Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾಕ್ಕೆ ವೈಭವ್ ಸೂರ್ಯವಂಶಿ ಈ ಸರಣಿಯ ಮೂಲಕ ಎಂಟ್ರಿ?

ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸುತ್ತಿರುವ ವೈಭವ್ ಸೂರ್ಯವಂಶಿ. ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಆಧಾರವಾಗಿರುವ ಯುವ ಆಟಗಾರ. ತನ್ನ 14ನೇ ವಯಸ್ಸಿನಲ್ಲೇ ಐಪಿಎಲ್‌ ವೇದಿಕೆಯಲ್ಲಿ ಶತಕ ಬಾರಿಸಿದ್ದ ವೈಭವ್ ಅಬ್ಬರಿಸಿದ್ದಾರೆ. 19ನೇ ಆವೃತ್ತಿಯ ಐಪಿಎಲ್‌ನಲ್ಲೂ ವೈಭವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವುದು ರಾಯಲ್ಸ್‌ಗೆ ಆನೆ ಬಲ ನೀಡಿದೆ. ಈ ಬಾರಿಯ ಐಪಿಎಲ್‌ನಲ್ಲಿ ರಾಯಲ್ಸ್‌ ಅಂಕ ಪಟ್ಟಿಯಲ್ಲಿ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವೈಭವ್ ಸೂರ್ಯವಂಶಿ ಅವರ ಪಾತ್ರ ದೊಡ್ಡದು. ಈಗ ಇವರಿಗೆ 15 ವರ್ಷ ತುಂಬಿದ್ದು ಟೀಮ್ ಇಂಡಿಯಾಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.

ಈಗಾಗಲೇ ಹಲವು ವಯೋಮಿತಿಯ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿರುವ ವೈಭವ್ ರಾಷ್ಟ್ರೀಯ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಇವರಿಗೆ ಈ ಬಾರಿ ಹಿರಿಯ ಭಾರತೀಯ ತಂಡಕ್ಕಾಗಿ ಆಡುವ ಅವಕಾಶ ಸಿಗಬಹುದು. ಇನ್ನು ಕೆಲವೇ ದಿನಗಳಲ್ಲಿ ವೈಭವ್ ಸೂರ್ಯವಂಶಿ ಬ್ಲ್ಯೂ ಜೆರ್ಸಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಇವರು ಟೀಮ್ ಇಂಡಿಯಾ ಜೆರ್ಸಿ ತೊಡುತ್ತಲೇ ಹೊಸ ದಾಖಲೆಯನ್ನು ನಿರ್ಮಿಸಬಹುದು.

Vaibhav Sooryavanshi

ಸದ್ಯ ಭಾರತದಲ್ಲಿ ಐಪಿಎಲ್‌ ಪಂದ್ಯಗಳು ನಡೆಯುತ್ತಿವೆ. ಲೀಗ್‌ ಬಳಿಕ ಭಾರತ ಅಫ್ಘಾನಿಸ್ತಾನ ವಿರುದ್ಧ ಟೆಸ್ಟ್‌ ಹಾಗೂ ಏಕದಿನ ಸರಣಿಯನ್ನು ಆಡಲಿದೆ. ಈ ವೇಳೆ ಯಾವುದೇ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ಇರುವುದಿಲ್ಲ. ಈ ಸರಣಿಯ ಬಳಿಕ ಭಾರತ ತಂಡವು ಐರ್ಲೆಂಡ್ ಪ್ರವಾಸ ಮಾಡಲಿದೆ. ಈ ಸರಣಿಗಾಗಿ ಆಯ್ಕೆದಾರರು ವೈಭವ್ ಸೂರ್ಯವಂಶಿ ಜೊತೆಗೆ ಹಲವಾರು ಇತರ ಆಟಗಾರರ ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದಾರೆ.

ಈ ಸರಣಿಯಲ್ಲಿ ವೈಭವ್‌ಗೆ ಅವಕಾಶ ಸಾಧ್ಯತೆ

ಐರ್ಲೆಂಡ್ ಪ್ರವಾಸದಲ್ಲಿ ಭಾರತದ ತಂಡ ಎರಡು ಟಿ20 ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಭಾರತ ತಂಡಕ್ಕೆ ಸೇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಈ ಬಗ್ಗೆ ವರದಿಯನ್ನು ಮಾಡಿದೆ. ಬಿಸಿಸಿಐ ಮೂಲಗಳು ವೈಭವ್ ಸೂರ್ಯವಂಶಿ ಐರ್ಲೆಂಡ್ ಪ್ರವಾಸಕ್ಕಾಗಿ ಆಯ್ಕೆ ಆಗಬಹುದು ಎಂದು ತಿಳಿಸಿದೆ.

Vaibhav Sooryavanshi

ಮುಂದಿನ ಒಂದು ವರ್ಷದಲ್ಲಿ ಟಿ20 ಸ್ವರೂಪದಲ್ಲಿ ಯಾವುದೇ ಐಸಿಸಿ ಪಂದ್ಯಗಳು ನಡೆಯುತ್ತಿಲ್ಲ. ಹೀಗಾಗಿ ಬಿಸಿಸಿಐ 2027ರ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ಪ್ಲ್ಯಾನ್ ಮಾಡುತ್ತಿದೆ. ಮುಂಬರುವ ಸರಣಿಯಲ್ಲಿ ಅನುಭವಿ ಹಾಗೂ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

ಸೂರ್ಯಕುಮಾರ್ ಯಾದವ್ ಪ್ರಸ್ತುತ ಭಾರತದ ಟಿ20 ತಂಡದ ನಾಯಕರಾಗಿದ್ದಾರೆ. ಇವರಿಗೆ ಐರ್ಲೆಂಡ್‌ ಪ್ರವಾಸದಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಸೂರ್ಯ ಅನುಪಸ್ಥಿತಿಯಲ್ಲಿ ಯುವ ಆಟಗಾರನಿಗೆ ತಂಡದ ಚುಕ್ಕಾಣಿ ನೀಡುವ ಸಾಧ್ಯತೆ ಇದೆ. ಈ ಪಟ್ಟದ ಮೇಲೆ ವೈಭವ್ ಸೂರ್ಯವಂಶಿ ಸಹ ಕಣ್ಣು ನೆಟ್ಟಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರೆ, ಅವರು ಭಾರತಕ್ಕಾಗಿ ಆಡುವ ಅತ್ಯಂತ ಕಿರಿಯ ಆಟಗಾರರಾಗುತ್ತಾರೆ.

Story first published: Tuesday, April 14, 2026, 10:55 [IST]
Other articles published on Apr 14, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+