For Quick Alerts
ALLOW NOTIFICATIONS  
For Daily Alerts
 

ವಿರಾಟ್‌, ರೋಹಿತ್, ಸೂರ್ಯ ಮಾಡದ ಸಾಧನೆ ಮಾಡಿದ ವೈಭವ್ ಸೂರ್ಯವಂಶಿ

ಪ್ರಸಕ್ತ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ 15 ವರ್ಷ ವೈಭವ್ ಸೂರ್ಯವಂಶಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಇತಿಹಾಸ ನಿರ್ಮಿಸಿದ್ದಾರೆ. ಇವರು ಬುಧವಾರ ನಡೆದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟದೇ ಇದ್ದರೂ ಸಹ ದೊಡ್ಡ ದಾಖಲೆ ಬರೆದಿದ್ದಾರೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯದಲ್ಲಿ ವೈಭವ್ 8 ರನ್‌ ಬಾರಿಸಿ ಔಟ್ ಆದರು. ಈ ಚಿಕ್ಕ ಇನಿಂಗ್ಸ್‌ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ದಿಗ್ಗಜ ಆಟಗಾರನ ದಾಖಲೆಯನ್ನು ಅಳಿಸಿ ಹಾಕಿದರು.

ಈ ಪಂದ್ಯದಲ್ಲಿ 8 ರನ್ ಸಿಡಿಸುವ ಮೂಲಕ ವೈಭವ್ ಯಾವೊಬ್ಬ ಬ್ಯಾಟರ್ ಮಾಡದ ದಾಖಲೆಯನ್ನು ನಿರ್ಮಿಸಿದರು. ಇವರು ಐಪಿಎಲ್‌ ಇತಿಹಾಸದಲ್ಲಿ 250ಕ್ಕೂ ಕಡಿಮೆ ಎಸೆತದಲ್ಲಿ 500ಕ್ಕೂ ಹೆಚ್ಚು ರನ್ ಬಾರಿಸಿದ ಮೊದಲ ಬ್ಯಾಟರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡರು. ವೈಭವ್ ಸೂರ್ಯವಂಶಿ 227 ಎಸೆತಗಳಲ್ಲಿ 500 ರನ್‌ ಮಾರ್ಕ್ ದಾಟಿದರು. ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಎರಡು ರನ್ ಗಳಿಸಿದ ನಂತರ ಸೂರ್ಯವಂಶಿ, ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆಯನ್ನು ಮುರಿದರು.

Vaibhav Sooryavanshi

ಈ ದಾಖಲೆ ಈ ಮೊದಲು ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಹೆಸರಿನಲ್ಲಿತ್ತು. ಇವರು 260 ಎಸೆತಗಳಲ್ಲಿ 500 ರನ್ ಸಿಡಿಸಿದ್ದರು. ಈ ಪಟ್ಟಿಯಲ್ಲಿ ಪ್ರಿಯಾಂಶ್ ಆರ್ಯ, ವೀರೇಂದ್ರ ಸೆಹ್ವಾಗ್‌ ಇಬ್ಬರೂ 280 ಎಸೆತಗಳಲ್ಲಿ ಈ ದಾಖಲೆ ನಿರ್ಮಿಸಿದ್ದರು. ಇನ್ನು ನಮನ್ ಧೀರ್ 283 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದರು.

ವೈಭವ್ ಸೂರ್ಯವಂಶಿ ಸಾಧನೆ

ವೈಭವ್ ಸೂರ್ಯವಂಶಿ ಅವರು 18ನೇ ಆವೃತ್ತಿ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದರು. ಇವರು ಹಿಂದಿನ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ 35 ಎಸೆಗಳಲ್ಲಿ ಶತಕ ಬಾರಿಸಿದ್ದರು. ಅಲ್ಲದೆ ಚೊಚ್ಚಲ ಆವೃತ್ತಿಯಲ್ಲಿ 252 ರನ್ ಗಳಿಸಿದ್ದರು. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 206.56 ಆಗಿತ್ತು. ತಮ್ಮ ಎರಡನೇ ಆವೃತ್ತಿಯಲ್ಲಿ ವೈಭವ್ ತಮ್ಮ ಪ್ರದರ್ಶನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಈ ಆವೃತ್ತಿಯಲ್ಲಿ ವೈಭವ್ 240ರ ಸ್ಟ್ರೈಕ್ ರೇಟ್‌ನಲ್ಲಿ ರನ್‌ ಕಲೆ ಹಾಕಿದ್ದಾರೆ. ಕೇವಲ 15 ವರ್ಷ ಯುವ ಆಟಗಾರನ ಬ್ಯಾಟಿಂಗ್ ಕಂಡು ದಿಗ್ಗಜ ಆಟಗಾರರು ಸಹ ಮನಸೋತಿದ್ದಾರೆ.

ವೈಭವ್‌ ಸೂರ್ಯವಂಶಿ ಅವರು ಈಗಾಗಲೇ ಹಲವು ವಯೋಮಿತಿಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇವರಿಗೆ ಅಂಡರ್ 19 ವಿಶ್ವಕಪ್‌ನಲ್ಲಿ ಆಡುವ ಅವಕಾಶ ಲಭಿಸಿತು. ಈ ವೇಳೆ ಇವರು ತಮ್ಮ ಅಬ್ಬರವನ್ನು ಪ್ರದರ್ಶಿಸಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ತೊಡಿಸುವಲ್ಲಿ ಶ್ರಮಿಸಿದ್ದಾರೆ. ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ಫಲವಾಗಿ ಇವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು. ಈ ಋತುವಿನಲ್ಲಿ, ಸೂರ್ಯವಂಶಿ ಏಳು ಪಂದ್ಯಗಳಲ್ಲಿ 36.29 ಸರಾಸರಿ ಮತ್ತು 220.87 ಸ್ಟ್ರೈಕ್ ರೇಟ್‌ನಲ್ಲಿ 254 ರನ್ ಗಳಿಸಿದ್ದಾರೆ.

Story first published: Wednesday, April 22, 2026, 22:35 [IST]
Other articles published on Apr 22, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+