ಬಾಲ ಕಾರ್ಮಿಕ ಕಾಯ್ದೆ ಉಲ್ಲಂಘನೆ ಆರೋಪ: 15 ವರ್ಷ ವೈಭವ್ ಸೂರ್ಯವಂಶಿ ವಿರುದ್ಧ ದೂರಿಗೆ ಆಗ್ರಹ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಲೀಗ್ ಹಂತ ಕೊನೆಯ ಹಂತದತ್ತ ಮುಖ ಮಾಡಿದೆ. ಈ ಲೀಗ್‌ನಲ್ಲಿ ಯುವ ಆಟಗಾರರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಈ ಸಾಲಿನಲ್ಲಿ ಎದ್ದು ಕಾಣುವ ಆಟಗಾರ ವೈಭವ್ ಸೂರ್ಯವಂಶಿ. ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ವೈಭವ್ ಸೂರ್ಯವಂಶಿ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದ ಅಬ್ಬರಿಸುತ್ತಿದ್ದಾರೆ. ಈಗ ಇವರು ಗಂಭೀರ ಸಂಕಷ್ಟದಲ್ಲಿರುವಂತೆ ತೋರುತ್ತಿದೆ. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ವಿರುದ್ಧ ಎಫ್‌ಐಆರ್ ಹಾಕುವುದಾಗಿ ಬೆದರಿಕೆ ಬಂದಿದೆ.
ಕರ್ನಾಟಕದ ಸಾಮಾಜಿಕ ಕಾರ್ಯಕರ್ತ ಸಿಎಂ ಶಿವಕುಮಾರ್ ನಾಯಕ್, ವೈಭವ್ ಸೂರ್ಯವಂಶಿ ವಿರುದ್ಧ ಎಫ್‌ಐಆರ್ (FIR) ದಾಖಲಿಸುವಂತೆ ಒತ್ತಾಯಿಸಿದ್ದಾರೆ. 15 ವರ್ಷದ ಅಪ್ರಾಪ್ತ ಬಾಲಕನನ್ನು ವಾಣಿಜ್ಯ ಉದ್ದೇಶದ ಇಂತಹ ದೊಡ್ಡ ಕ್ರಿಕೆಟ್ ಟೂರ್ನಿಯಲ್ಲಿ ಆಡಲು ಬಿಡುವುದು 'ಬಾಲ ಕಾರ್ಮಿಕ' ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂಬುದು ಶಿವಕುಮಾರ್ ಅವರ ವಾದವಾಗಿದೆ.

15 ವರ್ಷದ ಬಾಲಕ ಇಷ್ಟು ದೊಡ್ಡ ವಾಣಿಜ್ಯ ಉದ್ದೇಶವನ್ನು ಹೊಂದಿರುವ ಲೀಗ್‌ನಲ್ಲಿ ಹೇಗೆ ಆಡಬಹುದು? ವೈಭವ್ ಈ ವಯಸ್ಸಿನಲ್ಲಿ ತನ್ನ ಅಧ್ಯಯನದತ್ತ ಗಮನ ಹರಿಸಬೇಕು ಎಂಬುದು ಶಿವಕುಮಾರ್ ಅವರ ವಾದವಾಗಿದೆ. ಅಪ್ರಾಪ್ತರನ್ನು ವಾಣಿಜ್ಯ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದು ಅವರ ಶೋಷಣೆಯಂತಾಗುತ್ತದೆ ಎಂದು ದೂರುದಾರರ ವಾದವಾಗಿದೆ. ಈ ಹೇಳಿಕೆಗೆ ಈಗ ಸಾಮಾಜಿಕ ತಾಣದಲ್ಲಿ ವ್ಯಾಪಕವಾಗಿ ಟೀಕೆಗಳು ಕೇಳಿ ಬರುತ್ತಿವೆ.
ಶಿವಕುಮಾರ್ ಅವರು ಮಕ್ಕಳ ಹಕ್ಕುಗಳು ಮತ್ತು ಬಾಲ ಕಾರ್ಮಿಕ ಕಾನೂನು ಉಲ್ಲಂಘಿಸಿದ್ದಕ್ಕಾಗಿ ರಾಜಸ್ಥಾನ್ ರಾಯಲ್ಸ್ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ದೂರು ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ. ಸಚಿನ್ ತೆಂಡೂಲ್ಕರ್ ಮತ್ತು ಪಾರ್ಥಿವ್ ಪಟೇಲ್ ಅವರಂತಹ ಆಟಗಾರರು ಕೂಡ ಅತಿ ಚಿಕ್ಕ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈಗ ಏಕೆ ವೈಭವ್ ಬಗ್ಗೆ ವಿವಾದ ಏಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ.
ಐಸಿಸಿ ನಿಯಮ ಏನು ಹೇಳುತ್ತದೆ?
ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲು ಆಟಗಾರನಿಗೆ ಕನಿಷ್ಠ 15 ವರ್ಷದ ವಯಸ್ಸಾಗಬೇಕು ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 2020ರಲ್ಲಿ ನಿಯಮ ತಂದಿದೆ. ವೈಭವ್ ಅವರಿಗೆ ಈಗ 15 ವರ್ಷ ಆಗಿದ್ದರಿಂದ ಈ ನಿಯಮ ಅವರಿಗೆ ಅನ್ವಯಿಸುವುದಿಲ್ಲ.
ವೈಭವ್ ಸೂರ್ಯವಂಶಿ ಸಾಧನೆ
ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡಿದ 10 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 404 ರನ್ ಕಲೆ ಹಾಕಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 237 ಆಗಿದೆ. ಇನ್ನು 19ನೇ ಆವೃತ್ತಿಯಲ್ಲಿ ಇವರು 1 ಶತಕ, 2 ಅರ್ಧಶತಕ ಬಾರಿಸಿದ್ದಾರೆ. ಈ ವೇಳೆ 35 ಬೌಂಡರಿ, 37 ಸಿಕ್ಸರ್ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications