ವೈಭವ್ ಸೂರ್ಯವಂಶಿ ಅವರ ಜೆರ್ಸಿ ನಂಬರ್ ರಿವೀಲ್; ಟೀಮ್ ಇಂಡಿಯಾ ಜೆರ್ಸಿ ನೋಡಿ ಯುವ ಬ್ಯಾಟರ್ ಭಾವುಕ
ಐಪಿಎಲ್‌ನಲ್ಲಿ ಅಬ್ಬರಿಸಿದ ಬಳಿಕ ಟೀಮ್ ಇಂಡಿಯಾದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರು ಈಗ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಆರ್ಭಟಿಸಿದ್ದ ವೈಭವ್ ಸೂರ್ಯವಂಶಿ, ಈಗ ರಾಷ್ಟ್ರೀಯ ತಂಡದ ಪರ ಆಡಲು ಸಿದ್ಧರಾಗಿದ್ದಾರೆ. ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ವೈಭವ್ ಅಬ್ಬರಿಸಲು ಸಜ್ಜಾಗಿದ್ದಾರೆ.
ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾದ ವೈಭವ್ ಅವರು ಭಾರತೀಯ ತಂಡದ ಜೆರ್ಸಿಯನ್ನು ಸ್ವೀಕರಿಸಿದರು. ಟೀಮ್ ಇಂಡಿಯಾದ ಜೆರ್ಸಿಯನ್ನು ಸ್ವೀಕರಿಸಿದ ಬಳಿಕ ವೈಭವ್ ಭಾವುಕರಾದರು. ಈ ಸಂತೋಷದ ಕ್ಷಣವನ್ನು ವಿವರಿಸಲು ನನ್ನ ಬಳಿ ಪದಗಳಿಲ್ಲ ಎಂದು ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪೋಸ್ಟ್ ಮಾಡಿದೆ.

ಮಂಗಳವಾರ (ಜೂನ್ 23 ರಂದು), ಬಿಸಿಸಿಐ ವೈಭವ್ ಸೂರ್ಯವಂಶಿ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಭಾರತೀಯ ಟಿ-ಶರ್ಟ್ ಅವರ ಹೋಟೆಲ್ ಕೋಣೆಗೆ ಕನ್ನಡಿಗ ರಘು ತಂದು ಕೊಟ್ಟರು. ರಘು ಅವರನ್ನು ನೋಡಿದ ಬಳಿಕ ವೈಭವ್ ಕಾಲಿಗೆ ಮುಗಿದು ನಮಸ್ಕರಿಸಿದರು. ಅಲ್ಲದೆ ಅವರು ತಂದಿರುವ ಬಾಕ್ಸ್ ನೋಡಿ ಖುಷಿ ಪಟ್ಟರು.
ಜೆರ್ಸಿ ನೋಡಿ ಬಾವುಕರಾದ ವೈಭವ್
ರಘು ನೀಡಿದ್ದ ಜೆರ್ಸಿಯ ಬಾಕ್ಸ್‌ನ್ನು ವೈಭವ್ ಸೂರ್ಯವಂಶಿ ತಮ್ಮ ಕೋಣೆಗೆ ತೆಗೆದುಕೊಂಡು ಹೋಗಿ ಬಿಚ್ಚುತ್ತಾರೆ. ಜೆರ್ಸಿಯನ್ನು ಅವರಿಗೆ ನೀಡಿದ ತಕ್ಷಣ, ಅವರ ಸಂತೋಷ ದ್ವಿಗುಣಗೊಳ್ಳುತ್ತದೆ. ಇದೇ ಕ್ಷಣಕ್ಕಾಗಿ ನಾನು ಕಷ್ಟ ಪಟ್ಟಿದ್ದೇನೆ ಎಂದು ವಿವರಿಸಿದ್ದಾರೆ. ಈ 48 ಸೆಕೆಂಡುಗಳ ವೀಡಿಯೊ ಪ್ರತಿಯೊಬ್ಬ ಭಾರತೀಯ ಕ್ರಿಕೆಟ್ ಅಭಿಮಾನಿಯ ಹೃದಯವನ್ನು ಕಲುಕುತ್ತದೆ.
ಜೆರ್ಸಿ ಪಡೆದ ನಂತರ, ವೈಭವ್ ಸೂರ್ಯವಂಶಿ ತಮ್ಮ ಹೃದಯಪೂರ್ವಕ ಭಾವನೆಗಳನ್ನು ಹಂಚಿಕೊಂಡರು. ನನ್ನ ಬ್ಯಾಟ್ ಎತ್ತಿಕೊಂಡು ಮೈದಾನಕ್ಕೆ ಹೋಗುವುದು ಇಂದು ನನಸಾಗಿದೆ. ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅದು ಕನಸಿನಂತೆ ಭಾಸವಾಗುತ್ತಿದೆ. ಜೆರ್ಸಿಯನ್ನು ನೋಡಿದ ನಂತರ ನನಗೆ ತುಂಬಾ ಸಂತೋಷವಾಯಿತು, ನನಗೆ ಬೇರೇನೂ ಅರ್ಥವಾಗಲಿಲ್ಲ. ಕೆಲವೊಮ್ಮೆ ನೀವು ನಿರೀಕ್ಷಿಸದಿರುವುದು ನಿಮಗೆ ಸಂಭವಿಸುತ್ತದೆ. ನನಗೆ ಇದೇ ರೀತಿಯದ್ದೇನೋ ಆಗುತ್ತಿದೆ ಎಂದು ತಿಳಿಸಿದರು.
ವೈಭವ್ ಜೆರ್ಸಿ ನಂಬರ್ ಏನು?
ಈಗ ಬಿಸಿಸಿಐ ಬಿಡುಗಡೆ ಮಾಡಲಾದ ವಿಡಿಯೋದಲ್ಲಿ ವೈಭವ್ ಸೂರ್ಯವಂಶಿ ಅವರ ಜೆರ್ಸಿ ನಂಬರ್ 03 ಎಂದು ಮುದ್ರಿತವಾಗಿದೆ.

ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿ ನಿಂತಿದ್ದಾರೆ. ಜೂನ್ 26 ರಂದು ಐರ್ಲೆಂಡ್ ವಿರುದ್ಧ ಇವರು ಪದಾರ್ಪಣೆ ಮಾಡಿದರೇ, ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅತ್ಯಂತ ಕಿರಿಯ ಆಟಗಾರರಾಗುತ್ತಾರೆ. ಪ್ರಸ್ತುತ, ಈ ದಾಖಲೆಯನ್ನು ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಸಚಿನ್ 16 ವರ್ಷ 205 ದಿನಗಳಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದರು. .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications