ಐರ್ಲೆಂಡ್‌ನಲ್ಲಿ ವೈಭವ್ ಸೂರ್ಯವಂಶಿ ಕ್ರೇಜ್; ಟಿಕೆಟ್‌ಗಾಗಿ ಮುಗಿಬಿದ್ದ ಕ್ರಿಕೆಟ್ ಪ್ರೇಮಿಗಳು
ಭಾರತ ಹಾಗೂ ಐರ್ಲೆಂಡ್ ವಿರುದ್ಧದ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಈ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರ 15 ವರ್ಷ ವೈಭವ್ ಸೂರ್ಯವಂಶಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಟೀಮ್ ಇಂಡಿಯಾವನ್ನು ಐರ್ಲೆಂಡ್ ಪ್ರವಾಸದಲ್ಲಿ ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ. ಈ ಸರಣಿಯ ಮೊದಲ ಪಂದ್ಯಕ್ಕೆ ಸಕಲ ಸಿದ್ಧತೆಗಳು ನಡೆದಿವೆ. ಈಗಾಗಲೇ ಟೀಮ್ ಇಂಡಿಯಾ ಬೆಲ್‌ಫಾಸ್ಟ್‌ಗೆ ತಲುಪಿದೆ. ಈ ವೇಳೆ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಕಣ್ಣು ತುಂಬಿಕೊಳ್ಳಲು ಐರ್ಲೆಂಡ್ ಅಷ್ಟೇ ಅಲ್ಲದೆ, ಅಕ್ಕಪಕ್ಕದ ದೇಶಗಳ ಜನರು ಸಹ ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ ಈ ಪಂದ್ಯದ ಟಿಕೆಟ್ ಬೇಡಿಕೆ ಹೆಚ್ಚಾಗುತ್ತಲೆ ಇದೆ.

ಭಾರತ ಮತ್ತು ಐರ್ಲೆಂಡ್ ನಡುವಿನ ಎರಡು ಪಂದ್ಯಗಳ ಸರಣಿಯ ಬಗ್ಗೆ, ಐರಿಶ್ ಕ್ರಿಕೆಟಿಗ ಎಂ.ವಿ. ನರಸಿಂಹ ರಾವ್ ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ. ಅನೇಕ ಯುರೋಪಿಯನ್ ದೇಶಗಳ ಅಭಿಮಾನಿಗಳು ಬೆಲ್‌ಫಾಸ್ಟ್‌ಗೆ ಪ್ರಯಾಣಿಸಲು ಉತ್ಸುಕರಾಗಿದ್ದಾರೆ. ಸ್ಟೋರ್‌ಮಾಂಟ್ ಕ್ರೀಡಾಂಗಣದ ಸೀಮಿತ ಸಾಮರ್ಥ್ಯದಿಂದಾಗಿ, ಈ ಸರಣಿಯ ಪಂದ್ಯಗಳಿಗೆ ಟಿಕೆಟ್‌ಗಳಿಗೆ ಭಾರಿ ಬೇಡಿಕೆಯಿದೆ. ಈ ಪಂದ್ಯವನ್ನು ನೋಡಲು ಐರ್ಲೆಂಡ್ ಮಾತ್ರವಲ್ಲದೆ ಯುರೋಪಿನ ಇತರ ನಗರಗಳ ಅಭಿಮಾನಿಗಳು ಉತ್ಸುಕರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಟಿಕೆಟ್‌ಗಳಿ ಭಾರೀ ಬೇಡಿಕೆ
ಈ ವೇಳೆ ಅಭಿಮಾನಿಗಳನ್ನು ನಿಯೋಜಿಸುವುದು ಸಂಘಟಕರಿಗೆ ದೊಡ್ಡ ಸವಾಲಾಗಲಿದೆ. ವೈಭವ್ ಸೂರ್ಯವಂಶಿ ಆಟವನ್ನು ನೋಡಲು ಎಲ್ಲರೂ ಬಯಸುತ್ತಿದ್ದು, ಇಲ್ಲಿನ ಅಭಿಮಾನಿಗಳಲ್ಲಿ ಅಪಾರ ಕ್ರೇಜ್ ಇದೆ. ಹೆಚ್ಚಿನ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಲು ಕ್ರೀಡಾಂಗಣದ ಸಾಮರ್ಥ್ಯವನ್ನು 4,200 ರಿಂದ 7,000 ಕ್ಕೆ ಹೆಚ್ಚಿಸಲು ತಾತ್ಕಾಲಿಕ ಸ್ಟ್ಯಾಂಡ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿದು ಬಂದಿದೆ ಐರಿಶ್ ಕ್ರಿಕೆಟಿಗ ಎಂ.ವಿ. ನರಸಿಂಹ ರಾವ್ ಹೇಳಿದ್ದಾರೆ.
ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾದ ಹೆಡ್-ಟು-ಹೆಡ್ ದಾಖಲೆ ಬಲಾಢ್ಯವಾಗಿದೆ. ಇಲ್ಲಿಯವರೆಗೆ ಎರಡೂ ತಂಡಗಳ ನಡುವೆ ಒಟ್ಟು ಎಂಟು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿದ್ದು, ಟೀಮ್ ಇಂಡಿಯಾ ಎಲ್ಲ ಪಂದ್ಯಗಳನ್ನು ಗೆದ್ದಿದೆ. ಇನ್ನು ಐರ್ಲೆಂಡ್‌ನಲ್ಲಿ ಆಡಿದ ಆರೂ ಟಿ20 ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications