Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

15 ವರ್ಷದ ಬಿಹಾರ ಬಾಲಕ ವೈಭವ್ ಸೂರ್ಯವಂಶಿ, ಭವಿಷ್ಯದ ಆಶಾಕಿರಣ

ಬಿಹಾರ ದಶಕಗಳಿಂದ ರಾಜ್ಯವು ಬಡತನ, ವಲಸೆ, ಅನಕ್ಷರತೆ ಮತ್ತು ಹತ್ತು ಹಲವು ಕಾರಣಗಳಿಂದ ಎಲ್ಲರ ಗಮನ ಸೆಳೆದಿತ್ತು. ಆದರೆ ಕಳೆದ ಎರಡು ಐಪಿಎಲ್‌ ಆವೃತ್ತಿಗಳಲ್ಲಿ ಬಿಹಾರದ 15 ವರ್ಷದ ಬಾಲಕ ಐಪಿಎಲ್‌ನಲ್ಲಿ ಆಡಲು ಶುರುಮಾಡಿದಾಗಿನಿಂದಲೂ ರಾಜ್ಯವನ್ನು ನೋಡುವ ದೃಷ್ಟಿ ಬದಲಾಗಿದೆ. ತಮ್ಮ ಬಿರುಸಾದ ಬ್ಯಾಟಿಂಗ್‌ನಿಂದ ಅಭಿಮಾನಿಗಳ ಮನ ಗೆದ್ದಿರುವ ವೈಭವ್ ಸೂರ್ಯವಂಶಿ ಬಿಹಾರಕ್ಕೆ ಕೀರ್ತಿ ತಂದಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೈಭವ್, ಈ ಸೀಸನ್‌ನಲ್ಲಿ ನಂಬಲಾಗದ ಪ್ರದರ್ಶನ ನೀಡಿದರು. ಅವರು ಆಡಿದ ಮೊದಲ ಪೂರ್ತಿ ಸೀಸನ್‌ನಲ್ಲಿ 5 ಪ್ರಮುಖ ಐಪಿಎಲ್ ಪ್ರಶಸ್ತಿಗಳನ್ನು ಬಾಚಿಕೊಂಡ ಮೊದಲ ಆಟಗಾರ ಎಂಬ ಇತಿಹಾಸ ಸೃಷ್ಟಿಸಿದರು.

Vaibhav Sooryavanshi

ವೈಭವ್ ಸೂರ್ಯವಂಶಿ ಅವರಿಗೆ ಯಶಸ್ಸು ಒಂದೇ ದಿನ ಸಿಕಿದ್ದಲ್ಲ. ಇದರ ಹಿಂದೆ ವರ್ಷದ ಪರಿಶ್ರಮ ಇದೆ. ಇವರು 12 ವರ್ಷವಯಸ್ಸಿನಲ್ಲೇ ಬಿಹಾರ ರಾಜ್ಯದ ಪರ ಮೊದಲ ರಣಜಿ ಕ್ರಿಕೆಟ್‌ ಆಡಿ ಗಮನಸೆಳೆದರು. 14 ವರ್ಷದ ಚಿಕ್ಕ ವಯಸ್ಸಿನಲ್ಲೇ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅಲ್ಲದೆ ವೇಗದ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರು ಅಂಡರ್‌ 19 ವಿಶ್ವಕಪ್‌ನಲ್ಲೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ವೈಭವ್, ಬಿಹಾರದ ಕಷ್ಟಪಟ್ಟು ದುಡಿಯುವ ಪ್ರತಿಯೊಬ್ಬ ಪೋಷಕರು ಮತ್ತು ಮಕ್ಕಳ ಕನಸಿಗೆ ರೆಕ್ಕೆ ನೀಡಿದ್ದಾರೆ.

ಐಪಿಎಲ್‌ನಲ್ಲಿ ಅಬ್ಬರ

ಈ ಬಾರಿಯ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ವೈಭವ್‌ 16 ಇನ್ನಿಂಗ್ಸ್‌ಗಳಲ್ಲಿ 237.31 ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಬಾರಿಸಿದರು. ಈ ಮೂಲಕ ಅತಿ ಹೆಚ್ಚು ಸ್ಟ್ರೈಕ್‌ ರೇಟ್‌ ಹೊಂದಿರುವ ಆಟಗಾರ ಪ್ರಶಸ್ತಿಯನ್ನು ಸಹ ಪಡೆದರು. ಇನ್ನು ಐಫಿಎಲ್‌ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಎನಿಸಿಕೊಂಡರು.

ವೈಭವ್ ಸೀಸನ್‌ನಲ್ಲಿ ದಾಖಲೆಯ 72 ಸಿಕ್ಸರ್ ಸಿಡಿಸಿ 'ಸೂಪರ್ ಸಿಕ್ಸರ್ಸ್ ಪ್ರಶಸ್ತಿ ಪಡೆದರು. ಇಷ್ಟೇ ಅಲ್ಲದೆ ಈ ಆವೃತ್ತಿಯ ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ಭವಿಷ್ಯದ ಭರವಸೆ

ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನದ ಫಲವಾಗಿ ವೈಭವ್‌ ಅವರಿಗೆ ಭಾರತ 'ಎ' ತಂಡದಲ್ಲಿ ಸ್ಥಾನ ಲಭಿಸಿದೆ. ಇವರು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಯೌವನದ ಮಿಂಚು ಹಾಗೂ ವಯಸ್ಸಿಗಿಂತ ದೊಡ್ಡ ಸಾಧನೆ ಮಾಡಿರುವ ವೈಭವ್ ಸೂರ್ಯವಂಶಿ ಭಾರತದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಕನಸು ಹೊಂದಿದ್ದಾರೆ.

Story first published: Monday, June 1, 2026, 17:25 [IST]
Other articles published on Jun 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+