Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನಾನಿನ್ನೂ ಯುವಕನೇ, ನನಗೇನು ವಯಸ್ಸಾಗಿಲ್ಲ: ಯಶಸ್ವಿ ಜೈಸ್ವಾಲ್ ವೈರಲ್ ಪ್ರತಿಕ್ರಿಯೆ ಹಿಂದಿರುವ ಕಾರಣವಿದು

ರಾಜಸ್ಥಾನ್ ರಾಯಲ್ಸ್ ಈ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಯುವ ಆಟಗಾರರು ಬ್ಯಾಟಿಂಗ್‌ನಲ್ಲಿ ಬಲ ತುಂಬಿದರೆ, ಅನುಭವಿ ಬೌಲರ್‌ಗಳು ತಂಡದ ಜಯದಲ್ಲಿ ಮಿಂಚುತ್ತಿದ್ದಾರೆ. ಆರ್‌ಆರ್‌ ಬ್ಯಾಟಿಂಗ್‌ಗೆ ತಮ್ಮದೇ ಕಾಣಿಕೆ ನೀಡುತ್ತಿರುವ ಆರಂಭಿಕ ಆಟಗಾರರು ಎಲ್ಲರ ಗಮನ ಸೆಳೆದಿದ್ದಾರೆ. ಈ ವೇಳೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಹಾಗೂ ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಈ ಲೀಗ್‌ನಲ್ಲಿ ವೈಭವ್ ಮೈಚಳಿ ಬಿಟ್ಟು ಬ್ಯಾಟ್ ಮಾಡುತ್ತಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಈ ಪೋರ ಎಲ್ಲರ ನೆಚ್ಚಿನ ಆಟಗಾರ. ವೈಭವ್ ಈ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಹೀಗಾಗಿ ಇವರ ಮುಡಿಗೆ ಆರೆಂಜ್‌ ಕ್ಯಾಪ್ ಸಹ ಸಂದಿದೆ. ಮಂಗಳವಾರ ನಡೆದ ಪಂದ್ಯದ ಬಳಿಕ ಯಶಸ್ವಿ ಜೈಸ್ವಾಲ್‌, ವೈಭವ್ ಸೂರ್ಯವಂಶಿ ಅವರಿಗೆ ಆರೆಂಜ್ ಕ್ಯಾಪ್ ಹಸ್ತಾಂತರ ಮಾಡಿದರು. ಈ ವೇಳೆ ನಿರೂಪಕರು ಯಶಸ್ವಿ ಜೈಸ್ವಾಲ್‌ಗೆ ಆ ಒಂದು ಪ್ರಶ್ನೆ ಕೇಳಿದರು. ಆಗಲೇ ಯಶಸ್ವಿ ನನಗಿನ್ನೂ ವಯಸ್ಸಾಗಿಲ್ಲ ಎಂದು ಹೇಳಿದರು.

Vaibhav

ವೈಭವ್ ಸೂರ್ಯವಂಶಿ ಅವರಂತಹ ಯುವ ಆಟಗಾರನ ಜೊತೆ ಬ್ಯಾಟಿಂಗ್ ಮಾಡುವಾಗ, ತಂಡದ ಹಿರಿಯ ಆಟಗಾರನಾಗಿ ಹೇಗೆ ಅನಿಸುತ್ತದೆ ಎಂದು ನಿರೂಪಕರು ಪ್ರಶ್ನೆ ಕೇಳಿದರು. ನಾನು ಏನು ವಯಸ್ಸಾದವನು ಅಲ್ಲ. ನಾನು ಸಹ ಯುವಕನೇ. ಆದರೆ ನನಗಿಂತ ವೈಭವ್ ಯುವಕ ಎಂಬುದನ್ನು ಅವರು ತಿಳಿಸಿದರು. ನಿಜಕ್ಕೂ ಈ ಯುವ ಆಟಗಾರನ ಜೊತೆ ಬ್ಯಾಟಿಂಗ್ ಮಾಡಲು ಖುಷಿ ಆಗುತ್ತದೆ. ಆತ ಅದ್ಭುತವಾಗಿ ಆಡುತ್ತಾನೆ. ನಾನು ಅವನು ಬಾರಿಸುವ ಹೊಡೆತಗಳನ್ನು ಇನ್ನೊಂದು ತುದಿಯಿಂದ ನೋಡಿ ಖುಷಿ ಪಡುತ್ತೇನೆ ಎಂದಿದ್ದಾರೆ.

ಪಂದ್ಯದ ಫಲಿತಾಂಶ

ಮಂಗಳವಾರ ನ್ಯೂ ಚಂಡೀಗಢ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಅಮೋಘ ಪ್ರದರ್ಶನ ನೀಡಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು. ಪಂಜಾಬ್ ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲು ಕಂಡಿತು. ರಾಯಲ್ಸ್‌ 6 ವಿಕೆಟ್‌ಗಳಿಂದ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆದಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 222 ರನ್‌ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಂಜಾಬ್‌ 19.2 ಓವರ್‌ಗಳಲ್ಲಿ 4 ವಿಕೆಟ್‌ಗೆ 228 ರನ್‌ ಸೇರಿಸಿ ಜಯ ಸಾಧಿಸಿತು.

Story first published: Wednesday, April 29, 2026, 13:03 [IST]
Other articles published on Apr 29, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+