯ ಮಾಡಲು ತೀರ್ಮಾನಿಸಿರುವ ಯುಪಿಸಿಎ ಈ ಪಿಡುಗಿನ ವೇಳೆ 50 ವರ್ಷ ಮೇಲ್ಪಟ್ಟ ಮಾಜಿ ಆಟಗಾರರಿಗೆ ಹಣ ಸಹಾಯ ಮಾಡಲಿದೆ. ಈ ಬಗ್ಗೆ ಯುಪಿಸಿಎ ವಿವರಣೆಯಾಗಿ ಬರೆದಿರುವ ಟ್ವಿಟರ್ ಪೋಸ್ಟ್‌ಗಳನ್ನು ಹಾಕಿಕೊಂಡಿದೆ.

ಮಾಜಿ ಕ್ರಿಕೆಟಿಗರು ಆಡಿರುವ ಪಂದ್ಯಗಳಿಗನುಸಾರ ಆರ್ಥಿಕ ನೆರವು ನೀಡುವುದಾಗಿ ಯುಪಿಸಿಎ ಹೇಳಿದೆ. 1-5 ಪಂದ್ಯಗಳಿಗೆ 50,000 ರೂ., 6-15 ಪಂದ್ಯಗಳು 75,000 ರೂ., 16-24 ಪಂದ್ಯಗಳು 100000 ರೂ. ನೀಡುವುದಾಗಿ ಹೇಳಿದೆ. ಕ್ರಿಕೆಟ್ ಅಸೋಸಿಯೇಶನ್ ಈ ಹಿಂದೆಯೂ ಬಹಳ ಕ್ರಿಕೆಟರ್‌ಗಳಿಗೆ ನೆರವಿತ್ತಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Story first published: Friday, May 14, 2021, 15:27 [IST]
Other articles published on May 14, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+