ಐಪಿಎಲ್ ಬಳಿಕ ವೈಭವ್ ಸೂರ್ಯವಂಶಿ ಮತ್ತೆ ಕಣಕ್ಕೆ: ಮತ್ತೆಲ್ಲಿ ಸೂಪರ್ ಕಿಡ್ ಆಟವನ್ನು ಕಣ್ತುಂಬಿಕೊಳ್ಳಬಹುದು?
ಐಪಿಎಲ್ ಕಳೆದು ದಿನಗಳೇ ಕಳೆದಿವೆ. ಈಗ ಎಲ್ಲ ಆಟಗಾರರು ತಮ್ಮ ತಂಡಗಳನ್ನು ಸೇರಿಕೊಂಡಿದ್ದು ಅಭ್ಯಾಸವನ್ನು ಆರಂಭಿಸಿದ್ದಾರೆ. ಇದೇ ವೇಳೆ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ಉತ್ತರ ಇಲ್ಲಿದೆ.
ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸೂಪರ್ ಕಿಡ್ ವೈಭವ್ ಸೂರ್ಯವಂಶಿ ಐದು ಪ್ರಶಸ್ತಿಗಳನ್ನು ಪಡೆದು ಬೀಗಿದ್ದರು. ಇವರ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಭಾರತ ಹಿರಿಯರ ತಂಡದಲ್ಲೂ ಸ್ಥಾನ ಲಭಿಸಿತು. ಇವರು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಭಾಗವಾಗಿದ್ದಾರೆ. ಇದಕ್ಕೂ ಮೊದಲು ಇವರು ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಸರಣಿಯಲ್ಲಿ ಭಾರತ "ಎ" ತಂಡದ ಪರ ಕಣಕ್ಕೆ ಇಳಿಯಲಿದ್ದಾರೆ.

ಭಾರತ 'ಎ' ಹಾಗೂ ಶ್ರೀಲಂಕಾ ಎ, ಅಫ್ಘಾನಿಸ್ತಾನ ಎ ನಡುವಣ ತ್ರಿಕೋನ ಸರಣಿ ಜೂನ್ 9 ರಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಭಾರತ ಎ ಹಾಗೂ ಶ್ರೀಲಂಕಾ ಎ ತಂಡಗಳು ಕಾದಾಟ ನಡೆಸಲಿವೆ.
ಭಾರತ 'ಎ' ಸಂಪೂರ್ಣ ವೇಳಾಪಟ್ಟಿ
ಜೂನ್ 9, ಶ್ರೀಲಂಕಾ 'ಎ' ವಿರುದ್ಧ, ಬೆಳಗ್ಗೆ 11 ಗಂಟೆಗೆ
ಜೂನ್ 11, ಅಫ್ಘಾನಿಸ್ತಾನ್ 'ಎ' ವಿರುದ್ಧ, ಬೆಳಗ್ಗೆ 11 ಗಂಟೆಗೆ
ಜೂನ್ 15, ಶ್ರೀಲಂಕಾ 'ಎ' ವಿರುದ್ಧ, , ಬೆಳಗ್ಗೆ 11 ಗಂಟೆಗೆ
ಜೂನ್ 17, ಅಫ್ಘಾನಿಸ್ತಾನ್ 'ಎ' ವಿರುದ್ಧ, ಬೆಳಗ್ಗೆ 11 ಗಂಟೆಗೆ
ಭಾರತ ತಂಡದಲ್ಲಿ ಯಾವೆಲ್ಲಾ ಆಟಗಾರರಿಗೆ ಸ್ಥಾನ?
ತಿಲಕ್ ವರ್ಮಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ವೈಭವ್ ಸೂರ್ಯವಂಶಿ, ಪ್ರಿಯಾಂಶ್ ಆರ್ಯ, ಆಯುಷ್ ಬದೋನಿ, ನಿಶಾಂತ್ ಸಿಂಧು, ಸೂರ್ಯಾಂಶ್ ಶಡ್ಗೆ, ಪ್ರಭ್‌ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ವಿಪ್ರಜ್ ನಿಗಮ್, ಯಶ್ ಠಾಕೂರ್, ಯುದ್ವೀರ್ ಸಿಂಗ್, ಅನ್ಶುಲ್ ಕಾಂಬೋಜ್, ಅರ್ಶದ್ ಖಾನ್ ಮತ್ತು ಅನುಕೂಲ್ ರಾಯ್.
ಇದೇ ಮೊದಲ ಬಾರಿಗೆ ಭಾರತ 'ಎ' ತಂಡದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಥಾನ ಪಡೆದಿದ್ದು, ಇವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಈ ಪಂದ್ಯವನ್ನು ಭಾರತದಲ್ಲಿ ಎಲ್ಲಿ ವೀಕ್ಷಿಸಬಹುದು?
ಭಾರತ ಎ ಮತ್ತು ಶ್ರೀಲಂಕಾ ಎ ನಡುವಿನ ಪಂದ್ಯವನ್ನು ಸೋನಿ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಸೋನಿ ಸ್ಪೋರ್ಟ್ಸ್ ಚಾನೆಲ್‌ನಲ್ಲೂ ಪಂದ್ಯದ ನೇರ ಪ್ರಸಾರವನ್ನು ಟಿವಿಯಲ್ಲಿ ನೋಡಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications